• Home
  • About Us
  • Contact Us
  • Terms of Use
  • Privacy Policy
Monday, August 10, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆರೋಗ್ಯ

Health: ವ್ಯಾಯಾಮಕ್ಕೂ ಮಾನಸಿಕ ಆರೋಗ್ಯಕ್ಕೂ ಸಂಬಂಧವಿರುವುದನ್ನು ನಿರೂಪಿಸಿದ ಅಧ್ಯಯನ

ನಿಯಮಿತ ವ್ಯಾಯಾಮ ಪದ್ಧತಿಯನ್ನು ಅನುಸರಿಸುವುದರಿಂದ ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಬಹುದು.

Shri News Desk by Shri News Desk
Nov 17, 2021, 05:42 pm IST
in ಆರೋಗ್ಯ
Physical Exercise to Boost Mental Health

ದೈಹಿಕ ಚಟುವಟಿಕೆ ಹಾಗೂ ವ್ಯಾಯಾಮಗಳಿಂದ ಉತ್ತಮ ಮಾನಸಿಕ ಆರೋಗ್ಯ

Share on FacebookShare on TwitterTelegram

ಇತ್ತೀಚೆಗೆ ನಡೆದ ಒಂದು ಅಧ್ಯಯನದ ಪ್ರಕಾರ ಸಾಂಕ್ರಾಮಿಕ ರೋಗಗಳಿಂದ ಹಾಗೂ ಸಾಮೂಹಿಕ ಆರೋಗ್ಯ ಸಮಸ್ಯೆಗಳಿಂದ ಜನರು ನರಳುವ ಸಂದರ್ಭಗಳಲ್ಲಿ ಹೆಚ್ಚಿನ ದೈಹಿಕ ಚಟುವಟಿಕೆ ಹಾಗೂ ನಿಯಮಿತ ವ್ಯಾಯಾಮ ಪದ್ಧತಿಗಳನ್ನು ಅನುಸರಿಸುವ ಮೂಲಕ ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ಕಂಡು ಬಂದಿದೆ.

ಅಧ್ಯಯನದಲ್ಲಿ ಕಂಡು ಬಂದಿರುವಂತೆ ಕೋವಿಡ್‌-19ರ ಸಮಯದಲ್ಲಿ ನಿಯಮಿತವಾಗಿ ವ್ಯಾಯಾಮ ಮಾಡುವ ಆಭ್ಯಾಸವಿದ್ದ ಜನರು ಇಂತಹ ಅಭ್ಯಾಸವಿರದಿದ್ದ ಜನರಿಗಿಂತ ಕಡಿಮೆ ಉದ್ವೇಗ ಹಾಗೂ ಖಿನ್ನತೆಯನ್ನು ಅನುಭವಿಸಿದರು. ಇದೇ ರೀತಿ, ಮನೆಯ ಹೊರಗೆ ಹೆಚ್ಚಿನ ಸಮಯ ಕಳೆಯುತ್ತಿದ್ದವರು ಮನೆಯೊಳಗೇ ಇರುತ್ತಿದ್ದ ಜನರಿಗಿಂತ ಕಡಿಮೆ ಉದ್ವೇಗ ಹಾಗೂ ಖಿನ್ನತೆಯನ್ನು ಅನುಭವಿಸಿದರು. ಈ ಸಂಗತಿಗಳನ್ನು “ಪ್ರಿವೆಂಟಿವ್‌ ಮೆಡಿಸಿನ್” ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಅಮೆರಿಕಾ ಸಂಯುಕ್ತ ಸಂಸ್ಥಾನದ ಹವಾಯ್‌, ಕೊಲೊರೇಡೋ, ಜಾರ್ಜಿಯಾ, ಉತ್ತರ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾ, ಹಾಗೂ ಮಧ್ಯ ಅಟ್ಲಾಂಟಿಕ್‌ ರಾಜ್ಯಗಳ 6 ಪ್ರದೇಶಗಳಲ್ಲಿ ನಡೆದ ಈ ಸಮೀಕ್ಷೆ-ಆಧಾರಿತ ಅಧ್ಯಯನದಲ್ಲಿ 20 ಸಾವಿರಕ್ಕೂ ಹೆಚ್ಚಿನ ಜನರು ಭಾಗವಹಿಸಿದ್ದರು.

