ಮಧುಮೇಹ ಜೀವನ ಪರ್ಯಂತ ಕಾಡುವ ಕಾಯಿಲೆ. ಇದನ್ನು ನಿಯಂತ್ರಿಸುವ ಮೂಲಕ ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದು. ರಾಷ್ಟ್ರೀಯ ಮಧುಮೇಹ ಮಾಸವಾದ ನವೆಂಬರ್ನಲ್ಲಿ ಸಕ್ಕರೆ ಕಾಯಿಲೆ ಬಗ್ಗೆ ಒಂದಿಷ್ಟು ಪರಿಹಾರೋಪಾಯ ತಿಳಿಸುವ ಬರಹ ಇಲ್ಲಿದೆ.
ಮಧುಮೇಹದಲ್ಲಿ ಮೂರು ವಿಧವನ್ನು ಗುರುತಿಸಲಾಗಿದೆ. ಟೈಪ್- 1, ಟೈಪ್- 2 ಮತ್ತು ಗರ್ಭಾವಸ್ಥೆಯ ಮಧುಮೇಹ. ಸಕ್ಕರೆ ಕಾಯಿಲೆ ಇದ್ದವರಿಗೆ ಸಂಕೀರ್ಣ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಅನಿಯಂತ್ರಿತ ಡಯಾಬಿಟಿಸ್ನಿಂದ ಹೃದಯಾಘಾತ, ಕಿಡ್ನಿ ವೈಫಲ್ಯ, ಅಜೀರ್ಣದಂತಹ ಗಂಭೀರ ಕಾಯಿಲೆಗಳು ಕಾಡಬಹುದು.
ಟೈಪ್- 1 ಮಧುಮೇಹದ ಲಕ್ಷಣ ಹೈಪರ್ಗ್ಲೆಸೀಮಿಯಾ ಅಂದರೆ ರಕ್ತದಲ್ಲಿ ಅಧಿಕವಾಗಿ ಸಕ್ಕರೆ ಅಂಶ ಇರುವುದು. ಸಕ್ಕರೆ ಅಂಶವನ್ನು ನಿಯಂತ್ರಿಸುವ ಇನ್ಸುಲಿನ್ ಉತ್ಪಾದನೆ ಕಡಿಮೆ ಆಗುತ್ತದೆ. ಇದರಿಂದ ವ್ಯಕ್ತಿಗೆ ಸುಸ್ತು, ನಿತ್ರಾಣ, ಹೆಚ್ಚಾಗಿ ಮೂತ್ರ ವಿಸರ್ಜನೆ, ಇದ್ದಕ್ಕಿದ್ದಂತೆ ತೂಕದಲ್ಲಿ ಇಳಿಕೆ ಮತ್ತು ಅಧಿಕ ಹಸಿವು ಕಾಣಿಸುತ್ತದೆ. ಈ ಕಾಯಿಲೆಯ ನಿಯಂತ್ರಣ ಸಾಧ್ಯ. ನಿತ್ಯ ವ್ಯಾಯಮ, ಬಿರುಸಿನ ನಡಿಗೆ, ಕಡ್ಡಾಯವಾಗಿ ಆಹಾರ ಪಥ್ಯಗಳನ್ನು ಮಾಡುವುದರಿಂದ ಟೈಪ್ 1 ಡಯಾಬಿಟಿಸ್ ಹತೋಟಿ ಸಾಧ್ಯ. ಯುವ ಸಮುದಾಯ ಮತ್ತು ಮಕ್ಕಳಲ್ಲಿ ಟೈಪ್-1 ಸಕ್ಕರೆ ಕಾಯಿಲೆ ಹೆಚ್ಚಾಗಿ ಕಾಣಬಹುದು.
