ಮುಂಬೈ: ಬಾಲಿವುಡ್ ತಾರೆಯರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ಸಿನಿಮಾಗಳಿಂದ ಪ್ರಸಿದ್ಧರಾಗಿರುವುದೇನೋ ನಿಜ. ಅದಕ್ಕಿಂತ ಹೆಚ್ಚಾಗಿ ಅವರಿಬ್ಬರೂ ಜತೆಯಾಗಿ ಸುತ್ತಾಡುತ್ತಿದ್ದಾರೆ ಎಂಬ ಗುಸುಗುಸು ಬಾಲಿವುಡ್ ಅಂಗಳದಲ್ಲಿ ಇತ್ತೀಚೆಗೆ ಹರಿದಾಡಿತ್ತು. ಅವರಿಬ್ಬರೂ ಒಟ್ಟಿಗೆ ಸುತ್ತಾಡುತ್ತಿರುವುದು ಹಲವು ಬಾರಿ ಮಾಧ್ಯಮಗಳ ಕಣ್ಣಿಗೂ ಕಂಡುಬಂದಿದೆ. ಅಲ್ಲದೆ ಪರಸ್ಪರರ ಮನೆಗಳಿಗೂ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ.
ಇಬ್ಬರೂ ಒಂದಾಗಲು ಬಯಸಿದ್ದಾರೆ, ತಮ್ಮ ಬಾಂಧವ್ಯವನ್ನು 2022ರಲ್ಲಿ ಅಧಿಕೃತವಾಗಿ ಘೋಷಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ಇದೀಗ ಕೇಳಿಬಂದಿದೆ. ಈ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿದೆ ಎಂದು ‘ಬಾಲಿವುಡ್ ಲೈಫ್ ಡಾಟ್ ಕಾಂ’ ವರದಿ ಮಾಡಿದೆ.
‘ಸಿದ್ಧಾರ್ಥ್ ಮತ್ತು ಕಿಯಾರಾ ಸಂಬಂಧವು ಮದುವೆ ಹಂತಕ್ಕೆ ಬರುವ ವಿಚಾರದಲ್ಲಿ ಇನ್ನೂ ಆರಂಭಿಕ ಹಂತದಲ್ಲಿದೆಯಷ್ಟೆ. ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿಚಾರದಲ್ಲಿ ಏನಾಯಿತು ಎಂಬುದು ನಮಗೆಲ್ಲ ತಿಳಿದಿದೆ. ಕೊನೆಗೆ ಅವರು ನಮ್ಮನ್ನೆಲ್ಲ ಚಕಿತರನ್ನಾಗಿಸಿದರು. ಸಿದ್ಧಾರ್ಥ್ ಹಾಗೂ ಕಿಯಾರಾ ಕೂಡ ಅದೇ ರೀತಿ ಮಾಡುವ ಸಾಧ್ಯತೆ ಇದೆ’ ಎಂದು ಆಪ್ತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬಾಲಿವುಡ್ ಬ್ಯೂಟಿ ತಮನ್ನಾ ಭಾಟಿಯಾಗೆ ಹುಟ್ಟುಹಬ್ಬದ ಸಂಭ್ರಮ: ಶುಭಾಶಯಗಳ ಮಹಾಪೂರ
ಮತ್ತೊಂದು ಮೂಲದ ಪ್ರಕಾರ, ಅವರಿಬ್ಬರೂ ಹೊಸ ವರ್ಷದಲ್ಲಿ ಮದುವೆಯಾಗುವುದಿಲ್ಲ. ಆದರೆ ತಾವಿಬ್ಬರೂ ಹೊಸ ಬದುಕಿಗೆ ಅಡಿಯಿಡುವ ಬಗ್ಗೆ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ.
ಇನ್ನು ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಸಿದ್ಧಾರ್ಥ್ ಹಾಗೂ ಕಿಯಾರಾ 2022ರಲ್ಲಿ ಹಲವು ಸಿನಿಮಾಗಳಲ್ಲಿ ನಟಿಸುವುದನ್ನು ಎದುರುನೋಡುತ್ತಿದ್ದಾರೆ. ಒಟ್ಟಿನಲ್ಲಿ ಈ ಜೋಡಿ ಮುಂದಿನ ವರ್ಷ ಸಖತ್ ಬ್ಯುಸಿಯಾಗಿರುವುದಂತೂ ನಿಶ್ಚಿತ.
ಇದನ್ನೂ ಓದಿ: ಮಗಳು ವಮಿಕಾ ಫೋಟೊ ಪ್ರಕಟಿಸದ ಮಾಧ್ಯಮಗಳಿಗೆ ಅನುಷ್ಕಾ ಶರ್ಮಾ ಧನ್ಯವಾದ
Discussion about this post