ಭಾರತದ ಕೇಂದ್ರ ಸಂಪುಟ ಸಭೆಯು ಕೊನೆಗೂ ಮಹಿಳೆಯರ ವಿವಾಹದ ವಯಸ್ಸನ್ನು 18 ರಿಂದ 21ಕ್ಕೆ ಏರಿಸಲು ಒಪ್ಪಿಗೆ ನೀಡಿದೆ. ಈ ಹಿಂದೆ ವಿವಾಹವಾಗಲು ಕನಿಷ್ಟ ಪ್ರಾಯ ಪುರುಷರಿಗೆ 21 ಹಾಗೂ ಮಹಿಳೆಯರಿಗೆ 18 ಆಗಿತ್ತು. ಈಗ ಮಹಿಳೆಯರಿಗೆ 21 ವಯಸ್ಸು ಆಗಿ ಏರಿಸಲಾಗಿದೆ. ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳ ಕುರಿತು ಕಾಳಜಿ ಹೊಂದಿದ್ದು, ಬಾಲ್ಯ ವಿವಾಹ ನಿಷೇಧ ಕಾಯ್ದೆ, ವಿಶೇಷ ವಿವಾಹ ಕಾಯ್ದೆ ಹಾಗೂ ಹಿಂದೂ ವಿವಾಹ ಕಾಯ್ದೆಗಳಲ್ಲಿ ಬದಲಾವಣೆ ತರಲು ಮುಂದಾಗಿದೆ. ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಣಯಕ್ಕೆ ಕೆಲವು ಸಂಘಟನೆಗಳಿಂದ ಸ್ವಾಗತವೂ, ವಿರೋಧವೂ ಬಂದಿದೆ. ಹಾಗಾದರೆ ವಿದೇಶಗಳಲ್ಲಿ ಮದುವೆಯ ವಯಸ್ಸು ಎಷ್ಟಿದೆ ಎಂಬ ಕುತೂಹಲ ಎಲ್ಲರಿಗೂ ಮೂಡುವುದು ಸಹಜ. ಹಲವು ದೇಶಗಳಲ್ಲಿ ಪುರುಷರ ಮದುವೆ ವಯಸ್ಸು 17 ಹಾಗೂ ಮಹಿಳೆಯರ ಮದುವೆ ವಯಸ್ಸು 16 ಸಹ ಆಗಿದೆ. ಸಣ್ಣ ವಯಸ್ಸಿನಲ್ಲೇ ಹುಡುಗಿಯರನ್ನು ಇಂದಿಗೂ ವಿವಾಹ ಮಾಡುವ ಸಾಂಪ್ರದಾಯ ಇಂದಿಗೂ ಇದೆ.
ಬ್ರಿಟನ್
ಇಂಗ್ಲೆಂಡ್ ಹಾಗೂ ವೇಲ್ಸ್ನಲ್ಲಿ ಮದುವೆಯ ವಯಸ್ಸು 18 ಆಗಿದೆ. ಆದರೆ ತಂದೆ ತಾಯಿಯ ಒಪ್ಪಿಗೆ ಪಡೆದು 16/17 ವಯಸ್ಸಿಗೂ ವಿವಾಹವಾಗಬಹುದು. ಕಾನೂನಿನ ಪ್ರಕಾರ ಪೋಷಕರ ಒಪ್ಪಿಗೆಯ ಮೇರೆಗೆ 18 ವರ್ಷ ತುಂಬುವ ಮುನ್ನವೂ ಮದುವೆಯಾಗಬಹುದಾಗಿದೆ. ಯುರೋಪಿನ ಎಸ್ಟೋನಿಯದಲ್ಲಿ 15 ವರ್ಷಕ್ಕೇ ಮದುವೆ ಆಗಬೋದಂತೆ!
ಟ್ರಿನಿಡಾಡ್ ಹಾಗೂ ಟೊಬೆಗೊದಲ್ಲಿ 12 ವರ್ಷಕ್ಕೇ ಮದ್ವೆ
ಅಮೆರಿಕಾದ ಮಾನವ ಹಕ್ಕುಗಳ ಸಮಿತಿ 2014ರಲ್ಲಿ ನೀಡಿದ ವರದಿಯೊಂದರ ಪ್ರಕಾರ, ಟ್ರಿನಿಡಾಡ್ ಹಾಗೂ ಟೊಬೆಗೊದಲ್ಲಿ ಅಧಿಕೃತ ಮದುವೆ ವಯಸ್ಸು 18. ಇಲ್ಲಿ ಮುಸ್ಲಿಂ ಹಾಗೂ ಹಿಂದೂ ಧರ್ಮೀಯರಿಗೆ ಅವರದ್ದೇ ಆದ ಮದುವೆಯ ನಿಯಮ ಇದೆ. ಮುಸ್ಲಿಂ ಯುವಕರು 16 ಹಾಗೂ ಮಹಿಳೆಯರು 12ನೆ ವಯಸ್ಸಿನಲ್ಲಿ ಮದುವೆ ಆಗಬಹುದು. ಹಿಂದೂಗಳಲ್ಲಿ ಇದು ಕ್ರಮವಾಗಿ 18 ಮತ್ತು 14 ಆಗಿದೆ.
