ನವದೆಹಲಿ: ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿರುವುದಾಗಿ ಬಾಲಿವುಡ್ ನಟಿ, ನಿರ್ಮಾಪಕಿ ಪ್ರೀತಿ ಝಿಂಟಾ ಹೇಳಿದ್ದಾರೆ.
ಐಪಿಎಲ್ ಕ್ರಿಕೆಟ್ನಲ್ಲಿ ಪಂಬಾಬ್ ಕಿಂಗ್ ತಂಡದ ಸಹ ಮಾಲೀಕರೂ ಆಗಿರುವ ಪ್ರೀತಿ ಝಿಂಟಾ, ತಮ್ಮ ಪತಿ ಜೀನ್ ಗುಡ್ಇನಫ್ ಜತೆ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಸಂದೇಶ ಪ್ರಕಟಿಸುವ ಮೂಲಕ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
‘ಸಂಭ್ರಮದ ಸುದ್ದಿಯೊಂದನ್ನು ನಿಮ್ಮ ಜತೆ ಹಂಚಿಕೊಳ್ಳಬಯಸುತ್ತೇನೆ. ಜೈ ಝಿಂಟಾ ಗುಡ್ಇನಫ್ ಹಾಗೂ ಜಿಯಾ ಝಿಂಟಾ ಗುಡ್ಇನಫ್ (ಅವಳಿ ಮಕ್ಕಳಿಗೆ ಈ ಹೆಸರಿಡಲಾಗಿದೆ) ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ನಮಗಿಬ್ಬರಿಗೂ ಬಹಳ ಸಂಭ್ರಮವಾಗುತ್ತಿದೆ. ನಮ್ಮ ಜೀವನದ ಈ ಹೊಸ ಅಧ್ಯಾಯದ ಬಗ್ಗೆ ಇಬ್ಬರೂ ಸಂತಸ ಹಾಗೂ ಉತ್ಸಾಹ ಹೊಂದಿದ್ದೇವೆ. ವೈದ್ಯರು, ಶುಶ್ರೂಷಕಿಯರು ಹಾಗೂ ಬಾಡಿಗೆ ತಾಯಿಯಾದವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇವೆ’ ಎಂಬ ಸಂದೇಶವನ್ನೂ ವಿಡಿಯೊ ಜತೆ ಪ್ರಕಟಿಸಿದ್ದಾರೆ ಝಿಂಟಾ.
ಇನ್ನಷ್ಟು ಸುದ್ದಿಗಳು…
Discussion about this post