ವಾಷಿಂಗ್ಟನ್: ಫೈಜರ್ ಕಂಪನಿ ಮಕ್ಕಳಿಗಾಗಿ ಅಭಿವೃದ್ಧಿ ಪಡಿಸಿರುವ ಕೊರೊನಾ ತಡೆ ಲಸಿಕೆಯನ್ನು 5ರಿಂದ 11 ವರ್ಷದೊಳಿಗಿನ ಮಕ್ಕಳಿಗೆ ನೀಡಲು ಅಮೆರಿಕದ ಆಡಳಿತ ಔಷಧ ನಿಯಂತ್ರಣ ಆಡಳಿತ ಅನುಮತಿ ಒಪ್ಪಿಗೆ ನೀಡಿದೆ. ಇದರಿಂದ ಈ ವರ್ಗದ 2.80 ಲಕ್ಷ ಮಕ್ಕಳು ಲಸಿಕೆ ಪಡೆಯಬಹುದಾಗಿದೆ.
ಉನ್ನತ ಮಟ್ಟದ ವೈದ್ಯಕೀಯ ತಜ್ಞರ ತಂಡವು ಫೈಜರ್ ಲಸಿಕೆಯನ್ನು ಮಕ್ಕಳಿಗೆ ನೀಡುವ ಕುರಿತು ಕೂಲಂಕಷವಾಗಿ ಪರಿಶೀಲಿಸಿದ ನಂತರ ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ (ಎಫ್ಡಿಎ) ಈ ಒಪ್ಪಿಗೆ ನೀಡಿದೆ. ಚೀನಾ, ಚಿಲಿ, ಕ್ಯೂಬಾ, ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ನಂತರ ಮಕ್ಕಳ ಲಸಿಕೆಗೆ ಒಪ್ಪಿಗೆ ನೀಡಿದ ದೇಶ ಅಮೆರಿಕ ಆಗಿದೆ.
ಕೇಂದ್ರ ರೋಗ ನಿಯಂತ್ರಣ (ಸಿಡಿಸಿ) ತಜ್ಞರ ತಂಡವು ಲಸಿಕೆಯ ಕ್ಲಿನಿಕಲ್ ಟ್ರಯಲ್ ಅನ್ನು ಪರಿಶೀಲಿಸಿದ ಬಳಿಕ ಮಕ್ಕಳಿಗೆ ಲಸಿಕೆಯನ್ನು ಯಾವಾಗಿನಿಂದ ನೀಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ, ಎಂದು ಎಫ್ಡಿಎ ತಿಳಿಸಿದೆ.
ಫೈಜರ್ ಲಸಿಕೆಯ ಟ್ರಯಲ್ನಲ್ಲಿ ಎರಡು ಸಾವಿರ ಮಕ್ಕಳಿಗೆ ಈ ಚುಚ್ಚುಮದ್ದು ನೀಡಲಾಗಿದ್ದು, ಸೋಂಕು ತಡೆಯುವಲ್ಲಿ ಶೇ 90ರಷ್ಟು ಯಶಸ್ವಿಯಾಗಿದೆ. ಲಸಿಕೆಯ ಸುರಕ್ಷತಾ ತಂಡವು ಮೂರು ಸಾವಿರ ಮಕ್ಕಳಿಗೆ ಈ ಸಲಿಕೆಯನ್ನು ನೀಡಿ ಸುರಕ್ಷತೆಯನ್ನು ಖಾತರಿ ಪಡಿಸಿಕೊಂಡಿದೆ. ಮೂರು ವಾರದಲ್ಲಿ ಅಂತರದಲ್ಲಿ ಎರಡು ಡೋಸ್ ಸಲಿಕೆಯನ್ನು (10 ಮೈಕ್ರೋಗ್ರಾಂ) ಈ ಮಕ್ಕಳಿಗೆ ನೀಡಲಾಗಿತ್ತು.
ಬಯೋಎನ್ಟೆಕ್ ಸಹಯೋಗದಲ್ಲಿ ಫೈಜರ್ ಈ ಲಸಿಕೆಯನ್ನು ಉತ್ಪಾದಿಸುತ್ತಿದೆ. ಲಸಿಕೆಯ 5 ಲಕ್ಷ ಡೋಸ್ಗಳನ್ನು ಸಕರ್ಕಾರ ಈ ವಾರ ಖರೀದಿಸಿದೆ. ‘ಪೋಷಕರು, ಕೇರ್ಟೇಕರ್ಸ್, ಶಾಲಾ ಸಿಬ್ಬಂದಿ ಮತ್ತು ಮಕ್ಕಳು ಲಸಿಕೆಗಾಗಿ ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದಾರೆ ಎಂಬುದನ್ನು ತಾಯಿಯಾಗಿ ವೈದ್ಯಳಾಗಿ ನಾನು ಬಲ್ಲೆ. ಮಕ್ಕಳಿಗೆ ಲಸಿಕೆ ನೀಡುವುದು ದೇಶವು ಸಾಂಕ್ರಾಮಿಕದ ಸನ್ನಿವೇಶದಿಂದ ಸ್ವಾಭಾವಿಕ ಸನ್ನಿವೇಶಕ್ಕೆ ಹೊರಳುವ ದ್ಯೋತಕವಾಗಿದೆ’ ಎಂದು ಎಫ್ಡಿಎ ಮುಖ್ಯಾಧಿಕಾರಿ ಜಾನೆಟ್ ವುಡ್ಕಾಕ್ ಹೇಳಿದ್ದಾರೆ.
ಕೋವಿಡ್-19 ವ್ಯಾಧಿಯಿಂದ 5ರಿಂದ 11 ವರ್ಷದ 8,300 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ 146 ಮಕ್ಕಳು ಸಾವನ್ನಪ್ಪಿದ್ದಾರೆ. ಸಾಂಕ್ರಾಮಿಕದ ಸಂದರ್ಭದಲ್ಲಿ 5 ಸಾವಿರ ಮಕ್ಕಳಲ್ಲಿ ಬಹುವಿಧದ ಊರಿಯೂತದ ರೋಗಲಕ್ಷಣ (ಎಂಐಎಸ್-ಸಿ) ಕಾಣಿಸಿಕೊಂಡಿದೆ. ಇದರಿಂದ 46 ಮಕ್ಕಳು ಅಸುನೀಗಿದ್ದಾರೆ ಎಂದು ಸಿಡಿಸಿ ಹೇಳಿದೆ.
Permission to give Pfizer Vaccine to Children in America
ಇದನ್ನೂ ಓದಿ: Vaccine price: ಮಕ್ಕಳ ‘ಜೈಕೋವ್-ಡಿ’ ಕೊರೋನಾ ಲಸಿಕೆ ಬೆಲೆ ಅಂತಿಮಗೊಳಿಸಿದ ಕೇಂದ್ರ
ಇದನ್ನೂ ಓದಿ: Vaccine: ಲಸಿಕೆಯಿಂದ ಮಾತ್ರ ಕೊರೋನಾ ನಿಯಂತ್ರಣ ಸಾಧ್ಯ
Discussion about this post