ಬೆಂಗಳೂರು: ಇತ್ತೀಚೆಗೆ ಇಹಲೋಕ ತ್ಯಜಿಸಿರುವ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡಿರುವ ನಟಿ ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಂನಲ್ಲಿ ಭಾವುಕ ಸಂದೇಶ ಪ್ರಕಟಿಸಿದ್ದಾರೆ.
‘ನಮಗೆಲ್ಲ ನೆನಪಿನಲ್ಲಿ ನೀವೀಗ ಎಂದಿಗಿಂತ ಸನಿಹ’ ಎಂಬ ಸಂದೇಶದೊಂದಿಗೆ, ‘ಅಪ್ಪು’ ಸರ್ ಜತೆಗಿದ್ದ ಕ್ಷಣಗಳ ಫೋಟೊಗಳನ್ನೂ ಪ್ರಕಟಿಸಿದ್ದಾರೆ ರಾಧಿಕಾ. ಜತೆಗೆ ಪ್ರೀತಿಯ ಸಂಕೇತವುಳ್ಳ ಇಮೋಜಿಯನ್ನೂ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ದಿನಕ್ಕೆ 30 ಸಾವಿರ ಜನ ಪುನೀತ್ ಸ್ಮಾರಕಕ್ಕೆ ಭೇಟಿ
‘ಅಪ್ಪು ಸರ್, ನೀವಿನ್ನು ಎಂದಿಗೂ ಇಲ್ಲಿ ಇರುವುದಿಲ್ಲ ಎಂಬುದನ್ನು ಸ್ವೀಕರಿಸಲು ಹೃದಯವು ಒಪ್ಪುತ್ತಿಲ್ಲ. ಈ ಶೂನ್ಯವನ್ನು ಭರಿಸಲಾಗದು. ನಮ್ಮ ಸಿನಿಮಾ ಇಂಡಸ್ಟ್ರಿಯು ನೀವಿಲ್ಲದೆ ಈ ಮೊದಲಿನಂತಿರದು. ನಿಮ್ಮ ಜತೆ ನಟಿಸುವ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳಲಿದ್ದೇವೆ’ ಎಂದು ರಾಧಿಕಾ ಬರೆದುಕೊಂಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಜತೆಗೆ ‘ಹುಡುಗರು’ ಹಾಗೂ ‘ದೊಡ್ಮನೆ ಹುಡ್ಗ’ ಚಿತ್ರದಲ್ಲಿ ರಾಧಿಕಾ ಪಂಡಿತ್ ನಟಿಸಿದ್ದರು.
ಪುನೀತ್ ರಾಜ್‌ಕುಮಾರ್ ಸಾವಿನ ಬಗ್ಗೆ ಈವರೆಗೆ ರಾಧಿಕಾ ಪ್ರತಿಕ್ರಿಯೆ ನೀಡಿರಲಿಲ್ಲ. ಹತ್ತು ದಿನಗಳು ಕಳೆದ ಬಳಿಕ ಪ್ರತಿಕ್ರಿಯಿಸಿರುವ ಅವರು, ಅಪ್ಪು ಸರ್ ಅಗಲಿಕೆಯಿಂದ ಅವರ ಮನೆಯವರು ಹಾಗೂ ಅಭಿಮಾನಿಗಳು ಅಪಾರವಾಗಿ ನೊಂದಿದ್ದಾರೆ. ಅವರಿಗೆಲ್ಲ ಎಷ್ಟು ನೋವಾಗಿದೆಯೋ ನಮಗೂ ಅಷ್ಟೇ ವೇದನೆಯಾಗಿದೆ. ನಮ್ಮೆಲ್ಲರ ನೆಚ್ಚಿನ ಅಪ್ಪು ಸರ್ ಈಗ ನಮ್ಮ ಜತೆಗಿಲ್ಲ ಎಂಬ ದುಃಖ ನಮ್ಮನ್ನು ಕಾಡುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಾಧುರಿ ದೀಕ್ಷಿತ್ ಪುತ್ರ ರೇಯಾನ್‌ನಿಂದ ಕ್ಯಾನ್ಸರ್ ಸೊಸೈಟಿಗೆ ಕೂದಲು ದಾನ
View this post on Instagram
























Discussion about this post