ಚಿಕ್ಕಮಗಳೂರು: ನಿಂತಿದ್ದ ಬಸ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ, ತಂತಾನೇ ಚಲನೆಯಾದ ಅಚ್ಚರಿಯ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ತಡರಾತ್ರಿಯಲ್ಲಿ ಸಂಭವಿಸಿದೆ.
ಶನಿವಾರ ತಡರಾತ್ರಿ ಎರಡೂವರೆ ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಕಿಗೆ ಭಾಗಶಃ ಹಾನಿಯಾಗಿದ್ದ ಬಸ್ ಇನ್ನೊಂದು ಬಸ್ ಗೆ ಡಿಕ್ಕಿ ಹೊಡೆದು ನಿಂತಿದ್ದ ದೃಶ್ಯವನ್ನು ಭಾನುವಾರ ಬೆಳಗ್ಗೆ ನೋಡಿದ್ದವರಿಗೆ ಅಚ್ಚರಿ ಕಾಡಿತ್ತು.
ಕೊಟ್ಟಿಗೆಹಾರ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಖಾಸಗಿ ಬಸ್ ನಲ್ಲಿ ತಡರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಳ್ಳುತ್ತದೆ. ನಂತರ ಬಸ್ ಮುಂದಕ್ಕೆ ಚಲಿಸುತ್ತದೆ. ಈ ಸಂದರ್ಭದಲ್ಲಿ ಹೆಡ್‌ಲೈಟ್ ಡಿಮ್-ಡಿಪ್ ಮಾಡಿದಂತೆಯೂ ಕಾಣಿಸುತ್ತದೆ. ನಂತರ ಬಸ್ ಮುಂದಕ್ಕೆ ಚಲಿಸಿ ಅಲ್ಲಿ ನಿಂತಿದ್ದ ಇನ್ನೊಂದು ಬಸ್‌ಗೆ ಡಿಕ್ಕಿ ಹೊಡೆದು ನಿಲ್ಲುತ್ತದೆ. ಇಷ್ಟು ನಡೆದಿರುವ ಕುರಿತು ಸಿಸಿಟಿವಿ ಕ್ಲಿಪಿಂಗ್ ಲಭ್ಯವಾಗಿದೆ.
Sudden fire on a standing bus

























Discussion about this post