ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಎರಡು ಬಿಗ್ ಬಜೆಟ್ ಸಿನಿಮಾಗಳು ಮುಖಾಮುಖಿಯಾಗಲಿವೆ. ಒಂದು ಕನ್ನಡ ಚಿತ್ರ, ಇನ್ನೊಂದು ಹಿಂದಿ ಚಿತ್ರ. ಎರಡೂ ದೊಡ್ಡಮಟ್ಟದ ಹೂಡಿಕೆ ಮಾಡಿರುವ ಚಿತ್ರಗಳಾಗಿರುವುದರಿಂದ, ಅಭಿಮಾನಿಗಳಿಗೆ ರಸದೌತಣವಾದರೂ, ಚಿತ್ರದ ಗಲ್ಲಾಪೆಟ್ಟಿಗೆ ಮೇಲೆ ಯಾವ ಪರಿಣಾಮ ಯಾವ ರೀತಿ ಬೀರುತ್ತದೆ ಅನ್ನೋದು ಮಾತ್ರ ಕುತೂಹಲ ಮೂಡಿಸಿದೆ.
ಅಮೀರ್ ಖಾನ್ ಅವರ ಲಾಲ್ ಸಿಂಗ್ ಛಡ್ಡಾ ಸಿನಿಮಾ ಹಾಗೂ ಕನ್ನಡದ ನಟ ಯಶ್ ಅವರ ಕೆಜಿಎಫ್ 2, ಈ ಎರಡೂ ಚಿತ್ರಗಳೂ ಒಂದೇ ದಿನ ಅಂದರೆ ಏಪ್ರಿಲ್ 14, 2022ರಂದು ಬಿಡುಗಡೆಯಾಗಲಿವೆ. ಎರಡೂ ಚಿತ್ರದ ಪೋಸ್ಟರ್ ಗಳು ಈಗಾಗಲೇ ಹೊರಬಿದ್ದಿದ್ದು, ಏಪ್ರಿಲ್ 14ರಂದೇ ತೆರೆಗೆ ತರಲು ಎರಡೂ ಚಿತ್ರ ತಂಡ ಪಣತೊಟ್ಟಿವೆ.
ಅಮೀರ್ ಖಾನ್ ಅವರ ಚಿತ್ರವು ಡಿಸೆಂಬರ್ 25, 2021ಕ್ಕೆ ಬಿಡುಗಡೆಯಾಬೇಕಿತ್ತು, ನಂತರ ಫೆಬ್ರವರಿ 14ರ,2022ರ ಪ್ರೇಮಿಗಳ ದಿನಕ್ಕೆ ನಿಗದಿಯಾಗಿತ್ತು. ಇದ್ದಕ್ಕಿದ್ದಂತೆ ಈಗ ಏಪ್ರಿಲ್ 14ನೇ ತಾರೀಖಿಗೆ ತೆರೆಗೆ ತರಲು ಚಿತ್ರತಂಡ ತೀರ್ಮಾನ ಮಾಡಿದೆ.
ಯಶ್ ಸಿನಿಮಾ ದಿನಾಂಕ ನಿಗದಿ ಮಾಡಿದ್ದರೂ, ಬದಲಾಯಿಸಿಲ್ಲ. ಕೆ.ಜಿ.ಆಫ್ 2, ಏಪ್ರಿಲ್ 14, 2022ಕ್ಕೆ ತೆರೆಕಾಣಲಿದೆ ಎಂದು ಒಂದು ವರ್ಷದ ಹಿಂದೆಯೇ ಘೋಷಣೆ ಮಾಡಿದ್ದರು.
ಬಾಲಿವುಡ್‌ನ ವಾಣಿಜ್ಯ ವಿಮರ್ಶಕ ತರುಣ್ ಆದರ್ಶ್, ಏಪ್ರಿಲ್ 14ರಂದು ಎರಡು ದಿಗ್ಗಜ ಚಿತ್ರಗಳು ಡಿಕ್ಕಿ ಹೊಡೆಯಲಿವೆ ಎಂದು ಟ್ವೀಟ್ ಮಾಡಿದ್ದಾರೆ. ಅಮೀರ್ ಖಾನ್ ಅವರ ಲಾಲ್ ಸಿಂಗ್ ಛಡ್ಡಾ ಚಿತ್ರವು 1994ರಲ್ಲಿ ತೆರೆ ಕಂಡಿದ್ದ ಫಾರೆಸ್ಟ್ ಗುಂಪ್ ಚಿತ್ರದ ರಿಮೇಕ್. ಇದನ್ನು ಅದ್ವೈತ್ ಚಂದನ್ ನಿರ್ದೇಶನ ಮಾಡುತ್ತಿದ್ದಾರೆ. ಅಮೀರ್ ಖಾನ್, ಕಿರಣ್ ರಾವ್, ವಯೋಕೋಮ್ 18 ಮೋಷನ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಅಮೀರ್ ಥ್ರೀ ಈಡಿಯಟ್ ನಂತರ ಕರೀನಾಕಪೂರ್, ಮೋನಾ ಸಿಂಗ್ ಜೊತೆ ನಟಿಸುತ್ತಿರುವ ಚಿತ್ರ ಇದಾಗಿದೆ.
ಇದನ್ನೂ ಓದಿ: ಕೆಜಿಎಫ್ (ಹಿಂದಿ) ನಟಿಯ ಬರ್ತ್ ಡೇ ಸ್ವಿಮ್ಮಿಂಗ್ ಫೂಲ್ ನಲ್ಲಿ
Discussion about this post