ವಾಷಿಂಗ್ಟನ್: ಕೋವಿಡ್-19 ಸಾಂಕ್ರಾಮಿಕದ ಕಾರಣ ಭಾರತ, ಚೀನಾ, ಯುರೋಪ ದೇಶಗಳು ಸೇರಿದಂತೆ 50 ರಾಷ್ಟ್ರಗಳ ಪ್ರಯಾಣಿಕರ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಅಮೆರಿಕ ಸೋಮವಾರ ತೆರವುಗೊಳಿಸಿದೆ. ವಿದೇಶ ಪ್ರಯಾಣಿಕರಿಗೆ ಅಗತ್ಯವಾದ ಹೆಚ್ಚುವರಿ ಲಸಿಕೆಯ ಬೇಡಿಕೆಯ ಆದೇಶಕ್ಕೆ ಅಧ್ಯಕ್ಷ ಜೋ ಬೈಡೆನ್ ಸಹಿ ಹಾಕಿದ್ದಾರೆ. ಇದು ನವೆಂಬರ್ 8ರಿಂದ ಜಾರಿಗೆ ಬರಲಿದೆ.
“ಕೊರೊನಾ ತಡೆ ಲಸಿಕೆ ಕಾರ್ಯಕ್ರಮ ಈಗ ಎಲ್ಲ ದೇಶಗಳಲ್ಲಿ ವ್ಯಾಪಕವಾಗಿರುವ ಕಾರಣ ಕೋವಿಡ್ ಸಾಂಕ್ರಮಿಕ ತಡೆಯಲು ವಿಧಿಸಲಾಗಿದ್ದ ವಿದೇಶಿ ಪ್ರಯಾಣಿಕರ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿ ಸುರಕ್ಷಿತ ಅಂತರರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಅನುವು ಮಾಡಲಾಗಿದೆ” ಎಂದು ಆದೇಶಕ್ಕೆ ಬೈಡೆನ್ ಹೇಳಿದ್ದಾರೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಕೆಲವು ಅನ್ಯ ವ್ಯಾಧಿಯಿಂದಾಗಿ ಲಸಿಕೆ ಪಡೆಯಲು ಸಾಧ್ಯವಾಗದವರಿಗೆ ಹೆಚ್ಚುವರಿ ಅಗತ್ಯ ಲಸಿಕೆಯಿಂದ ಹೊರಗಿಡಲಾಗಿದೆ ಆದರೆ, ಈ ರೀತಿ ವಿನಾಯಿತಿ ಪಡೆದವರು ಅಮೆರಿಕದಲ್ಲಿ ಎರಡು ತಿಂಗಳಿಗಿಂತ ಹೆಚ್ಚಿದ್ದರೆ ಆಗ ಅವರೂ ಲಸಿಕೆ ಪಡೆದುಕೊಳ್ಳುವುದು ಅಗತ್ಯ ಎಂದು ಶ್ವೇತಭವನ ತಿಳಿಸಿದೆ.
33 ದೇಶಗಳ ಪ್ರಯಾಣಿಕರ ಮೇಲಿನ ನಿರ್ಬಂಧವನ್ನು ನವೆಂಬರ್ಗೂ ಮೊದಲು ತೆರವುಗೊಳಿಸಲಾಗುವುದು ಎಂದು ಅಮೆರಿಕ ಕಳೆದ ಸೆಪ್ಟೆಂಬರ್ 20ರಂದು ಹೇಳಿತ್ತು.
ಕೋವಿಡ್ ಸೋಂಕು ವಿಪರೀತವಾದ ಹಿನ್ನೆಲೆಯಲ್ಲಿ 2020ರ ಆರಂಭದಲ್ಲೇ ಅಮೆರಿಕ ಅನ್ಯ ದೇಶಗಳ ಪ್ರಯಾಣಿಕರ ಆಗಮನಕ್ಕೆ ನಿರ್ಬಂಧ ಹೇರಿತ್ತು. ವಿಶೇಷವಾಗಿ ಸೋಂಕು ಹೆಚ್ಚಿದ್ದ ಬ್ರಿಟನ್, ಮುಕ್ತ ಗಡಿ ನೀತಿ ಹೊಂದಿರುವ ಯುರೋಪ್ನ 26 ಷೆಂಗನ್ ರಾಷ್ಟ್ರಗಳಿಂದ ಬರುವವರನ್ನು ನಿಯಂತ್ರಿಸಲು ಈ ಕ್ರಮವನ್ನು ಕೈಗೊಂಡಿತ್ತು. ಇದರೊಟ್ಟಿಗೆ ಐರ್ಲೆಂಡ್, ಚೀನಾ, ಭಾರತ, ದಕ್ಷಿಣ ಆಫ್ರಿಕ, ಬ್ರಿಜೆಲ್ ನಾಗರಿಕರ ಆಗಮನವನ್ನು ಪ್ರತಿಬಂಧಿಸಿತ್ತು.
US Relax on Coronavirus Restriction for India and other nations
ಇದನ್ನೂ ಓದಿ: Corona: ದೀಪಾವಳಿ ಬಳಿಕ ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳ
ಇದನ್ನೂ ಓದಿ: ಕೊರೊನಾ ಆಯ್ತು, ಅಮೆರಿಕದಲ್ಲೀಗ ಸ್ಯಾಲ್ಮೊನೆಲ್ಲಾ ಸೋಂಕು ಹಾವಳಿ: ಏನಿದು?
Discussion about this post