ನೈಗರ್ನಲ್ಲಿ ಬಾಲ್ಯ ವಿವಾಹ
ಇಲ್ಲಿನ 76% ಹುಡುಗಿಯರು 18 ವರ್ಷಕ್ಕೆ ಮೊದಲೇ, 28% 15 ವರ್ಷಕ್ಕೆ ಮೊದಲೇ ವಿವಾಹವಾಗುತ್ತಾರೆ. ಯುನಿಸೆಫ್ ರಿಪೋರ್ಟ್ ಪ್ರಕಾರ ನೈಜರ್ ಪ್ರಪಂಚದಲ್ಲೇ ಅತಿ ಹೆಚ್ಚು ಬಾಲ್ಯ ವಿವಾಹ ಹೊಂದಿರುವ ದೇಶವಾಗಿದೆ. ಪಟ್ಟಣಗಳಿಗೆ ಹೋಲಿಸಿದರೆ, ಹಳ್ಳಿಯ ಮಕ್ಕಳು ಬಾಲ್ಯ ವಿವಾಹಕ್ಕೆ ಜಾಸ್ತಿ ಬಲಿಯಾಗುತ್ತಿದ್ದಾರೆ. ವಿಧ್ಯಾಭ್ಯಾಸದ ಹಾಗೂ ಹಣದ ಕೊರತೆ ಎಳೆಯ ಪ್ರಾಯದಲ್ಲೇ ಮದುವೆ ಮಾಡಲು ಮುಖ್ಯ ಕಾರಣವಾಗಿದೆ.
ಅಮೆರಿಕಾ
ಅಮೆರಿಕಾ ದೇಶದಲ್ಲಿ ಪ್ರತಿಯೊಂದು ರಾಜ್ಯಕ್ಕೂ ಬೇರೆ ಬೇರೆ ಮದುವೆ ನಿಯಮಗಳಿವೆ. ಹೆಚ್ಚಿನ ರಾಜ್ಯಗಳಲ್ಲಿ 18 ಹಾಗೂ ನೆಬರಸ್ಕದಲ್ಲಿ 19 ಆಗಿದೆ. ಮಿಸಸಿಪ್ಪಿಯಲ್ಲಿ 21 ಮದುವೆಯ ವಯಸ್ಸಾಗಿದೆ. Massacchusetts ನಲ್ಲಿ ಸ್ಥಳೀಯ ನ್ಯಾಯಾಲಯದ ಒಪ್ಪಿಗೆ ಮೇರೆಗೆ ವಿಶೇಷ ಪ್ರಕರಣಗಳಲ್ಲಿ 12 ವರ್ಷಕ್ಕೆ ಮದುವೆಯಾಗಲು ಸಹ ಅನುಮತಿಯಿದೆ.
ಚೀನಾ
ಚೀನಾದಲ್ಲಿ ಮದುವೆ ರಿಜಿಸ್ಟ್ರೇಷನ್ ಮಾಡಲು ವಿಭಿನ್ನ ನಿಯಮವಿದೆ. ಪ್ರಸ್ತುತ ಅಲ್ಲಿ ಪುರುಷರಿಗೆ ಮದುವೆ ವಯಸ್ಸು 22 ಹಾಗೂ ಮಹಿಳೆಯರಿಗೆ 20 ಆಗಿದೆ. ಇದನ್ನು ಕಡಿಮೆ ಮಾಡಬೇಕೆಂದು ಸಾಕಷ್ಟು ಅಭಿಪ್ರಾಯಗಳಿವೆ.
ಇದನ್ನೂ ಓದಿ: ಮಹಿಳೆಯರ ಕಾನೂನುಬದ್ಧ ವಿವಾಹ ವಯಸ್ಸು 18 ರಿಂದ 21ಕ್ಕೆ ಏರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ
(Legal Marriage Age across globe as India Proposes to Raise Ceiling for Women)
Discussion about this post