ಈ ಅಧ್ಯಯನದಲ್ಲಿ ಕಂಡುಬಂದ ಪ್ರಮುಖ ಅಂಶವೆಂದರೆ “ಸಾಮೂಹಿಕ ಆರೋಗ್ಯ ಸಮಸ್ಯೆಗಳ ಹಾಗೂ ಸಾಂಕ್ರಾಮಿಕ ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ಜನರನ್ನು ಹೆಚ್ಚಿನ ದೈಹಿಕ ಚಟುವಟಿಕೆಯಿಂದಿರಲು ಹಾಗೂ ನಿಯಮಿತ ವ್ಯಾಯಾಮ ಪದ್ಧತಿಗಳನ್ನು ಅನುಸರಿಸಲು ಪ್ರೋತ್ಸಾಹಿಸುವುದರಿಂದ ಅವರು ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹೊಂದಲು ಸಹಾಯಕವಾಗುತ್ತದೆ. ಹೀಗೆಂದು ಹೇಳಿರುವ ಅಧ್ಯಯನವನ್ನು ಕೈಗೊಂಡ ತಂಡದ ಮುಖ್ಯಸ್ಥೆ ಡಾ.ಡೆಬೊರಾ ಯಂಗ್ ತಿಳಿಸಿದ್ದಾರೆ. ಉದ್ಯಾನವನಗಳು ಮತ್ತು ಸುಂದರ ನಿಸರ್ಗವನ್ನು ಹೊಂದಿರುವ ಪ್ರದೇಶಗಳನ್ನು ಇಂತಹ ಸಾಂಕ್ರಾಮಿಕಗಳ ಸಂದರ್ಭಗಳಲ್ಲಿ ತೆರೆದಿಟ್ಟು ಜನರು ಹೊರಾಂಗಣ ಸ್ಥಳಗಳಲ್ಲಿ ದೈಹಿಕ ಚಟುವಟಿಕೆಗಳನ್ನು ಕೈಗೊಳ್ಳುವ ವ್ಯವಸ್ಥೆಯಿರಬೇಕು ಎಂದಿದ್ದಾರೆ.

ಮಾರ್ಚ್‌ 2020ರಲ್ಲಿ ವಿಶ್ವಾದ್ಯಂತ ಕೋವಿಡ್‌ ಹರಡಿದಾಗ ಅದಕ್ಕೆ ಯಾವುದೇ ಔಷಧೋಪಚಾರಗಳು ಇರದಿದ್ದ ಕಾರಣ ಜನರು ತಮ್ಮಲ್ಲಿ ಅಂತರ ಕಾಯ್ದುಕೊಳ್ಳುವ ಹಾಗೂ ಒಳಾಂಗಣದಲ್ಲೇ ಇರುವಂತಹ ನಿಯಮಗಳನ್ನು ಸರಕಾರಗಳು ವಿಧಿಸುವಂತಾಯಿತು. ವ್ಯಾಪಾರ ಸಂಸ್ಥೆಗಳು ಹಾಗೂ ಉದ್ದಿಮೆಗಳು ತಾತ್ಕಾಲಿಕವಾಗಿ ತಮ್ಮ ವ್ಯವಹಾರದ ಅಭ್ಯಾಸಗಳನ್ನು ಬದಲಿಸಿಕೊಳ್ಳಬೇಕಾದ ಅಥವಾ ನಿಲ್ಲಿಸಬೇಕಾದ ಪರಿಸ್ಥಿತಿಗಳು ಬಂದೊದಗಿದವು. ಇಂತಹ ಸಂದಿಗ್ಧ ಪರಿಸ್ಥಿತಿಯಿಂದಾಗಿ ಸಾಮಾಜಿಕ ಕಾರ್ಯಕ್ರಮಗಳು ಕಡಿಮೆಯಾದವಲ್ಲದೇ ಬಂಧು-ಮಿತ್ರರೊಂದಿಗೆ ಸೇರುವ ಅವಕಾಶಗಳೂ ವಿರಳವಾಗಿ ಜನರು ಉದ್ವೇಗ ಹಾಗೂ ಖಿನ್ನತೆಗಳಿಂದ ನರಳುವಂತಾಯಿತು.

