Mumbai News: ಆಸೆಪಟ್ಟು ನಾವೇನಾದರೂ ತಿಂಡಿ ತರಿಸಿ, ಅದರಲ್ಲಿ ಸಿಗಬಾರದ ವಸ್ತು ಸಿಕ್ರೆ ಹೇಗಿರತ್ತೆ ಹೇಳಿ..? ಇಲ್ಲೋರ್ವ ಮಹಿಳೆಯ ಗತಿ ಅದೇ ಆಗಿದ್ದು. ಆನ್‌ಲೈನ್‌ನಲ್ಲಿ ಆರ್ಡರ್ ಕೊಟ್ಟಿದ್ದ ಐಸ್‌ಕ್ರೀಮ್‌ನಲ್ಲಿ (Ice Cream) ಮನುಷ್ಯನ ಬೆರಳು ಪತ್ತೆಯಾಗಿದೆ.
ಮುಂಬೈನ ಮಲಾಡ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಡಾ.ಓರ್ಲಾಮ್ ಎಂಬಾಕೆ ಆನ್‌ಲೈನ್‌ನಲ್ಲಿ ಐಸ್‌ಕ್ರೀಮ್ ಆರ್ಡರ್ ಮಾಡಿದ್ದರು. ಮೂರು ಐಸ್‌ಕ್ರೀಮ್ ಆರ್ಡರ್ ಮಾಡಿ, ಮನೆಯವರೆಲ್ಲೂ ಐಸ್‌ಕ್ರೀಮ್ ತಿನ್ನುವಾಗ, ಓರ್ಲಾಮ್ ತಿನ್ನುತ್ತಿದ್ದ ಐಸ್‌ಕ್ರಿಮ್‌ನಲ್ಲಿ ಏನೋ ಸಿಕ್ಕಂತಾಗಿದೆ. ಆದರೆ ಅಡು ವಾಲ್ನಟ್ ಅಥವಾ ಚಾಕೋಲೇಟ್ ಅಂತಾ ತಿಳಿದು ಓರ್ಲಾಮ್ ಅದನ್ನು ತಿನ್ನಲು ಪ್ರಯತ್ನಿಸಿದ್ದಾರೆ.
ಆದರೆ ಅದನ್ನು ಕಚ್ಚಲಾಗದಿದ್ದಾಗ, ಉಗಿದಿದ್ದಾರೆ. ಆಗ ಅವರು ತಿಂದಿದ್ದು, ಚಾಕೋಲೇಟ್ ಅಥವಾ ವಾಲ್ನಟ್ ಅಲ್ಲ, ಬದಲಾಗಿ ಮನುಷ್ಯನ ಬೆರಳು ಅಂತಾ ಗೊತ್ತಾಗಿದೆ. ಇದನ್ನು ಕಂಡು ದಿಗ್ಭ್ರಮೆಗೊಂಡ ಓರ್ಲಾಮ್, ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ಐಸ್‌ಕ್ರೀಮ್‌ನ್ನು ಪ್ರಯೋಗಾಲಕ್ಕೆ ಕಳಿಸಿ, ಅದರಲ್ಲಿ ಬೆರಳು ಹೇಗೆ ಬಂತೆಂದು ತನಿಖೆ ನಡೆಸಿದ್ದಾರೆ. ಅಲ್ಲದೇ, ಯಾವ ಕಂಪನಿಯ ಐಸ್‌ಕ್ರೀಮ್ ತರಿಸಿದ್ದರೋ, ಆ ಬ್ರ್ಯಾಂಡ್ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ.
Darshan Arrest Case: ಯಾರು ಈ ರೇಣುಕಾಸ್ವಾಮಿ..? ಇವನ್ಯಾಕೆ ಪವಿತ್ರಾಳನ್ನು ಪೀಡಿಸುತ್ತಿದ್ದ..?
ಇಲಿ ಮಾಡಿದ ಅವಾಂತರದಿಂದ ನಟನಿಗೆ ಲಕ್ಷಾಂತರ ರೂ. ನಷ್ಟ: ಗ್ಯಾರೇಜ್‌ಗೆ ಹೋದ ಕೋಟಿ ಬೆಲೆಯ ಕಾರು
Discussion about this post