Sandalwood News: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದು, ಪವಿತ್ರ ಗೌಡರನ್ನು ಸಹ ಆರ್ಆರ್ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೇಣುಕಾಸ್ವಾಮಿ ಪವಿತ್ರ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿ, ಫೋಟೋಗಳನ್ನು ಕಳುಹಿಸುತ್ತಿದ್ದನೆಂದು ದರ್ಶನ್ ಆಪ್ತ, ರೇಣುಕಾಸ್ವಾಮಿಗೆ ಕಾಲ್ ಮಾಡಿ, ಬೆಂಗಳೂರಿಗೆ ಕರೆಸಿಕೊಂಡಿದ್ದ. ಬಳಿಕ ರಾಜರಾಜೇಶ್ವರಿ ನಗರದ ಶೆಡ್‌ವೊಂದರಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆ ವೇಳೆ ಮರ್ಮಾಂಗಕ್ಕೆ ಪೆಟ್ಟಾಗಿ, ರೇಣುಕಾಸ್ವಾಮಿ, ಸಾವನ್ನಪ್ಪುತ್ತಾನೆ. ಬಳಿಕ ಅವನ ಶವವನ್ನು ಕಾಮಾಕ್ಷಿ ಪಾಳ್ಯದಲ್ಲಿ ಎಸೆಯಲಾಗಿದೆ.
ಇನ್ನು ಯಾರು ಈ ರೇಣುಕಾಸ್ವಾಮಿ..? ಇವನ್ಯಾಕೆ ಪವಿತ್ರಗೌಡಳನ್ನು ಪೀಡಿಸುತ್ತಿದ್ದ ಅನ್ನೋ ಪ್ರಶ್ನೆಗೆ ಉತ್ತರ. ಈತ ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿದ್ದ. ಆದರೆ ಪವಿತ್ರಾ ಗೌಡ ದರ್ಶನ್ ಜೊತೆ ಸಂಬಂಧ ಹೊಂದಿ, ಅವರ ಕುಟುಂಬಕ್ಕೆ ಕಾಟ ಕೊಡುತ್ತಿದ್ದಾಳೆಂಬ ವಿಷಯ ಗೊತ್ತಾಯಿತೋ, ಆಗ ಕೋಪಗೊಂಡ ರೇಣುಕಾಸ್ವಾಮಿ ಪವಿತ್ರಾಳಿಗೆ, ದರ್ಶನ್ ಕುಟುಂಬದಿಂದ ದೂರವಿರುವಂತೆ ವಾರ್ನ್ ಮಾಡಿದ್ದಾನೆ.
ಬಳಿಕ ಪ್ರತಿದಿನ ಅಶ್ಲೀಲ ಫೋಟೋ, ಮೆಸೇಜ್ ಕಳಿಸಲು ಶುರು ಮಾಡಿದ್ದಾನೆ. ಹೀಗಾಗಿ ದರ್ಶನ್ ಮತ್ತು ಅವರ ಆಪ್ತರು, ರೇಣುಕಾಸ್ವಾಮಿಗೆ ಬುದ್ಧಿ ಕಲಿಸಬೇಕು ಎಂದು ಬೆಂಗಳೂರಿಗೆ ಕರೆಸಿದ್ದರು ಎನ್ನಲಾಗಿದೆ. ಆದರೆ ಬುದ್ದಿ ಕಲಿಸಲು ಹೋಗಿ, ಪ್ರಾಣವೇ ಹೋಗಿದ್ದು, ಯಾರಿಗೂ ಗೊತ್ತಿಲ್ಲದಂತೆ ಶವವನ್ನು ಎಸೆಯಲಾಗಿದೆ.
ನಾಯಿಗಳು ಶವವನ್ನು ತಂದು ರಸ್ತೆಗೆ ಬಿಸಾಕಿದಾಗ, ಅಲ್ಲೊಂದು ಕೊಲೆ ನಡೆದಿದೆ. ಶವವನ್ನು ಯಾರೋ ಎಸೆದುಹೋಗಿದ್ದಾರೆಂಬ ವಿಷಯ ಬೆಳಕಿಗೆ ಬರುತ್ತದೆ. ಈ ಬಗ್ಗೆ ಕಾಮಾಕ್ಷಿ ಪಾಳ್ಯ ಪೊಲೀಸರು ತನಿಖೆ ನಡೆಸಿದಾಗ, ದರ್ಶನ್ ಮತ್ತು ಅವರ ಆಪ್ತರು ಈ ಕೆಲಸ ಮಾಡಿದ್ದಾಗಿ ಗೊತ್ತಾಗಿದೆ.
ಇನ್ನು ರೇಣುಕಾಸ್ವಾಮಿ ಪತ್ನಿ ಸಹನಾ ಮೂರು ತಿಂಗಳ ಗರ್ಭಿಣಿಯಾಗಿದ್ದು, ಇಂದು ಪತಿಯ ಸಾವಿನ ಸುದ್ದಿ ಗೊತ್ತಾಗಿದೆ. ತಂದೆ ನಿವೃತ್ತ ಬೆಸ್ಕಾಂ ಕೆಲಸಗಾರರಾಗಿದ್ದು, ಮಗನ ಸಾವಿನ ಸುದ್ದಿ ತಿಳಿದು ಅವರು ಕೂಡ ಶಾಕ್‌ಗೆ ಒಳಗಾಗಿದ್ದಾರೆ.
Darshan Arrest Case: ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಪೊಲೀಸರ ವಶಕ್ಕೆ
Discussion about this post