ದೈಹಿಕ ಚಟುವಟಿಕೆಗಳು, ವ್ಯಾಯಾಮಗಳು, ಹಾಗೂ ಮಾನವ ನಿಸರ್ಗದೊಂದಿಗೆ ಬೆರೆಯುವ ಹವ್ಯಾಸಗಳು ಮಾನಸಿಕ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳುವಲ್ಲಿ ಸಹಕಾರಿಯಾಗುತ್ತವೆಂಬ ಸಂಗತಿ ಈಗಾಗಲೇ ಅಧ್ಯಯನಗಳಿಂದ ತಿಳಿದಿರುವ ವಿಷಯವಾಗಿದೆ. ಅಮೆರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾದ ಕೈಸರ್‌ ಸಂಸ್ಥೆಯು ಕೋವಿಡ್‌ ಸಮಸ್ಯೆಯು ಉತ್ತುಂಗದಲ್ಲಿದ್ದಾಗ ವ್ಯಾಯಾಮ ಹಾಗೂ ದೈಹಿಕ ಚಟುವಟಿಕೆಗಳು ಮಾನವರ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮ ಉಂಟುಮಾಡುತ್ತವೆನ್ನುವ ಕುತೂಹಲಕಾರಿ ಸಂಶೋಧನೆ ಕೈಗೊಂಡಿತು.

ಸಮೀಕ್ಷೆಗೆ ಸಂಬಂಧಿಸಿದ ಪ್ರಶ್ನೆಗಳ ಸರಣಿಯನ್ನು 2020ರ ಏಪ್ರಿಲ್‌ನಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸಿದ 250,000 ಜನರಿಗೆ ಕಳುಹಿಸಿದ ಸಂಸ್ಥೆಯು ಅವರ ಜೀವನ ಶೈಲಿ ಹಾಗೂ ಎಲೆಕ್ಟ್ರಾನಿಕ್ ಆರೋಗ್ಯ ದಾಖಲೆಗಳು ಮುಂತಾದ ಮಾಹಿತಿಯನ್ನು ಕಲೆಹಾಕಿತು. ಕೋವಿಡ್‌-19ರ ಲಕ್ಷಣವಿದ್ದವರನ್ನು ಬಿಟ್ಟ ನಂತರ ಒಟ್ಟು ಭಾಗವಹಿಸಿದವರ ಸಂಖ್ಯೆ ಸುಮಾರು 20,000. ಇವರಲ್ಲಿ ಪ್ರತಿಯೊಬ್ಬರೂ ಕನಿಷ್ಟ 4 ಸಮೀಕ್ಷೆಗಳನ್ನು ಏಪ್ರಿಲ್‌ ಮತ್ತು ಜುಲೈ 2020ರ ಮಧ್ಯದ ಅವಧಿಯಲ್ಲಿ ಪೂರ್ಣಗೊಳಿಸಿದ್ದರು.

ಇವರಲ್ಲಿ 50 ವರ್ಷ ದಾಟಿದ್ದ ಶ್ವೇತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇವರಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ತಿಳಿಸಿರುವಂತೆ ಅವರೆಲ್ಲಾ ಸಮೀಕ್ಷೆಯ ಸಮಯದಲ್ಲಿ ಮನೆಯೊಳಗೇ ಇದ್ದು ಸುರಕ್ಷಿತವಾಗಿರುವ ಕ್ರಮ ಅನುಸರಿಸಿದವರು.

