ದುಬೈ: ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ರ ಸ್ಫೋಟಕ ಬ್ಯಾಟಿಂಗನ್ನು ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಶೇನ್ ವ್ಯಾಟ್ಸನ್ ಮುಕ್ತಕಂಠದಿಂದ ಹೊಗಳಿದ್ದು 2ನೇ ಕ್ವಾಲಿಫೈಯರ್ ಪಂದ್ಯಕ್ಕೂ ಮುಂಚೆ ಕೆಲ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.
ನನ್ನ ಸಲಹೆಯೆಂದರೆ ರಿಷಭ್ ಪಂತ್ ಆಟದ ಪರಿಸ್ಥಿತಿಯ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸಂಪೂರ್ಣ ಸ್ವಾತಂತ್ರ್ಯ ತೆಗೆದುಕೊಂಡು ತಮ್ಮ ಸ್ವಾಭಾವಿಕ ಆಟ ಆಡಬೇಕು.
“ನಿಮ್ಮ ಆತ್ಮವಿಶ್ವಾಸದ ಹಾಗೂ ನಿರ್ಭೀತಿಯ ಆಟ ನಿಮ್ಮಲ್ಲಿರುವ ಉತ್ತಮ ಆಟವನ್ನು ಹೊರತರಲು ಅತ್ಯವಶ್ಯವಾಗಿದ್ದು ನೀವು ಚೆನ್ನೈ ತಂಡದ ವಿರುದ್ಧ ನೀಡಿದ ಪ್ರದರ್ಶನ ಅತ್ಯುತ್ತಮವಾಗಿತ್ತು ಎಂದರು. ನಿಮ್ಮ ಒಂದೇ ಕೈ ಹೊಡೆತದ ಸಿಕ್ಸರ್ಗಳಂತೂ ಭರ್ಜರಿಯಾಗಿದ್ದವು ಎಂದು ಹೊಗಳಿದರು.”
ಪಂತ್ರನ್ನು “ಎದುರಾಳಿ ತಂಡವು ಎಂತಹ ಸುಭದ್ರ ಸ್ಥಿತಿಯಲ್ಲಿದ್ದರೂ ಪಂದ್ಯವನ್ನು ತಮ್ಮ ಕಡೆಗೆ ಮಾಡಿಕೊಳ್ಳಬಲ್ಲ ಸಾಮರ್ಥ್ಯವಿರುವ ಹಾಗೂ ಪಂದ್ಯ ಗೆಲ್ಲಬಲ್ಲ ಆಟಗಾರ” ಎಂದು ಶೇನ್ ವ್ಯಾಟ್ಸನ್ ಪ್ರಶಂಸಿಸಿದರು.
ಯಾವುದೇ ಬೌಲರ್ ಪಂತ್ ಎದುರು ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸುತ್ತಿದ್ದರೆ ಅವನಿಗೇ ಹೆಚ್ಚು-ಹೆಚ್ಚು ದಾಳಿ ನಡೆಸುವ ಅವಕಾಶ ನೀಡಿ, ಇಲ್ಲವಾದರೆ ಯಾವುದೇ ಸಮಯದಲ್ಲಿ ರಿಷಭ್ ಪಂತ್ ನಿಮ್ಮಿಂದ ಪಂದ್ಯವನ್ನು ಕಿತ್ತುಕೊಂಡು ನಿಮಗೆ ಸೋಲಿನ ರುಚಿ ತೋರಿಸಬಹುದು ಎಂದು ಎದುರಾಳಿ ತಂಡದ ನಾಯಕರಿಗೆ ಎಚ್ಚರಿಕೆಯ ಕಿವಿಮಾತು ಹೇಳಿದರು.
Rishbh Pant has the ability to take the game away from the opposition single handedly Shane Watsonf
ಇದನ್ನೂ ಓದಿ: ಇನ್ನೂ ಎರಡು ಎಸೆತಗಳಿರುವಂತೆಯೇ ಚೆನ್ನೈ ತಂಡವನ್ನು ಫೈನಲ್ಗೇರಿಸಿದ ಧೋನಿ
ಇದನ್ನೂ ಓದಿ: IPL 2021 | ಪ್ಲೇ ಆಫ್ಗೂ ಮುನ್ನ ಆರ್ಸಿಬಿ ಬಯೋಬಬಲ್ ತೊರೆದ ಇಬ್ಬರು ಆಟಗಾರರು: ಕಾರಣವೇನು?
Discussion about this post