ಚಂದನವನ ಸುದ್ಧಿ: ನಿರ್ಮಾಪಕರಾಗಿ ಚೊಚ್ಚಲ ಹೆಜ್ಜೆ ಇರಿಸ್ತಾ ಇರೋ ಗೀತಾ ಶಿವರಾಜ್ ಕುಮಾರ್ ನಿರ್ಮಾಣದಲ್ಲಿ ’ವೇದಾ’ ಚಿತ್ರ ಸೆಟ್ಟೇರಿದ್ದು, ಸರಳವಾಗಿ ಚಾಲನೆ ಕೂಡಾ ಸಿಕ್ಕಿದೆ.
ಚಿತ್ರತಂಡ ಸರಳವಾಗಿ ಪೂಜೆ ನಡೆಸಿ, ಧ್ವನಿ ಮುದ್ರಣ ಮಾಡಿದೆ. ಚಿತ್ರದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ನಾಯಕನಟರಾಗಿದ್ದು, ನಿರ್ದೇಶಕ ಹರ್ಷ ಆಕ್ಷನ್ ಕಟ್ ಹೇಳಲಿದ್ದಾರೆ.
’ವೇದಾ’ ಚಿತ್ರದ ಬಗ್ಗೆ ಶಿವರಾಜ್ ಕುಮಾರ್ ಅಭಿಮಾನಿಗಳು ಕ್ರೇಜಿ ಆಗಿ ಕಾಯುತ್ತಿದ್ದು, ಕೆಲವೇ ದಿನಗಳಲ್ಲಿ ಚಿತ್ರೀಕರಣ ಶುರುವಾಗಲಿದೆ.
ಸೆಫ್ಟೆಂಬರ್ ೧೦ರಂದು, ಭಜರಂಗಿ-೨ ಸಹ ಬಿಡುಗಡೆಗೆ ಸಿದ್ದವಾಗಿದ್ದು, ಅಭಿಮಾನಿಗಳಿಗೆ ಹೊಸ ಗಿಫ್ಟ್ ಆಗಿದೆ.
Discussion about this post