ಕನ್ನಡನಾಡಿ ಸುದ್ಧಿಜಾಲ: ಗೋಲ್ಡನ್ ಸ್ಟಾರ್ ಗಣೇಶ್ ಎಂದೇ ಖ್ಯಾತನಾಮ ಹಿರೋ ಗಣೇಶ್ ಈಗ ಸದ್ದಿಲ್ಲದೆ ಕಿರುತೆರೆಗೆ ಬರೋ ಸುದ್ಧಿ ಭಾರಿ ಸದ್ದು ಮಾಡ್ತಾ ಇದೆ. ತೀರಾ ಇತ್ತೀಚೆಗೆ ನಟಿಸಿರುವ ತ್ರಿಬಲ್ ರೈಟಿಂಗ್ ನಲ್ಲಿ ಗಣೇಶ್ ವಿಭಿನ್ನ ಹಿರೋ ಆಗಿ ಕನ್ನಡ ಪ್ರೇಕ್ಷಕರಿಗೆ ರಂಜಿಸಲಿದ್ದಾರೆ. ಬಹುತೇಕ ಶೂಟ್ ಮುಗಿಸಿರೋ ನಟ ಗಣೇಶ್ ಕಿರುತೆರೆಗೆ ಮರಳುತ್ತಿದ್ದಾರೆ.
ಜೀ ವಾಹಿನಿಯ ಕನ್ನಡ ಚಾನಲ್ ಜೀ ಕನ್ನಡದಲ್ಲಿ ನೂತನ ರಿಯಾಲಿಟಿ ಷೋ ಶುರುವಾಗಿದ್ದು, ಅದರ ಫೋಟೋ ಪ್ರೊಮೊ ನಿನ್ನೆ ಬಿಡುಗಡೆಯಾಗಿದೆ. ಈ ಕಾರ್ಯಕ್ರಮದ ಪ್ರೊಮೊ ಪೊಸ್ಟ್ ಬಿಡುಗಡೆ ಮಾಡಿರುವ ಗಣೇಶ್, ಬಹಳ ದಿನಗಳ ನಂತರ ಕಿರುತೆರೆಗೆ ಬರ್ತಾ ಇದೀನಿ, ಜೀ ಕನ್ನಡ ವಾಹಿನಿ ಮೂಲಕ, ಒಂದು ಹೊಸ ರಿಯಾಲಿಟಿ ಶೋ ಜೊತೆಗೆ, ನಿರೀಕ್ಷಿಸಿ.. ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
Discussion about this post