Bigg Boss News: ಬಿಗ್‌ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಜಗದೀಶ್ ಮತ್ತು ರಂಜೀತ್ ಹೊರಹೋದ ಬಳಿಕ, ಮೊದಲ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಕೇಕ್ ಒಂದನ್ನು ತರಿಸಿ, ಮನೆ ಮಂದಿಗೆಲ್ಲ ನೀಡಿದರು. ಎಲ್ಲರೂ ಖುಷಿಯಿಂದಲೇ ಕೇಕ್ ಕಟ್ ಮಾಡಿ, ಒಬ್ಬರಿಗೊಬ್ಬರು ತಿನ್ನಿಸಿ ಸಂತಸ ಪಟ್ಟರು. ಆದರೆ ಅದಾದ ಬಳಿಕ ಕಿಚ್ಚ ಸುದೀಪ್ ಕೊಟ್ಟ ಹೇಳಿಕೆ ಕೇಳಿ, ಎಲ್ಲರೂ ಹ್ಯಾಪ್ ಮೊರೆ ಹಾಕಿದ್ದಾರೆ.
ಏಕೆಂದರೆ, ಕಿಚ್ಚ, ಈ ಕೇಕ್ ಕಳಿಸಿದ್ದು ನಾನೇ. ನನಗೆ ಇಷ್ಟು ದಿನ ನೀವು ಕಂಡ ಅತ್ಯಂತ ಕೆಟ್ಟ ಬಿಗ್‌ಬಾಸ್ ಸೀಸನ್ ಯಾವುದು ಎಂದು ಕೇಳಿದಾಗ, ನಾನು ಸೀಸನ್ 6 ಎನ್ನುತ್ತಿದ್ದೆ. ಆದರೆ ಇನ್ನು ಮುಂದೆ ನಾನು ಅದಕ್ಕಿಂತಲೂ ಕೆಟ್ಟ ಬ್ಯಾಚ್ ಸೀಸನ್ 11 ಎನ್ನುತ್ತೇನೆ ಎಂದಿದ್ದಾರೆ. ಈ ಮಾತನ್ನು ಕೇಳಿ, ಖುಷಿಯಿಂದ ಹಾರಾಡುತ್ತಿದ್ದ ಬಿಗ್‌ಬಾಸ್ ಮಂದಿ ಪೆಚ್ಚು ಮೊರೆ ಹಾಕಿದರೆ, ಹೊರಗಡೆ ಆಡಿಯನ್ಸ್ ಚಪ್ಪಾಳೆ ತಟ್ಟುತ್ತಿದ್ದರು.
ಇನ್ನು ಹೀಗೆ ಮಾತು ಮುಂದುವರಿದಿದ್ದು, ಕಿಚ್ಚ ಸುದೀಪ್ ಚೈತ್ರಾ ಕುಂದಾಪುರ ಅವರನ್ನು ಮಾತನಾಡಿಸುತ್ತ, ನೀವು ಹೆಣ್ಣು ಮಕ್ಕಳಿಗೆ ಗೌರವ ಕೊಟ್ಟು ಮಾತಾಡಿ ಎಂದು ಎಲ್ಲರಿಗೂ ಹೇಳುತ್ತೀರಿ. ಆದರೆ ಜಗದೀಶ್ ಅವರಿಗೆ ನೀವು, ನಿಮ್ಮ ಅಪ್ಪನಿಗೆ ಹುಟ್ಟಿದ್ದಾದರೆ ಎಂಬ ಮಾತನ್ನು ಹೇಳಿದ್ದೀರಿ. ಹಾಗಾದ್ರೆ ನೀವು ಈ ಮಾತನ್ನು ಹೇಳಿ, ಅವರ ತಾಯಿಗೆ ಅವಮಾನ ಮಾಡಿದ ಹಾಗಾಯಿತಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಅದಕ್ಕೆ ತಲೆಯಾಡಿಸಿದ ಚೈತ್ರಾಗೆ ಪುರುಷರು ಹೆಣ್ಣು ಮಕ್ಕಳಿಗೆ ಗೌರವ ನೀಡಬೇಕು ಎಂದಾದರೆ, ನೀವೂ ಪುರುಷರಿಗೆ ಗೌರವ ಕೊಡಬೇಕಲ್ಲವೇ ಎಂದು ಮರು ಪ್ರಶ್ನಿಸಿದ್ದಾರೆ. ಮತ್ತೆ ಚೈತ್ರಾ ತಮ್ಮ ತಪ್ಪನ್ನು ಒಪ್ಪಿಕೊಂಡು ತಲೆಯಾಡಿಸಿದ್ದು, ಆಡಿಯನ್ಸ್ ಚಪ್ಪಾಳೆ ತಟ್ಟಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ತಗಾದೆ ತೆಗೆದು ಜಗಳಗಂಟ ಎನ್ನಿಸಿಕೊಂಡಿದ್ದ ಲಾಯರ್ ಜಗದೀಶ್ ಅವರು, ಹೊರಗಡೆ ಕರ್ನಾಟಕದ ಕ್ರಶ್ ಅನ್ನೋ ಪಟ್ಟ ಪಡೆದಿದ್ದರು. ಜಗದೀಶ್ ನಡುವಳಿಕೆಯನ್ನು ವಿರೋಧಿಸುವವರು ಎಷ್ಟು ಜನರಿದ್ದಾರೋ, ಅದಕ್ಕಿಂತ ಹೆಚ್ಚು ಅವರಿಗೆ ಫ್ಯಾನ್ಸ್ ಇದ್ದಾರೆ.
Discussion about this post