ಕನ್ನಡನಾಡಿ ಸುದ್ಧಿ ಜಾಲ: ನಾಗ ಚೈತನ್ಯಾ ಮತ್ತು ಸಮಾಂತಾ ವಿಚ್ಛೇದನ ಪಡೆದುಕೊಳ್ಳುತ್ತೀರುವ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕವಾಗಿ ತಿಳಿಸಿದ್ದರು.
“ಹೆಚ್ಚು ಆಲೋಚನೆಯ ನಂತರ ಚಾಯ್ ಮತ್ತು ನಾನು ನಮ್ಮ ಸ್ವಂತ ದಾರಿಗಳನ್ನು ಅನುಸರಿಸಲಿದ್ದೇವೆ. ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ಒಂದು ದಶಕದ ಸ್ನೇಹವನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ. ನಮ್ಮ ಸಂಬಂಧ ಯಾವಾಗಲೂ ನಮ್ಮ ನಡುವೆ ವಿಶೇಷ ಬಾಂಧವ್ಯವನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ. ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು. ನಾವು ಮುಂದುವರಿಯಲು ಬೇಕಾದ ಪ್ರೈವೆಸಿಯನ್ನು ನಮಗೆ ನೀಡಬೇಕೆಂದು ನಾವು ವಿನಂತಿಸುತ್ತೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು” ಎಂದು ಇನ್ ಸ್ಟಾ ಗ್ರಾಮ್ ನಲ್ಲಿ ಬರೆದುಕೊಂಡಿದ್ದರು.
ಟಾಲಿವುಡ್ನ ಈ ಸ್ಟಾರ್ ದಂಪತಿ ನಾಲ್ಕು ವರ್ಷಗಳ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯವನ್ನು ಹಾಡಿದ್ದಾರೆ. ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುದ್ದಿಗೆ ಇಂದು ತೆರೆ ಬಿದ್ದಿದೆ. ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಎಂಬ ಅನುಮಾನ ಹಲವು ದಿನಗಳಿಂದಲೂ ಕೇಳಿಬರುತ್ತಲೇ ಇತ್ತು. ಆದರೆ ಕುಟುಂಬದ ಯಾರೊಬ್ಬರೂ ಅಧಿಕೃತ ಹೇಳಿಕೆ ನೀಡಿರಲಿಲ್ಲ.
ಈ ವಿಚಾರ ಅಭಿಮಾನಿಗಳಲ್ಲು ಬೇಸರ ಮೂಡಿಸಿತ್ತು. ಇದರ ಬೆನ್ನಲ್ಲೇ ಕೆಲವರು ‘ಲವ್ ಸ್ಟೋರಿ’ ಸಿನಿಮಾದ ನಾಯಕಿ ಸಾಯಿ ಪಲ್ಲವಿಯನ್ನು ಮದುವೆಯಾಗುವಂತೆ ನಾಗಚೈತನ್ಯಗೆ ಸೂಚಿಸಿದ್ದಾರೆ.
Discussion about this post