Bollywood News: ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಇಲಿ ಮಾಡಿದ ತಪ್ಪಿಗೆ ಲಕ್ಷ ಲಕ್ಷ ಖರ್ಚು ಮಾಡಿದ್ದಾರೆ. ಅವರ 5 ಕೋಟಿ ರೂಪಾಯಿ ಬೆಲೆ ಬಾಳುವ ಕಾರ್ ಗ್ಯಾರೇಜ್ ಪಾಲಾಗಿದೆ.
ಮೆಕ್ಲರೆನ್ ಕಾರಿನ ವಾಯರ್, ಮ್ಯಾಟನ್ನು ಇಲಿ ಕಚ್ಚಿ ಹಾಳು ಮಾಡಿದ್ದು, ಆರ್ಯನ್ ಪೇಚಿಗೆ ಸಿಲುಕಿದ್ದಾರೆ. ಕಾರ್ತಿಕ್ ಆರ್ಯನ್ ಬಳಿ ಕಾಸ್ಟ್ಲಿ ಕಾರಿನ ಕಲೆಕ್ಷನ್ ಇದೆ. ಆದರೆ ಈ ಕಾರನ್ನು ಟಿ ಸಿರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ಉಡುಗೊರೆಯಾಗಿ ಕಾರ್ತಕ್ಗೆ ನೀಡಿದ್ದರು.
ಆದರೆ ಈ ಕಾರನ್ನು ಕಾರ್ತಿಕ್ ಜೋಪಾನವಾಗಿ ಇರಿಸಿದ್ದರು. ಸುಮ್ಮ ಸುಮ್ಮನೆ ಬಳಸುತ್ತಿರಲಿಲ್ಲ. ಹಾಗಾಗಿ ಕಾರ್ ಇದ್ದಲ್ಲೇ ಇದ್ದು, ಇಲಿ ದಾಳಿಗೆ ಬಲಿಯಾಗಿದೆ. ಕಾರು ಬಳಸಲು ಸಾಧ್ಯವಾಗದ ಕಾರಣ, ಕಾರನ್ನು ಶೋ ರೂಮ್ಗೆ ಕಳಿಸಲಾಗಿದೆ. ಕಾರ್ ರಿಪೇರಿಯಾಗಲು ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಿದೆ.
ಯುವರಾಜ್ ಕುಮಾರ್ ಡಿವೋರ್ಸ್ ಪ್ರಕರಣ: ಶ್ರೀದೇವಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ವಕೀಲರು
Discussion about this post