ನಾಗ ಚೈತನ್ಯ ಜತೆ ವಿಚ್ಛೇದನದ ಬಳಿಕ ಸಿನಿಮಾ ಕ್ಷೆತ್ರಿದಿಂದ ವಿರಾಮ ಪಡೆದಿದ್ದ ಸಮಂತಾ ರುತ್ ಪ್ರಭು ಇದೀಗ ಹಾಲಿವುಡ್ ಪ್ರವೇಶಿಸುತ್ತಿರುವ ಸುಳಿವು ನೀಡಿದ್ದಾರೆ.
ಫಿಲಿಪ್ ಜಾನ್ ನಿರ್ದೇಶನದ ‘ಅರೇಂಜ್‌ಮೆಂಟ್ಸ್ ಆಫ್ ಲವ್’ ಎಂಬ ಸಿನಿಮಾದ ಮೂಲಕ ಸಮಂತಾ ಹಾಲಿವುಡ್ ವೃತ್ತಿ ಜೀವನ ಆರಂಭಿಸಲಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಸುಳಿವು ನೀಡಿರುವ ಅವರು, ಫಿಲಿಪ್ ಜಾನ್ ಜತೆಗೆ ಇರುವ ಫೋಟೊವನ್ನೂ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Bollywood: ವಿಕ್ಕಿ ಕೌಶಲ್‌ರೊಂದಿಗೆ ಸಪ್ತಪದಿ ತುಳಿಯಲಿರುವ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್
ಹೊಸ ಜಗತ್ತಿಗೆ ತೆರೆದುಕೊಳ್ಳುತ್ತಿದ್ದೇನೆ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಸಮಂತಾ, ತಮ್ಮ ವೃತ್ತಿ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 2009ರಲ್ಲಿ ಮೊದಲ ಬಾರಿ ಆಡಿಷನ್‌ನಲ್ಲಿ ಭಾಗವಹಿಸಿದ್ದೆ. ಇದೀಗ 12 ವರ್ಷಗಳ ನಂತರ ಮತ್ತೆ ಆಡಿಷನ್‌ನಲ್ಲಿ ಭಾಗವಹಿಸಿದ್ದೇನೆ. ವೃತ್ತಿಜೀವನದಲ್ಲಿ ಹೊಸತನಕ್ಕೆ ತೆರೆದುಕೊಳ್ಳುತ್ತಿದ್ದೇನೆ. ಹೊಸ ಅವಕಾಶ ದೊರೆತಿದೆ ಎಂಧು ಅವರು ಉಲ್ಲೇಖಿಸಿದ್ದಾರೆ.
View this post on Instagram
ಸಮಂತಾ ಹಾಲಿವುಡ್ ಪ್ರವೇಶಿಸುತ್ತಿರುವ ಬಗ್ಗೆ ಅಧಿಕೃಥ ಘೋಷಣೆ ಆಗಿಲ್ಲದಿದ್ದರೂ ಸಿನಿಮಾ ಸಂಬಂಧಿತ ಹಲವು ಸಂಸ್ಥೆಗಳೂ ಆ ಕುರಿತು ಮಾಹಿತಿ ಹಂಚಿಕೊಂಡಿವೆ.
‘ನಾವು ಸಮಂತಾ ರುತ್ ಪ್ರಭು ಅವರನ್ನು ಸ್ವಾಗತಿಸಲು ಹರ್ಷಚಿತ್ತರಾಗಿದ್ದೇವೆ. ಹೆಚ್ಚು ಮಾರಾಟವಾದ ಕಾದಂಬರಿ, ‘ಅರೇಂಜ್‌ಮೆಂಟ್ಸ್ ಆಫ್ ಲವ್’ನ ಚಲನಚಿತ್ರ ರೂಪಾಂತರದಲ್ಲಿ ಅವರು ನಟಿಸಲಿದ್ದಾರೆ’ ಎಂದು ‘ಗುರು ಫಿಲ್ಮ್ಸ್’ ಇನ್‌ಸ್ಟಾಗ್ರಾಂ ಪುಟದಲ್ಲಿ ಸಂದೇಶ ಪ್ರಕಟಿಸಲಾಗಿದೆ.
View this post on Instagram
























Discussion about this post