ಇತ್ತೀಚಿಗಷ್ಟೇ ನಮ್ಮನ್ನು ಭೌತಿಕವಾಗಿ ಅಗಲಿದ ಪುನೀತ್ ರಾಜ್‌ಕುಮಾರ್ ಬಹಳ ದೊಡ್ಡ ನಟ. ಅವರ ಕುರಿತು ಮಾತಾಡುವ ಯೋಗ್ಯತೆ ನನಗಿಲ್ಲ ಎಂದರು ಹಾಡುಗಾರ್ತಿ ಮಂಗ್ಲಿ. ನನಗೆ ಪುನೀತ್ ರಾಜ್‌ಕುಮಾರ್ ಅವರನ್ನು ಜನರು ಅಪ್ಪು ಎಂದು ಕರೆಯುವುದು ಗೊತ್ತಿರಲಿಲ್ಲ. ತೆಲುಗು ಭಾಷೆಗೆ ಡಬ್ ಆದ ಪುನೀತ್ ರಾಜ್‌ಕುಮಾರ್ ಅವರ ಚಿತ್ರಗಳನ್ನು ನಾನು ವೀಕ್ಷಿಸಿದ್ದೇನೆ ಎಂದು ಅವರು ತಿಳಿಸಿದರು. ಪುನೀತ್ ರಾಜ್‌ಕುಮಾರ್ ಅವರು ಓರ್ವ ಗುಣವಂತರಾಗಿದ್ದರು. ಬಹಳ ದೊಡ್ಡ ವ್ಯಕ್ತಿತ್ವ ಅವರದು. ಅವರಂಥ ವ್ಯಕ್ತಿಯನ್ನು ಪುನಃ ನೋಡಲಾಗದು ಎಂದು ಗಾಯಕಿ ಮಂಗ್ಲಿ ಉಚ್ಛರಿಸಿದರು.
ಬಹುಪ್ರಖ್ಯಾತ ಗಾಯಕಿ ಮಂಗ್ಲಿ ಅವರೇ ಈ ಮಾತನಾಡಿದ್ದು. ಬೆಂಗಳೂರಿಗೆ ಕೆಲಸವೊಂದರ ನಿಮಿತ್ತ ಆಗಮಿಸಿದ್ದ ಅವರು ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನದ ಕುರಿತು ಮಾಧ್ಯಮಗಳಿಗೆ ಹೀಗೆ ಪ್ರತಿಕ್ರಿಯಿಸಿದರು.
ಪುನೀತ್ ರಾಜ್‌ಕುಮಾರ್ ಅವರ ನಿಧನದ ಸುದ್ದಿ ತಿಳಿದರೂ ಅದನ್ನು ಆಕ್ಷಣಕ್ಕೆ ನಂಬಲು ಸಾಧ್ಯವಾಗಲಿಲ್ಲ..ಎಂದು ಸಹ ಅವರು ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನದ ಸುದ್ದಿ ತಮ್ಮನ್ನು ದಂಗುಬಡಿಸಿತ್ತು ಎಂದು ಅಶ್ರುತರ್ಪಣ ಮಿಡಿದರು.
ಇದನ್ನೂ ಓದಿ: ‘ನೆನಪಿನಲ್ಲಿ ನೀವೀಗ ಎಂದಿಗಿಂತ ಸನಿಹ’: ಪುನೀತ್ ರಾಜ್‌ಕುಮಾರ್ ಬಗ್ಗೆ ರಾಧಿಕಾ ಪಂಡಿತ್ ಭಾವುಕ ಸಂದೇಶ
Discussion about this post