ಕತ್ರಿನಾ ಕೈಫ್ ಮದುವೆ ಮತ್ತು ಮತ್ತದರ ಸುತ್ತಮುತ್ತಲಿನ ಸಂಗತಿಗಳು ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಎಷ್ಟೇ ಖಾಸಗಿಯಾಗಿ ಮದುವೆಯಾಗಬೇಕೆಂದು ನಟಿ ಶಿರೋಮಣಿ ಕತ್ರಿನಾ ಕೈಫ್ ಬಯಸಿದರೂ ಕತ್ರಿನಾ ಕೈಫ್ ಮದುವೆ ಮತ್ತು ಆಕೆಯ ಕುಟುಂಬದ ಕುರಿತು ಇಂಚಿಂಚೇ ಮಾಹಿತಿ ಹೊರಬೀಳುತ್ತಿದೆ. ಅಂದಹಾಗೆ ಈಗಿನ ಸುದ್ದಿ ಏನೆಂದರೆ ಕತ್ರಿನಾ ಕೈಫ್ಗೆ 6 ಸೋದರಿಯರು ಮತ್ತು ಓರ್ವ ಸೋದರ ಇದ್ದಾರೆ ಎಂಬ ವಿಷಯ ಹೊರಬಿದ್ದಿದೆ.
ಸ್ಟೀಫನಿ, ಕ್ರಿಸ್ಟಿಯನ್, ನತಾಚಾ, ಕತ್ರಿನಾ ಕೈಫ್ ಅವರ ಅಕ್ಕಂದಿರು. ಮೆಲ್ಲಿಸಾ, ಸೋನಿಯಾ ಮತ್ತು ಇಸಾಬೆಲ್ಲಾ ಕತ್ರಿನಾ ಕೈಫ್ ತಂಗಿಯರು. ಸೆಬಾಸ್ಟಿಯನ್ ಕತ್ರಿನಾ ಕೈಫ್ ಸೋದರ. ಇವರೆಲ್ಲೂ ಸಾರ್ವಜನಿಕವಾಗಿ ಈವರೆಗೆ ಎಲ್ಲೂ ಕಾಣಿಸಿಕೊಂಡಿಲ್ಲ. ತಮ್ಮ ಜೀವನವನ್ನು ತಮ್ಮ ಪಾಡಿಗೆ ಬದುಕುತ್ತಿದ್ದಾರೆ. ಹೀಗಾಗಿ ತಾರಾನಟಿ ಕತ್ರಿನಾ ಕೈಫ್ಗೆ ಮೂವರು ಅಕ್ಕಂದಿರು, ಮೂವರು ತಂಗಿಯರು ಮತ್ತು ಓರ್ವ ಸೋದರ ಇರುವುದು ಈವರೆಗೆ ಜಗತ್ತಿನ ಕಣ್ಣಿಗೆ ಬಿದ್ದಿರಲಿಲ್ಲ.
ಸದ್ಯ ಈ ಎಲ್ಲ ಅಕ್ಕತಂಗಿಯರು ಮತ್ತು ಸೋದರರೂ ಕತ್ರಿನಾ ಕೈಫ್ ಮದುವೆಗೆ ವಿಮಾನವೇರಿ ಆಗಮಿಸಿದ್ದಾರೆ. ಮದುವೆಯಲ್ಲಿ ಮಿಂದೇಳಲು ಕುಟುಂಬ ಉತ್ಸುಕವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
View this post on Instagram
View this post on Instagram
View this post on Instagram
ಇದನ್ನೂ ಓದಿ: Bollywood: ವಿಕ್ಕಿ ಕೌಶಲ್ರೊಂದಿಗೆ ಸಪ್ತಪದಿ ತುಳಿಯಲಿರುವ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್
(Katrina Kaif have 6 sisters and 1 brother news goes viral)
Discussion about this post