ನೀವು ಚಿಕ್ಕವರಾಗಿದ್ದಾಗ ಮಲಗುವ ಸಮಯವಾದರೂ ಮಲಗಲು ಇಷ್ಟವಿಲ್ಲದೇ ಹೆತ್ತವರನ್ನು ಗೋಳು ಹುಯ್ದುಕೊಂಡಿದ್ದು ನೆನಪಿದೆಯೇ? ನಿಮ್ಮನ್ನು ಮಲಗಿಸಲು ಪೋಷಕರು ಏನೆಲ್ಲಾ ಸಾಹಸ ಮಾಡಬೇಕಾಗುತ್ತಿತ್ತೆಂಬುದು ನೆನಪಾದಾಗ ಮಂದಹಾಸವೊಂದು ನಿಮ್ಮ ತುಟಿಯಂಚಿನಲ್ಲಿ ಬಂದುಹೋಗುತ್ತದಲ್ಲವೇ?
ನಾವು ಈಗ ಹೇಳಹೊರಟಿರುವುದು ಇಂತಹುದೇ ಘಟನೆಯೊಂದನ್ನು, ಆದರೆ ಇಲ್ಲಿ ತುಂಟತನ ಮಾಡುತ್ತಿರುವುದು ಮಗುವಲ್ಲ, “ಕಿನ್ಯೀ” ಎಂಬ ಹೆಸರಿನ ಒಂದು ಹೆಣ್ಣು ಆನೆಮರಿ. ಶೆಲ್ಡ್ರಿಕ್ ವೈಲ್ಡ್ಲೈಫ್ ಟ್ರಸ್ಟ್ ಹೆಸರಿನ ವನ್ಯಜೀವಿ ಸಂರಕ್ಷಣಾ ಸಂಸ್ಥೆಯೊಂದು ಮಲಗಲು ಹಟ ಮಾಡುತ್ತಾ, ನಾನಿನ್ನೂ ಸ್ವಲ್ಪ ಹೊತ್ತು ಆಡಿಕೊಂಡಿರಬೇಕೆಂದು ಬಯಸುತ್ತಿರುವ ಆನೆ ಮರಿಯೊಂದರ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಇದು ನಮ್ಮ-ನಿಮ್ಮೆಲ್ಲರನ್ನೂ ಬಾಲ್ಯಕ್ಕೆ ಕರೆದೊಯ್ಯುವುದರಲ್ಲಿ ಸಂಶಯವಿಲ್ಲ.
ಹಂಚಿಕೊಂಡ ಅರ್ಧ ಗಂಟೆಯಲ್ಲೇ ಸುಮಾರು 50,000 ವೀಕ್ಷಣೆಗಳನ್ನು ಕಂಡಿರುವ ಈ ವಿಡಿಯೋದ ತಲೆಬರಹ ಹೀಗಿದೆ: ‘ಕಿನ್ಯೀ ಮಲಗಲು ಸಿದ್ಧಳಿಲ್ಲ, ಸಾಯಂಕಾಲದ ಹಾಲನ್ನು ಸೇವಿಸಿದ್ದಾಳೆ, ಅವಳ ಆತ್ಮೀಯ ಸ್ನೇಹಿತರೆಲ್ಲಾ ಆಗಲೇ ಮಲಗಿದ್ದಾರೆ, ನರ್ಸರಿ ಸ್ತಬ್ಧವಾಗುತ್ತಿದ್ದರೂ ಈ ಆಟದ ಮನಸ್ಸಿನ ಹುಡುಗಿ ಕಿಟಕಿಯ ಮೂಲಕ ಹೊರಬರಲು ಪ್ರಯತ್ನಿಸುತ್ತಿದ್ದಾಳೆ’.
ಕೀನ್ಯಾ ದೇಶದಲ್ಲಿ ಮೂರು ವರ್ಷಗಳ ಹಿಂದೆ ಆಗ ತಾನೇ ಹುಟ್ಟಿದ ಈ ಹೆಣ್ಣು ಆನೆಮರಿಯನ್ನು ಸಿಂಹಗಳು ಹೆಚ್ಚಾಗಿರುವ ಪ್ರದೇಶವೊಂದರಲ್ಲಿ ಅದೃಷ್ಟವಶಾತ್ ರಕ್ಷಿಸಲಾಗಿತ್ತು. ಆ ಮರಿಯನ್ನು ಅಲ್ಲಿನ ಅಧಿಕಾರಿಗಳು ಆಸ್ಥೆಯಿಂದ ಕಾಪಾಡುತ್ತಿದ್ದಾರೆ.
Viral video in Instagram shows the elephant cub Kinyei refuses to sleep still wants to play
View this post on Instagram
ಇದನ್ನೂ ಓದಿ: Viral Video: ಈ ಯುವತಿ ವಿಶ್ವದ ಅತಿ ಎತ್ತರದ ಮಹಿಳೆ, ಇದು ಗಿನ್ನಿಸ್ ರೆಕಾರ್ಡ್
ಇದನ್ನೂ ಓದಿ: Viral Video: ಟೈರ್ನಿಂದ ಕಡವೆಗೆ ಮುಕ್ತಿ
Discussion about this post