ಶ್ರೀನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಪುಲ್ವಾಮಾ ಜಿಲ್ಲೆಯ ಲೇಥ್ ಪೂರ ಯೋಧ ಸ್ಮಾರಕಕ್ಕೆ ಭೇಟಿ ನೀಡಿ, 2019ರ ಪುಲ್ವಾಮಾ ದಾಳಿಯಲ್ಲಿ ಹುತ್ಮಾತ್ಮರಾದ ಕೇಂದ್ರ ಮೀಸಲು ಪಡೆಯ (ಸಿಆರ್ಪಿಎಫ್) ಯೋಧರಿಗೆ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಕೂಡ ಹಾಜರಿದ್ದರು.
ಇದಕ್ಕೂ ಮೊದಲು ಅಮಿತ್ ಶಾ ಲೇಥ್ ಪೂರ ಸಿಆರ್ಪಿಎಫ್ ಕ್ಯಾಂಪ್ಗೆ ಭೇಟಿ ನೀಡಿ, ಯೋಧರೊಂದಿಗೆ ಮಾತುಕತೆ ನಡೆಸಿದರು. ರಾತ್ರಿ ಕ್ಯಾಂಪಿನಲ್ಲೇ ತಂಗಿದ್ದು, ಯೋಧರೊಂದಿಗೆ ಭೋಜನ ಕೂಡ ಮಾಡಿದ್ದರು.
‘ಅರೆ ಸೇನಾಪಡೆ ಕಷ್ಟಸುಖಗಳೇನು ಏನು ಎಂದು ತಿಳಿದುಕೊಳ್ಳಲು ಅವರ ಜೊತೆ ಕಾಲ ಕಳೆಯಬೇಕಿತ್ತು. ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಹೀಗಾಗಿ, ನಾನು ಸಿಆರ್ಪಿಎಫ್ ಕ್ಯಾಂಪಿನಲ್ಲಿ ಒಂದು ರಾತ್ರಿ ತಂಗಿ, ಕೆಚ್ಚೆದೆಯ ಯೋಧರೊಂದಿಗೆ ಕೂತು ಭೋಜನ ಸೇವಿಸಿದ್ದೇನೆ ‘ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
‘ಜಮ್ಮು-ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ತಹಬಂದಿಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿರೀಕ್ಷೆಯಂತೆ ಅವರ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಬಹುದು’ ಎಂದಿದ್ದಾರೆ.
‘ಒಂದು ಕಾಲದಲ್ಲಿ ಕಲ್ಲುತೂರಾಟಗಳ ಸಾಮಾನ್ಯ ಎನ್ನುವಂತಾಗಿತ್ತು. ಈಗ ಅಲ್ಲಲ್ಲಿ ಕಲ್ಲುತೂರಾಟದ ಘಟನೆಗಳನ್ನ ಮಾತ್ರ ಕಾಣಬಹುದಾದರೂ, ಮೊದಲಿಗಿಂತ ಬಹಳಷ್ಟು ತಹಬಂಧಿಗೆ ಬಂದಿದೆ’ ಎಂದಿದ್ದಾರೆ.
Union home minister Amit shah spend ninght at camp and took dinner
ಇದನ್ನೂ ಓದಿ: ಭಯೋತ್ಪಾದನೆ ನಿಗ್ರಹಕ್ಕೆ ಏನು ಮಾಡಬೇಕು: ಅಧಿಕಾರಿಗಳಿಗೆ ಅಮಿತ್ ಶಾ ಪ್ರಶ್ನೆ
ಇದನ್ನೂ ಓದಿ: Kashmir: ಕಾಶ್ಮೀರದಲ್ಲಿ ನಾಗರಿಕರ ಮೇಲಿನ ದಾಳಿ: ಪಾಕಿಸ್ತಾನದ ಐಎಸ್ಐ ಹಸ್ತಕ್ಷೇಪ
Discussion about this post