ದೈಹಿಕ ಕ್ಷಮತೆ ಮತ್ತು ಆರೋಗ್ಯಕರ ಜೀವನದ ಬಗ್ಗೆ ತಮಗೆ ಅಪಾರ ಕಾಳಜಿ ಇದೆ. ಆ ಕುರಿತು ಸದಾ ಜಾಗರೂಕತೆಯಿಂದ ಇರುತ್ತೇನೆ ಎಂದು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹೇಳಿದ್ದಾರೆ. ಜತೆಗೆ ತಮ್ಮ ಫಿಟ್ನೆಸ್ ಗುಟ್ಟನ್ನೂ ಬಹಿರಂಗಪಡಿಸಿದ್ದಾರೆ.
ತಮ್ಮ ದಿನಚರಿಯ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, ಧ್ಯಾನ ನನ್ನ ದಿನಚರಿಯ ಮುಖ್ಯ ಭಾಗ. ಅದುವೇ ನನ್ನ ಫಿಟ್ನೆಸ್ ಗುಟ್ಟು ಎಂದು ಹೇಳಿಕೊಂಡಿದ್ದಾರೆ.
ನೇಪಾಳದ ಬೆಟ್ಟವೊಂದರಲ್ಲಿ ಧ್ಯಾನ ಮಾಡುತ್ತಾ ಕುಳಿತಿರುವ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಜೊತೆಗೆ, ಪ್ರತಿದಿನ ಧ್ಯಾನ ಮಾಡುವುದೇ ತಮ್ಮ ಆರೋಗ್ಯದ ರಹಸ್ಯ ಎಂದು ಸಂದೇಶ ಪ್ರಕಟಿಸಿದ್ದಾರೆ.
ಓದಿ: ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಬಂಧನದ ನಂತರ ಪ್ರಥಮ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡ ಶಾರುಖ್
ಧ್ಯಾನ ಮಾಡಲು ಪರ್ವತ ಅಥವಾ ಬೆಟ್ಟ-ಗುಡ್ಡಗಳೇ ಆಗಬೇಕೆಂದಿಲ್ಲ. ಪ್ರತಿದಿನ ಮನೆಯಲ್ಲಿ ಧ್ಯಾನ ಮಾಡುವುದನ್ನು ಒಂದು ಅಭ್ಯಾಸವನ್ನಾಗಿ ಮಾಡಿಕೊಂಡರೆ ಶಾಂತಚಿತ್ತ ಹಾಗೂ ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು ಎಂದು ನಟಿ ಸಲಹೆ ನೀಡಿದ್ದಾರೆ.
ಪ್ರಯಾಣ, ಪ್ರವಾಸದಲ್ಲಿರುವಾಗ ಹಾಗೂ ಶೂಟಿಂಗ್ನಲ್ಲಿ ವ್ಯಸ್ತರಾಗಿ ಇರುವಾಗಲೂ ಪರಿಣಿತಿ ಅವರು ಯೋಗ, ಧ್ಯಾನ ಮಾಡುವುದನ್ನು ತಪ್ಪಿಸಿಕೊಳ್ಳುವುದಿಲ್ಲವಂತೆ.
View this post on Instagram
ಧ್ಯಾನ ಮಾಡಲು ಇಲ್ಲಿದೆ ಕೆಲವು ಟಿಪ್ಸ್
* ಧ್ಯಾನ ಮಾಡಲು ಸೂಕ್ತ ಸಮಯ ಒಂದನ್ನು ಆಯ್ಕೆ ಮಾಡಿಕೊಳ್ಳಿ. ಪ್ರತಿ ದಿನ ಅದೇ ಹೊತ್ತಿಗೆ ಧ್ಯಾನ ಮಾಡುವುದು ಒಂದು ಅಭ್ಯಾಸವಾಗಲಿ.
* ಮೊದಮೊದಲು ಧ್ಯಾನ ಮಾಡುವಾಗ ಹಲವರಿಗೆ ಹಲವು ರೀತಿಯ ಅನುಭವ ದೊರೆಯಬಹುದು.
* ಧ್ಯಾನಕ್ಕೆ ಕುಳಿತುಕೊಳ್ಳುವಾಗ ಮೊಬೈಲ್ ಫೋನ್, ಲ್ಯಾಪ್ಟಾಪ್ ಇತ್ಯಾದಿ ಉಪಕರಣಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಡಿ.
* ಧ್ಯಾನ ಮಾಡುವಾಗ ಮನಸ್ಸಿನಲ್ಲಿ ಹಲವಾರು ಆಲೋಚನೆಗಳು ಬರಬಹುದು. ಅವುಗಳನ್ನು ಹಾಗೆಯೇ ಬಿಟ್ಟು ಬಿಡಿ. ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಿ.
ಧ್ಯಾನದ ಪ್ರಯೋಜನಗಳೇನು?
* ಪ್ರತಿದಿನ ಧ್ಯಾನ ಮಾಡುವುದರಿಂದ ಒತ್ತಡವನ್ನು ನಿಭಾಯಿಸಬಹುದು, ಜೊತೆಗೆ ಶಾಂತಚಿತ್ತ ಹೊಂದಲು ಸಾಧ್ಯ.
* ವರ್ತಮಾನದ ಮೇಲೆ ಗಮನ ಕೇಂದ್ರೀಕರಿಸಲು ಸಹಾಯಕ.
* ನಕಾರಾತ್ಮಕ ಭಾವನೆಗಳನ್ನು ದೂರ ಮಾಡಬಹುದು.
* ಮಾನಸಿಕ ಮತ್ತು ದೈಹಿಕವಾಗಿ ಕ್ರಿಯಾಶೀಲರಾಗಲು ಸಹಕಾರಿ.
* ತಾಳ್ಮೆ ಹಾಗೂ ಏಕಾಗ್ರತೆ ಹೆಚ್ಚಾಗಲು ನೆರವಾಗುತ್ತದೆ.
ಓದಿ: Old woman who gave birth to a baby: 70ರ ಹರೆಯದಲ್ಲಿ ಮೊದಲ ಮಗುವಿಗೆ ಜನ್ಮನೀಡಿದ ವೃದ್ಧೆ
Discussion about this post