ಭಾರತೀಯ ಪ್ರೇಕ್ಷಕರು ಬಹಳ ಕಾತುರದಿಂದ ಕಾಯುತ್ತಿರುವ ಸಿನಿಮಾವೊಂದರ ಟ್ರೇಲರ್ ಬಿಡುಗಡೆಯಾಗಿದೆ. ತಮ್ಮ ತಮ್ಮ ಮೊಬೈಲ್ಗಳಲ್ಲಿ ಟ್ರೇಲರ್ ವೀಕ್ಷಿಸಿದ ಜನರು ಸಿನಿಮಾ ನೋಡಲು ಕಾತುರತೆ ಹೆಚ್ಚಿಸಿಕೊಂಡಿದ್ದಾರೆ. ಅದುವೇ ಆರ್ಆರ್ಆರ್. ಸಿನಿಪ್ರಿಯರು ಬಹಳ ಆಕಾಂಕ್ಷೆಯಿಂದ ಕಾಯುತ್ತಿದ್ದ ಎಸ್.ಎಸ್.ರಾಜಮೌಳಿ ನಿರ್ದೇಶನದ, ಜ್ಯೂನಿಯರ್ ಎನ್ಟಿಆರ್, ರಾಮ್ ಚರಣ್ ತೇಜ, ಆಲಿಯಾ ಭಟ್ ನಟನೆಯ ಆರ್ಆರ್ಆರ್ ಸಿನಿಮಾದ ಟ್ರೈಲರ್ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ಇದಕ್ಕೆ ಜನರಿಂದ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಟ್ರೇಲರ್ನಲ್ಲಿ ಎನ್ಟಿಆರ್, ರಾಮ ಚರಣ್ ತೇಜ, ಅಜಯ್ ದೇವಗನ್ ಅಭಿನಯ, ಫೈಟಿಂಗ್, ಆಲಿಯಾ ಭಟ್ ಹೊಸ ಗೆಟಪ್ಗೆ ಎಲ್ಲರೂ ಫಿದಾ ಆಗಿದ್ದಾರೆ. ಇನ್ನುಳಿದಂತೆ ಶ್ರೀಯ ಶರಣ್, ಒಲಿವಿಯ ಮೋರಿಸ್, ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ.
ರಾಮ ಚರಣ್ ತೇಜ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಥ್ರಿಲ್ ಹುಟ್ಟು ಹಾಕಿದ್ದಾರೆ. ಈಗಾಗಲೇ ಬಾಹುಬಲಿಯಂತಹ ಮೆಗಾ ಹಿಟ್ ಸಿನೆಮಾ ನಿರ್ದೇಶಿಸಿರುವ ರಾಜಮೌಳಿ ಈ ಚಿತ್ರದಲ್ಲೂ ತಮ್ಮ ನಿರ್ದೇಶನ ಕಲೆಯನ್ನು ತೋರಿಸಿದ್ದಾರೆ. ಲಾಂಚ್ ಆಗಿ ಕೇವಲ 6 ಗಂಟೆಗಳಲ್ಲಿ 9.6 ಮಿಲಿಯನ್ ಲೈಕ್ಸ್ ಪಡೆದಿದ್ದು, ಇದರ ಇನ್ನೊಂದು ಹೆಗ್ಗಳಿಕೆ.
ಡಿವಿವಿ ಎಂಟರ್ಟೈನ್ಮೆಂಟ್ಸ್ ಸಂಸ್ಥೆಯು ಸುಮಾರು ₹400 ಕೋಟಿಯಲ್ಲಿ ನಿರ್ಮಿಸುತ್ತಿರುವ ಈ ಚಿತ್ರವು 20ನೇ ಶತಮಾನದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೋಮರಂ ಭೀಮ್ ಅವರ ಜೀವನ ಕಥೆಯನ್ನು ಆಧರಿಸಿದೆ. 3.10 ನಿಮಿಷಗಳ ಈ. ಟ್ರೇಲರ್ ನಲ್ಲಿ ಕಥೆ ಏನಿರಬಹುದು ಎಂದು ನಿರ್ದೇಶಕರು ಎಲ್ಲೂ ಬಿಟ್ಟುಕೊಟ್ಟಿಲ್ಲ. ಈ ಚಿತ್ರದಲ್ಲೂ ಭರ್ಜರಿ ಸೆಟ್ ಹಾಗೂ ವಿಎಫ್ಎಕ್ಸ್ ಕೂಡ ಬಳಸಲಾಗಿದೆ. ಎಂಎಂ ಕೀರವಾಣಿ ಸಂಗೀತ ನೀಡಿದ್ದು, ಹಾಡುಗಳು ಕೂಡ ಸಾಕಷ್ಟು ಹಿಟ್ ಆಗಿವೆ.
ಇದೆ ಬರುವ ಜನವರಿ 7ರಂದು ಚಿತ್ರ ಬಿಡುಗಡೆ ಆಗಲಿದ್ದು, ಅಭಿಮಾನಿಗಳಿಗೆ ಸಂಕ್ರಾಂತಿ ಉಡುಗೊರೆ ಆಗಲಿದೆ. ಈಗಾಗಲೇ ಪೋಸ್ಟರ್ ಹಾಗೂ ಹಾಡುಗಳ ಮೂಲಕ ಸಾಕಷ್ಟು ಪ್ರಚಾರ ಪಡೆದ ಈ ಚಿತ್ರ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡುವ ಮೂಲಕ ಮತ್ತಶ್ಟು ಗಳಿಕೆ ಮಾಡುವುದು ಪಕ್ಕಾ ಆಗಿದೆ. ಟ್ರೇಲರ್ಗರ ಇಷ್ಟು ರೆಸ್ಪಾನ್ಸ್ ಸಿಕ್ಕಿದೆ, ಅಂದಮೇಲೆ ಸಿನೆಮಾ ಸೂಪರ್ ಹಿಟ್ ಆಗುತ್ತದೆ ಎಂಬುದು ಸಿನಿ ಪ್ರಿಯರ ಮಾತು.
ಇದನ್ನೂ ಓದಿ: ಗೌರಿ ಲಂಕೇಶ್ ಜೀವನ ಆಧರಿಸಿ ನಿರ್ಮಾಣವಾಗುತ್ತಿದೆ ಸಾಕ್ಷ್ಯಚಿತ್ರ; ಕವಿತಾ ಲಂಕೇಶ್ ನಿರ್ದೇಶನ
(RRR Trailer released here is the twitter review)
Discussion about this post