ಕೋವಿಡ್ ಬಳಿಕ ಜನರು ಬಳಸುವ ಒಂದಲ್ಲ ಒಂದು ಸಾಮಗ್ರಿಗಳ ಬೆಲೆ ಏರಿಕೆಯಾಗುತ್ತಿದೆ. ಇದೀಗ ಜನ ಸಾಮಾನ್ಯರ ಕಾರು ಕೊಳ್ಳುವ ಆಸೆಯೂ ಭಗ್ನವಾಗುವಂತೆ ಕಾಣುತ್ತಿದೆ. ಕಾರು ತಯಾರಕಾ ಸಂಸ್ಥೆಗಳಲ್ಲಿ ಬಳಸುವ ಉಕ್ಕು, ಪ್ಲಾಸ್ಟಿಕ್, ತಾಮ್ರ ಸೇರಿದಂತೆ ಇತರೆ ಸಾಮಗ್ರಿಗಳ ಬೆಲೆ ಹೆಚ್ಚಾಗಿರುವ ಹಿನ್ನೆಲೆ ಜನವರಿ 2022ರಲ್ಲಿ ಕಾರುಗಳ ಬೆಲೆ ಹೆಚ್ಚಿಸಲು ಎಲ್ಲಾ ಸಂಸ್ಥೆಗಳು ಮುಂದಾಗಿವೆ.
ನೆಕ್ಸಾನ್, ಟೊಯೋಟಾ, ಹಾರಿಯರ್, ಸವಾರಿ, ಮಾರುತಿ, ಮರ್ಸಿಡೀಸ್ ಬೆನ್ಸ್, ಔಡಿ (Audi) ಕಾರುಗಳ ಬೆಲೆ 2022ರಲ್ಲಿ ಏರಿಕೆಯಾಗಲಿದೆ ಎಂದು ವರದಿ ತಿಳಿಸಿದೆ. ಕಳೆದ ಒಂದು ವರ್ಷದಿಂದ ಜಾಗತಿಕ ಮಟ್ಟದಲ್ಲಿ ಭಾದಿಸುತ್ತಿರುವ ಸೆಮಿಕಂಡಕ್ಟರ್ ಕೊರತೆ, ಏರಿಕೆಯಾಗುತ್ತಿರುವ ಉಕ್ಕು ಹಾಗೂ ತಾಮ್ರದ ಬೆಲೆಯಿಂದ ವಾಹನ ತಯಾರಕಾ ಸಂಸ್ಥೆಗಳು ತೊಂದರೆಯಲ್ಲಿ ಸಿಲುಕಿವೆ. ದೇಶೀ ವಾಹನ ತಯಾರಕ ಸಂಸ್ಥೆಗಳು ಮಾತ್ರವಲ್ಲದೆ ವಿದೇಶಿ ಸಂಸ್ಥೆಗಳಾದ ಮರ್ಸಿಡೀಸ್ ಬೆನ್ಸ್ ಹಾಗೂ ಔಡಿ ಕೂಡ ಶೇ.3ರಷ್ಟು ಬೆಲೆ ಹೆಚ್ಚಿಸಲು ಮುಂದಾಗಿದೆ.
ಟಾಟಾ ಮೋಟರ್ಸ್ ಜನವರಿಯಲ್ಲಿ ಶೇ.2ರಷ್ಟು ಬೆಲೆ ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಮಾರುತಿ ಸುಜುಕಿ ಸಂಸ್ಥೆ ಕೂಡ ಶೇ.5ರಷ್ಟು ತನ್ನ ವಾಹನದ ಬೆಲೆ ಏರಿಕೆ ಮಾಡುವ ಬಗ್ಗೆ ಘೋಷಿಸಿದೆ.
The price of cars will go up in January

























Discussion about this post