ದೈಹಿಕ ಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ಹಾಗೂ ಅದನ್ನು ಸ್ಥಿರವಾಗಿ ಕಾಪಾಡಿಕೊಳ್ಳುವ ಅವಶ್ಯಕತೆಯು ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದ್ದು ಅದರತ್ತ ಸಾಮಾನ್ಯ ಜನರೂ ಹೆಚ್ಚು-ಹೆಚ್ಚು ಗಮನ ನೀಡುತ್ತಿದ್ದಾರೆ.
ಉತ್ತಮ ಆಹಾರ ಪದ್ಧತಿ ಹಾಗೂ ಸೂಕ್ತ ವ್ಯಾಯಾಮಗಳನ್ನು ತನ್ನ ದಿನಚರಿಯಲ್ಲಿ ಅಳವಡಿಸಿಕೊಳ್ಳದಿದ್ದರೆ ಉತ್ತಮ ಆರೋಗ್ಯವಂತ ಜೀವನ ನಡೆಸುವುದ ಕಷ್ಟಕರವಾಗಿದೆ. ಜನಸಾಮಾನ್ಯರಿಂದ ಹಿಡಿದು ಪ್ರಸಿದ್ಧರವರೆಗೆ ಎಲ್ಲರೂ ಇಂದು ಈ ವಿಷಯದಲ್ಲಿ ಹೆಚ್ಚಿನ ಗಮನ ನೀಡುತ್ತಿದ್ದು ಅವರು ಆಗಾಗ ಅದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಎಲ್ಲರಲ್ಲೂ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ಈ ಗುಂಪಿಗೆ ಇತ್ತೀಚಿನ ಸೇರ್ಪಡೆಯೆಂದರೆ ಹಿಂದಿ ಚಲನಚಿತ್ರ ರಂಗದ ಖ್ಯಾತ ನಟಿ ಹಾಗೂ ಪ್ರಖ್ಯಾತ ಪಟೌಡಿ ಕುಟುಂಬದ ಸದಸ್ಯೆ ಸೋಹಾ ಅಲಿಖಾನ್. ಒಂದು ಮಗುವಿನ ತಾಯಿಯಾದರೂ ತಮ್ಮ ದೇಹ ಸೌಷ್ಠವವನ್ನು ಉತ್ತಮ ಮಟ್ಟದಲ್ಲಿ ಕಾಯ್ದುಕೊಂಡಿರುವ ಸೋಹಾ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ವಾರಾಂತ್ಯದ ವ್ಯಾಯಾಮದ ವಿಡಿಯೋ ಹಂಚಿಕೊಂಡಿದ್ದು ಎಲ್ಲರಿಗೂ ಪ್ರೇರಣೆ ನೀಡುವಂಥದಾಗಿದೆ.
ದೈಹಿಕ ಬಲ ಹೆಚ್ಚಿಸಲು, ಉತ್ತಮ ದೇಹಸೌಷ್ಠವ ಕಾಪಾಡಿಕೊಳ್ಳಲು, ಹಾಗೂ ದೈಹಿಕ ಸಹಿಷ್ಣುತೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶಗಳಿಗಾಗಿ ವಿನ್ಯಾಸಗೊಳಿಸಲಾದ ವ್ಯಾಯಾಮಗಳನ್ನು ಸೋಹಾ ವಿಡಿಯೋದಲ್ಲಿ ಪ್ರದರ್ಶಿಸಿದರು, ನಮ್ಮದೇ ದೇಹಾರೋಗ್ಯ ಹಾಗೂ ದೇಹಸೌಷ್ಠವಗಳನ್ನು ಕಾಪಾಡಿಕೊಳ್ಳಲು ಮಾಡುವ ನಿತ್ಯ ವ್ಯಾಯಾಮ ಪದ್ಧತಿಯನ್ನು ತಪ್ಪಿಸಲು ಯಾವುದೇ ಸೂಕ್ತ ಕಾರಣಗಳಿರಲು ಸಾಧ್ಯವಿಲ್ಲವೆಂಬುದು ಸೋಹಾರ ಖಚಿತ ಅಭಿಪ್ರಾಯ. ಬಿಳಿಯ ಬಣ್ಣದ ವ್ಯಾಯಾಮ ಉಡುಪನ್ನು ಧರಿಸಿ ಮೈದಂಡಿಸಿದ ಸೋಹಾ, ಉತ್ತಮ ದೇಹಶಕ್ತಿ ಹಾಗೂ ದೇಹಸೌಷ್ಠವ ಹೊಂದುವಲ್ಲಿ ತಾವೆಷ್ಟು ಗಂಭೀರ ಮನಸ್ಸನ್ನು ಹೊಂದಿದ್ದಾರೆನ್ನುವುದನ್ನು ತೋರಿಸಿದರು.
ವಿಡಿಯೋದ ಪ್ರಾರಂಭದಲ್ಲಿ ತಮ್ಮ ತೋಳುಗಳ ವ್ಯಾಯಾಮವನ್ನು ಪ್ರದರ್ಶಿಸಿದ ಸೋಹಾ ತಮ್ಮ ತೋಳುಗಳಲ್ಲಿ ಹಗ್ಗದ ಸಹಾಯದಿಂದ ಅಲೆಗಳ ರೀತಿಯ ಚಲನೆಗಳನ್ನು ಪ್ರದರ್ಶಿಸಿದರು. ಇದರೊಂದಿಗೆ ಇನ್ನೂ ಕೆಲವು ವ್ಯಾಯಾಮಗಳನ್ನು ಪ್ರದರ್ಶಿಸಿದ ಸೋಹಾ ನಮ್ಮ ನಿತ್ಯಜೀವನದ ದಿನಚರಿಯಲ್ಲಿ ವ್ಯಾಯಾಮ ಎಷ್ಟು ಪ್ರಮುಖವಾದದ್ದು ಎಂದು ನಿರೂಪಿಸುವಲ್ಲಿ ಯಶಸ್ವಿಯಾದರು.
View this post on Instagram
ಇದನ್ನೂ ಓದಿ: ಬಾಹುಬಲಿ ಪ್ರಭಾಸ್ರ 25ನೇ ಚಿತ್ರಕ್ಕೆ ಅರ್ಜುನ್ ರೆಡ್ಡಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸಾರಥ್ಯ
ಇದನ್ನೂ ಓದಿ: ಆರೋಗ್ಯವೇ ಭಾಗ್ಯ ಎನ್ನುವ ಮಾತಿನಂತೆ ಮನುಷ್ಯನಿಗೆ ಹಣಕ್ಕಿಂತ ಆರೋಗ್ಯ ಸಂಪತ್ತು ಅತಿ ಮುಖ್ಯವಾದುದು
Discussion about this post