ನವದೆಹಲಿ: ಕೆರಿಬಿಯನ್ ದ್ವೀಪದ ಪೋರ್ಟ್ ರಿಕೊ ಐಲ್ಯಾಂಡ್ ಕ್ರಿಪ್ಟೊ ಕರೆನ್ಸಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿದೆ. ಆಸ್ತಿ ಖರೀದಿಸುವವರಿಗೂ ಸುಂಕ ವಿಧಿಸುವುದಿಲ್ಲ ಎಂದು ತಿಳಿಸಿದೆ. ಹೀಗಾಗಿ ಅಮೆರಿಕದಲ್ಲಿ ಅಧಿಕ ಆದಾಯ ಹೊಂದಿರುವವರು ಪೋರ್ಟ್ ರಿಕೊದಲ್ಲಿ ಹೂಡಿಕೆಗೆ ಮುಂದಾಗುತ್ತಿದ್ದಾರೆ. ಅಮೆರಿಕದಲ್ಲಿ ಬಂಡವಾಳದ ಮೇಲಿನ ಆದಾಯ ಕರ ಶೇ. 20 ಮತ್ತು ಅಲ್ಪಕಾಲದ ಆದಾಯಕ್ಕೆ ಶೇ. 37ರಷ್ಟು ತೆರಿಗೆ ಇರುವುದರಿಂದ ದುಡಿದಿದ್ದರಲ್ಲಿ ಬಹುಪಾಲು ಹಣ ತೆರಿಗೆ ರೂಪದಲ್ಲಿ ಕೈಬಿಡುತ್ತದೆ. ಇದರ ಬದಲು ಶೂನ್ಯ ತೆರಿಗೆ ಇರುವ ಪೋರ್ಟ್ ರಿಕೊ ದ್ವೀಪದಲ್ಲಿ ಕ್ರಿಪ್ಟೊ ಕರೆನ್ಸಿ ಅಥವಾ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡುವುದರಿಂದ ತೆರಿಗೆಗೆ ಹೋಗುವ ಮೊತ್ತ ಆಸ್ತಿಯಾಗಿ ಬದಲಾಗುತ್ತದೆ ಎಂಬ ನಿಲುವು ಹೊಂದಿದ್ದಾರೆ.
ಅಮೆರಿಕದ ಮೇನ್ಲ್ಯಾಂಡ್ನಲ್ಲಿ ಮೂಲ ಕಚೇರಿಯನ್ನು ಹೊಂದಿರುವ ಕಂಪನಿಗಳು ಫೆಡರಲ್ ಕಾರ್ಪೊರೇಟ್ ತೆರಿಗೆಯಾಗಿ ಶೇ.21 ಅನ್ನು ಪಾವತಿಸಬೇಕು. ಜೊತೆಗೆ ಆಯಾ ರಾಜ್ಯಗಳು ವಿಧಿಸುವ ಕರವನ್ನೂ ಕಟ್ಟಬೇಕು. ಆದರೆ, ಪೋರ್ಟ್ ರಿಕೊದಲ್ಲಿ ಕಂಪನಿಗಳಿಗೆ ಶೇ. 4ರಷ್ಟು ಮಾತ್ರ ತೆರಿಗೆ ಇದೆ. ಹೀಗಾಗಿ ಕಂಪನಿಗಳು ತಮ್ಮ ನೋಂದಾಯಿತ ಕಚೇರಿಗಳನ್ನು ಇಲ್ಲಿಗೆ ವರ್ಗಾಯಿಸಲು ಮುಂದಾಗಿವೆ.
ಹೊಸ ತಲೆಮಾರಿನ ಜನರು ಕ್ರಿಪ್ಟೊ ಕರೆನ್ಸಿಯತ್ತ ಹೆಚ್ಚು ವಾಲುತ್ತಿದ್ದಾರೆ. ಇಂಥವರನ್ನು ಆಕರ್ಷಿಸಲು ಪೋರ್ಟ್ ರಿಕೊ ಶೂನ್ಯ ತೆರಿಗೆಯ ಆಮಿಷವನ್ನು ಒಡ್ಡಿದೆ. ಹೀಗಾಗಿ ಡಿಜಿಟಲ್ ಹೂಡಿಕೆದಾರರು ಮಾತ್ರವಲ್ಲದೆ ಇಂಥ ವ್ಯವಹಾರವನ್ನು ನಡೆಸುವ ಕಂಪನಿಗಳು ಈ ದ್ವೀಪದತ್ತ ಮುಖಮಾಡಿವೆ. ಜತೆಗೆ ಗಾಲ್ಫ್ ಕ್ಲಬ್, ರೆಸ್ಟೋರಂಟ್, ಹೋಟೆಲ್ಗಳ ಮೇಲಿನ ಹೂಡಿಕೆ ಕೂಡ ಹೆಚ್ಚಿದೆ.
ದೇಶದಲ್ಲಿ ಬಲಿಷ್ಠ ಆರ್ಥಿಕತೆ ರೂಪಿಸಲು 2012ರಲ್ಲೇ ತೆರಿಗೆ ಸುಧಾರಣ ನೀತಿಯನ್ನು ಪೋರ್ಟ್ ರಿಕೊ ಸರ್ಕಾರ ಜಾರಿಗೆ ತಂದಿದೆ.
Port Rico Crypto Currency Investment
ಇದನ್ನೂ ಓದಿ: ಎಲ್ಐಸಿ ವಿಮಾ ಕಂತನ್ನು ಪಿಎಫ್ ಮೂಲಕವೂ ಜಮಾ ಮಾಡಲು ಅವಕಾಶ
Discussion about this post