ಟಾಟಾ ಮೋಟರ್ಸ್ ಕಂಪನಿಯ ಸಬ್ ಕಾಂಪ್ಯಾಕ್ಟ್ ಎಸ್ಯುವಿ ‘ಪಂಚ್’ ಇಂದು (ಅಕ್ಟೋಬರ್ 18) ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.
ನೆಕ್ಸಾನ್ ನಂತರ ಟಾಟಾ ಬಿಡುಗಡೆ ಮಾಡುತ್ತಿರುವ ಎಸ್ಯುವಿ ಇದಾಗಿದ್ದು, ಪ್ರಯಾಣಿಕರ ಸುರಕ್ಷತೆಯ ಮಾನದಂಡಗಳಲ್ಲಿ 5–ಸ್ಟಾರ್ ಶ್ರೇಯಾಂಕ ಗಳಿಸಿದೆ.
ಟಾಟಾ ವೆಬ್ಸೈಟ್ ಹಾಗೂ ಮಾರಾಟ ಕೇಂದ್ರಗಳಲ್ಲಿ 21,000 ರೂಪಾಯಿ ಪಾವತಿಸಿ ‘ಪಂಚ್’ ಬುಕ್ ಮಾಡಬಹುದಾಗಿದ್ದು, ಈಗಾಗಲೇ ಬುಕಿಂಗ್ ಆರಂಭಗೊಂಡಿದೆ.
ಮಹಿಂದ್ರಾದ ಕೆಯುವಿ100, ಹುಂಡೈ ಗ್ರ್ಯಾಂಡ್ ಐ10 ನಿಯೋಸ್, ಮಾರುತಿ ಸುಜುಕಿ ಇಗ್ನಿಸ್ ಮತ್ತು ಸ್ವಿಫ್ಟ್ಗೆ ಪರ್ಯಾಯವಾಗಿರಲಿದೆ ‘ಪಂಚ್’ ಎನ್ನಲಾಗಿದೆ.
ಓದಿ: ಲವ್, ಸಸ್ಪೆನ್ಸ್, ಕ್ರೈಮ್: ಅಮೃತಾ ಅಪಾರ್ಟ್ಮೆಂಟ್ಸ್ ಸಿನಿಮಾ ಬಿಡುಗಡೆಗೆ ಸಜ್ಜು
‘ಪಂಚ್’ ಎಸ್ಯುವಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಮ್ಯಾನುವಲ್ ಹಾಗೂ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ಗಳಲ್ಲಿ ಲಭ್ಯವಿದೆ.
ಉತ್ತಮ ಗ್ರೌಂಡ್ ಕ್ಲಿಯರೆನ್ಸ್, 366 ಲೀಟರ್ ಬೂಟ್ ಸ್ಪೇಸ್, ಹರ್ಮನ್ ಇನ್ಫೊಟೇನ್ಮೆಂಟ್ ಸಿಸ್ಟಂ, ಆಟೊಮ್ಯಾಟಿಕ್ ಎಸಿ ಸೇರಿದಂತೆ ಹಲವು ವಿಶೇಷತೆಗಳನ್ನು ‘ಪಂಚ್’ ಒಳಗೊಂಡಿದೆ ಎಂದು ಕಂಪನಿ ತಿಳಿಸಿದೆ.
ಬೆಲೆ ಎಷ್ಟು?
ಟಾಟಾ ಪಂಚ್ ಎಸ್ಯುವಿ ಬೆಲೆ 5 ಲಕ್ಷ ರೂಪಾಯಿಯಿಂದ 8 ಲಕ್ಷ ರೂಪಾಯಿ ವರೆಗೆ (ಎಕ್ಸ್ ಶೋರೂಂ ಬೆಲೆ) ಇರಲಿದೆ ಎಂದು ಅಂದಾಜಿಸಲಾಗಿದೆ. ಬೆಲೆಯ ಅಧಿಕೃತ ಘೋಷಣೆಯನ್ನು ಕಂಪನಿ ಇನ್ನಷ್ಟೇ ಮಾಡಬೇಕಿದೆ.
ಓದಿ: T-20 World Cup: ಅಶ್ವಿನ್ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಿದ್ದಕ್ಕೆ ಏನಂದರು ಕ್ಯಾಪ್ಟನ್ ಕೊಹ್ಲಿ?
Discussion about this post