ಕನ್ನಡದಲ್ಲಿ ಬಹಳ ಸದ್ದು ಮಾಡಿದ್ದ ನಟಿಮಣಿಯರಾದ ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್, ನಭಾ ನಟೇಶ್ ಅವರೆಲ್ಲ ತೆಲುಗು, ತಮಿಳು, ಮಲೆಯಾಳಂ ಚಿತ್ರರಂಗದಲ್ಲಿ ಮಿಂಚಿತ್ತಿರುವುದು ನಿಮಗೆಲ್ಲಾ ತಿಳಿದೇ ಇದೆ. ಈಗ ಈ ಪಟ್ಟಿಯಲ್ಲಿ ಇನ್ನೊಂದು ಹೆಸರನ್ನು ಸೇರಿದೆ. ಅದುವೇ, ಸಲಗ ಚಿತ್ರದ ನಾಯಕಿ ಸಂಜನಾ ಆನಂದ್.
ಸಲಗ ಚಿತ್ರದ ಗೆಲುವಿನ ನಂತರ ಸಂಜನಾಗೆ ಕನ್ನಡದಲ್ಲಿ ಆಫರ್ಗಳು ಬಂದಿಲ್ಲ ಎನ್ನುವ ಗುಸುಗುಸು ಇತ್ತು. ಅದು ನಿಜವೋ ಸುಳ್ಳೋ ತಿಳಿಯದು. ಅಷ್ಟರಲ್ಲಿ ಸಂಜನಾ ತೆಲುಗಿನ ಇನ್ನೂ ಹೆಸರಿಡದ ಚಿತ್ರವೊಂದಕ್ಕೆ ನಾಯಕಿಯಾಗಿ ಟಾಲಿವುಡ್ಗೆ ಹಾರಿಬಿಟ್ಟಿದ್ದಾರೆ.
ಟಾಲಿವುಡ್ ನಿರ್ಮಾಣವಾಗುತ್ತಿರುವ ಚಿತ್ರವನ್ನು ಕೋಡಿ ದಿವ್ಯಾ, ಅಂದರೆ ಹಿರಿಯ ನಿರ್ದೇಶಕ ಕೋಡಿ ರಾಮಕೃಷ್ಣ ಅವರ ಮಗಳು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ನಾಯಕ ಕಿರಣ್ ಅಬ್ಬಾವರಂ ಎಂದು ತಿಳಿದುಬಂದಿದೆ. ಚಿತ್ರವನ್ನು ಕಾರ್ತಿಕ್ ಶಂಕರ್ ಎನ್ನುವವರು ನಿರ್ದೇಶಿಸುತ್ತಿದ್ದಾರೆ.
ಇದು ಪ್ರೇಮಕಥೆಯ ಕಥಾಹಂದರವಿರುವ ಚಿತ್ರ. ಅದ್ಬುತವಾದ ತಂಡವಿದೆ. ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಇಂಥವರ ಜೊತೆ ಕೆಲಸ ಮಾಡುವುದು ಖುಷಿಯ ವಿಚಾರ ಎನ್ನುತ್ತಾರೆ ಸಂಜನಾ.
ಇದನ್ನೂ ಓದಿ: ವಿಚ್ಛೇದನದ ಬಳಿಕ ಮತ್ತೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡ ನಾಗಚೈತನ್ಯ
Discussion about this post