ಟೈಪ್-2 ಡಯಾಬಿಟಿಸ್ ಈಗ ಸಾಮಾನ್ಯವಾಗಿಬಿಟ್ಟಿದೆ. ತಲೆತಿರುಗುವಿಕೆ, ಬಾಯಿ ಒಣಗುವುದು, ಯಾವುದೇ ಅಂಗದ ದೌರ್ಬಲ್ಯ, ತಲೆ ನೋವು, ಅಸ್ಪಷ್ಟ ಮಾತು, ಒತ್ತಡ ಕಾಣಿಸಿಕೊಳ್ಳುವುದು ಇದರ ಲಕ್ಷಣ. ಇದಕ್ಕೆ ತುತ್ತಾದವರು ರಕ್ತದಲ್ಲಿನ ಸಕ್ಕರೆ ಅಂಶ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಿಕೊಳ್ಳುವುದು ಮುಖ್ಯ. ಕೊಬ್ಬು ಕಡಿಮೆ ಮಾಡಿಕೊಳ್ಳಬೇಕು. ಧೂಮಪಾನ ಬಿಡಬೇಕು, ಮದ್ಯ ಸೇವನೆಯಲ್ಲಿ ಸಂಯಮ ಅಗತ್ಯ. ದೇಹದ ತೂಕದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ನಿತ್ಯ ವ್ಯಾಯಮ ಮಾಡುವುದರಿಂದ ಹೃದಯಾಘಾತದ ಸಾಧ್ಯತೆ ಕಡಿಮೆ ಆಗುತ್ತದೆ.
ಗರ್ಭಾವಸ್ಥೆಯ ಮಧುಮೇಹವು ಈಗಾಗಲೇ ಸಕ್ಕರೆ ಕಾಯಿಲೆ ಇಲ್ಲದ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಡಯಾಬಿಟಿಸ್. ಇದನ್ನು ಪತ್ತೆ ಮಾಡಲು ಗರ್ಭಕಟ್ಟಿದ 27ನೇ ತಿಂಗಳಲ್ಲಿ ಗ್ಲೋಕೋಸ್ ತಾಳಿಕೆಯ ಪರೀಕ್ಷೆ ಮಾಡಬೇಕು. ಈ ಸಂದರ್ಭದಲ್ಲಿ ಗರ್ಭಿಣಿಯು ಆತಂಕ, ಒತ್ತಡದಿಂದ ಇರಬಾರದು. ಗರ್ಭಿಣಿಯರಿಗೆ ಮಧುಮೇಹ ಬಂದರೆ ಇದರಿಂದ ಭ್ರೂಣಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ.
ಹೀಗಾಗಿ ಸಕ್ಕರೆ ಕಾಯಿಲೆ ಪೀಡಿತ ಗರ್ಭಿಣಿಯರು ಆರೋಗ್ಯದ ಬಗ್ಗೆ ಅಧಿಕ ಕಾಳಜಿ ನೀಡಬೇಕು. ವೈದ್ಯರ ಸಲಹೆ ಮೇರೆಗೆ ಗರ್ಭಿಣಿ ವ್ಯಾಯಾಮ ಮಾಡಬೇಕು. ಪೋಷಕಾಂಶಯುಕ್ತ ಆಹಾರ ಸೇವಿಸಬೇಕು ಮತ್ತು ವೈದ್ಯರು ಶಿಫಾರಸು ಮಾಡಿದ ಔಷಧವನ್ನು ತಪ್ಪದೆ ತೆಗೆದುಕೊಳ್ಳಬೇಕು. ಬಹುತೇಕವಾಗಿ ಪ್ರಸವದ ನಂತರ ಈ ಮಧುಮೇಹ ದೂರವಾಗುತ್ತದೆ.
ಇದನ್ನೂ ಓದಿ: ದಾಲ್ಚಿನ್ನಿ ಚಹಾ ಸೇವನೆಯಿಂದ ಆರೋಗ್ಯ ವೃದ್ಧಿ; ಈ ಚಹಾದ ತಯಾರಿ ಹೇಗೆ?
Discussion about this post