ನವದೆಹಲಿ: ಪತಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ನಟಿ ಮಂದಿರಾ ಬೇಡಿ ಇದೀಗ ಮತ್ತೆ ಸಂಪೂರ್ಣವಾಗಿ ಫಿಟ್‌ನೆಸ್ ಬಗ್ಗೆ ಗಮನಹರಿಸಲು ಪ್ರಯತ್ನಿಸುತ್ತಿದ್ದಾರೆ.
ಬೇಡಿ ಅವರ ಪತಿ, ಸಿನಿಮಾ ನಿರ್ಮಾಪಕ ರಾಜ್ ಕೌಶಲ್ ಜೂನ್‌ನಲ್ಲಿ ಮೃತಪಟ್ಟಿದ್ದರು.
ಫಿಟ್‌ನೆಸ್ ಬಗ್ಗೆ ಅಪಾರ ಕಾಳಜಿ ವಹಿಸುವ 49 ವರ್ಷ ವಯಸ್ಸಿನ ಮಂದಿರಾ ಬೇಡಿ, ವರ್ಕೌಟ್ ಮಾಡುತ್ತಿರುವಾಗ ತೆಗೆದಿರುವ ಸೆಲ್ಫಿಯೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ‘#wip #thursdayvibes’ ಎಂಬ ಸಂದೇಶದೊಂದಿಗೆ ಫೋಟೊ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: 83 Trailer: ಕಪಿಲ್ ದೇವ್ ಆಗಿ ರಣವೀರ್ ಸಿಂಗ್ ನಟನೆಯ ‘83’ ಕನ್ನಡದಲ್ಲೂ ಬರಲಿದೆ; ಸುದೀಪ್ ಸಾರಥ್ಯದಲ್ಲಿ!
ಮಂದಿರಾ ಬೇಡಿ ಪೋಸ್ಟ್ ಮಾಡಿರುವ ಫೊಟೊ ಹೀಗಿದೆ ನೋಡಿ;
View this post on Instagram
ಕೆಲ ದಿನಗಳ ಹಿಂದಷ್ಟೇ ಅವರು ‘ಹ್ಯಾಂಡ್‌ಸ್ಟ್ಯಾಂಡ್’ ವ್ಯಾಯಾಮ ಮಾಡುತ್ತಿರುವ ವಿಡಿಯೊ ತುಣುಕನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ‘ಇಂದು 33 ಹ್ಯಾಂಡ್‌ಸ್ಟ್ಯಾಂಡ್ ಮಾಡಿದೆ’ ಎಂದು ಅವರು ವಿಡಿಯೊ ಸಂದೇಶದ ಜತೆ ಬರೆದುಕೊಂಡಿದ್ದರು.
View this post on Instagram
























Discussion about this post