ಅಕಾಲಿಕ ಮಳೆ, ಸತತ ಪ್ರವಾಹದಿಂದ ಬೆಳೆನಾಶವಾಗಿ ಬೀದಿಗೆ ಬಂದಿರುವ ರೈತರ ನೆರವಿಗೆ ಸರ್ಕಾರ ತಕ್ಷಣವೇ ದಾವಿಸಬೇಕು.ಈ ಸಂದರ್ಭ ಕೇಂದ್ರದ ಪರಿಹಾರಕ್ಕೆ ಕಾಯದೇ ರಾಜ್ಯದ ಬೊಕ್ಕಸದ ಹಣವನ್ನು ಬಳಸಿ ಸಂಕಷ್ಟದಲ್ಲಿರುವ ರೈತರ ಹಾಗೂ ಕೂಲಿ ಕಾರ್ಮಿಕರಿಗೆ ಪರಿಹಾರ ನೀಡಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ಸಿಎಂ ಬಸವರಾಜ ಬೊಮ್ಮಾಯಿಗೆ ಸಲಹೆ ನೀಡಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ರೈತರ ಹಾಗೂ ಕೂಲಿ ಕಾರ್ಮಿಕರ ವಾಸ್ತವ ಸ್ಥಿತಿಯನ್ನು ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ ಸದನದ ಗಮನಕ್ಕೆ ತಂದಿದ್ದಾರೆ. ಅಕಾಲಿಕ ಮಳೆಯಿಂದ ಫಸಲಿಗೆ ಬಂದಿದ್ದ ಬೆಳೆ ಸಂಪೂರ್ಣ ನಾಶವಾಗಿದೆ. ಈ ವೇಳೆ ರಾಜ್ಯದ ಬೊಕ್ಕಸದ ಹಣವನ್ನು ಸಂಕಷ್ಟದಲ್ಲಿರುವ ರೈತರು ಹಾಗೂ ಕೂಲಿ ಕಾರ್ಮಿಕರಿಗೆ ನೀಡಬೇಕು ಎಂದರು.
ರಾಜ್ಯದ ಸ್ಥಿತಿ ಕೇಂದ್ರ ಸರ್ಕಾರಕ್ಕೂ ಗೊತ್ತಿದೆ. ಅಲ್ಲದೇ ನಾವು ಪರಿಹಾರಕ್ಕೆ ಪದೇಪದೆ ಮನವಿ ಮಾಡುತ್ತಿದ್ದೇವೆ.ಕೇಂದ್ರ ಕೂಡ ಸಮಿತಿ ಕಳಿಸಿ, ಪರಿಶೀಲನೆ ನಡೆಸಿ ವರದಿ ಪಡೆಯುತ್ತದೆ. ಆದರೆ, ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡುವವರೆಗೆ ಕಾಯುವುದು ಬೇಡ ಎಂದರು.
ಪರಿಹಾರ ನೀಡಲು ಹಣದ ಸಮಸ್ಯೆ ಎದುರಾದರೆ ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿ. ಇದೇ ಹಣವನ್ನು ಪರಿಹಾರ ನೀಡಿದರೆ ರೈತರಿಗೆ ಅನುಕೂಲ ಆಗುತ್ತದೆ. ಇಲ್ಲವಾದರೆ ರೈತರ ಪರಿಸ್ಥಿತಿ ಮತಷ್ಟು ಚಿಂತಾಜನಕ ಆಗುವುದರಲ್ಲಿ ಅನುಮಾನವೇ ಇಲ್ಲ. ಕೇಂದ್ರದಿಂದ ಇಂದಿಲ್ಲ, ನಾಳೆ ಹಣ ಬಂದೇ ಬರುತ್ತದೆ. ಇನ್ನೂ ಹೆಚ್ಚಿನ ನೆರವನ್ನು ಕೇಳಿ ತರುವ ಪ್ರಯತ್ನವನ್ನೂ ಮಾಡೋಣ ಎಂದು ಸಲಹೆ ನೀಡಿದರು.
Yediyurappa advises CM Bommai

























Discussion about this post