ಸಮೀಕ್ಷೆಯ ಫಲಿತಾಂಶಗಳೆಂದರೆ:

  1. ಕಾಲ ಸರಿದಂತೆ ಉದ್ವೇಗ ಮತ್ತು ಖಿನ್ನತೆಯ ವರದಿಗಳು ಕಡಿಮೆಯಾದವು.
  2. ಮಹಿಳೆಯರು ಮತ್ತು ಚಿಕ್ಕ ವಯಸ್ಸಿನವರಲ್ಲಿ ಉದ್ವೇಗ ಮತ್ತು ಖಿನ್ನತೆಗಳು ಹೆಚ್ಚಿನ ಪ್ರಮಾಣದಲ್ಲಿದ್ದರೆ ಕಪ್ಪು ವರ್ಣೀಯರು ಹಾಗೂ ಏಷ್ಯಾದ ಜನರಲ್ಲಿ ಇವು ಶ್ವೇತ ವರ್ಣೀಯರಿಗಿಂತ ಕಡಿಮೆ ಇದ್ದವು.
  3. ಕಡಿಮೆ ದೈಹಿಕ ಚಟುವಟಿಕೆಗಳನ್ನು ಹೊಂದಿದ್ದವರು ವ್ಯಾಯಾಮ ಮಾಡುತ್ತಿದ್ದವರಿಗಿಂತ ಹೆಚ್ಚು ಉದ್ವೇಗ ಹಾಗೂ ಖಿನ್ನತೆಗಳನ್ನು ಅನುಭವಿಸಿದರು.
  4. ಹೆಚ್ಚಿನ ಸಮಯ ಮನೆಗಳಿಂದ ಹೊರಗಿರುತ್ತಿದ್ದವರು ಹೆಚ್ಚಿನ ಉದ್ವೇಗವನ್ನು ಅನುಭವಿಸಿದ್ದಾಗಿ ವರದಿಯಾಗಿದ್ದು ಇದಕ್ಕೆ ಸಂಶೋದನೆಯು ಸೂಕ್ತ ವಿವರಣೆ ನೀಡಲು ಸಾಧ್ಯವಾಗಿಲ್ಲ.

ಇದರಿಂದ ನಮಗೆ ತಿಳಿದು ಬರುವ ವಿಷಯವೇನೆಂದರೆ “ಮುಂದೇನಾದರೂ ಇಂತಹ ತುರ್ತು ಪರಿಸ್ಥಿತಿಗಳು ಉದ್ಭವಿಸಿದರೆ ಉದ್ಯಾನವನಗಳು ಹಾಗೂ ಹೊರಾಂಗಣ ಪ್ರದೇಶಗಳನ್ನು ಮುಚ್ಚುವ ನಿರ್ಧಾರವನ್ನು ಅವು ಮಾನವರ ಮಾನಸಿಕ ಸ್ಥಿತಿಯ ಮೇಲೆ ಬೀರುವ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಕೈಗೊಳ್ಳಬೇಕು” ಎಂದು ಡಾ. ಯಂಗ್ ಅಭಿಪ್ರಾಯ ಪಟ್ಟಿದ್ದಾರೆ.

Study shows physical activity and exercise programs can boost the mental health during pandemic-like situations

ಇದನ್ನೂ ಓದಿ: ಆರೋಗ್ಯದ ಗುಟ್ಟು ಹಂಚಿಕೊಂಡ ಶಲ್ಪಾ ಶೆಟ್ಟಿ: ಸದಾ ಆರೋಗ್ಯವಾಗಿರಲು ಹೀಗೆ ಮಾಡಬೇಕಂತೆ ನೋಡಿ…

ಇದನ್ನೂ ಓದಿ:Ashwagandha: ಹಾಲಿನೊಂದಿಗೆ ಅಶ್ವಗಂಧ – ಆರೋಗ್ಯಕರ ಲಾಭಗಳು

Tags: FitnessLife StyleMental HealthPhysical Exercise
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In