ಇತ್ತೀಚೆಗೆ ನಿಧನರಾದ ಪಂಚನಹಳ್ಳಿಯ ದೇಸಿ ಪ್ರತಿಭೆ ಸಂಚಾರಿ ವಿಜಿ ಎಂದೇ ಖ್ಯಾತಿ ಆದ ನಾಯಕ ನಟ ವಿಜಯ್ ಅಭಿನಯದ ಪುಕ್ಸಟೆ ಲೈಫು ಚಲನ ಚಿತ್ರದ ಟ್ರೇಲರ್ ಅನ್ನು ಎ೨ ಮ್ಯೂಸಿಕ್ ನವರು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದಾರೆ.
ನಿನ್ನೆ ಬಿಡುಗಡೆಯಾದ ಟ್ರೇಲರ್ ಅನ್ನು ಈಗಾಗಲೇ ೧,೧೮,೨೭೦ ನೆಟ್ಟಿಗರು ವೀಕ್ಷಿಸಿದ್ದಾರೆ. ಅರವಿಂದ್ ಕುಪ್ಲೀಕರ್ ನಿರ್ದೇಶನದ ಚಲನ ಚಿತ್ರಕ್ಕೆ ವಾಸು ದೀಕ್ಷಿತ್ , ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದಾರೆ.
ತಾರಾಗಣದಲ್ಲಿ ಸಂಚಾರಿ ವಿಜಯ್, ಅಚ್ಯುತ್ ಕುಮಾರ್, ರಂಗಾಯಣ ರಘು, ಮಾತಂಗಿ ಪ್ರಸನ್ನ ನಟಿಸಿದ್ದಾರೆ. ಸಿನೆಮಾವನ್ನು ನಾಗರಾಜು ಸೊಮಯಾಜಿ ನಿರ್ಮಾಣ ಮಾಡಿದ್ದಾರೆ.
ಸಿನೆಮಾ ರಂಗದಲ್ಲಿ ಅತಿಶೀಘ್ರದಲ್ಲಿ ರಾಷ್ಟ್ರಪ್ರಶಸ್ತಿ ಪಡೆದು ಹಲವಾರು ಸಿನೆಮಾಗಳಲ್ಲಿ ಕೆಲಸ ನಿರ್ವಹಿಸುತ್ತಿರುವಾಗಲೇ ನಿಧನರಾಗಿದ್ದು, ಈಗ ಅವರ ಸಿನೆಮಾಗಳು ರಿಲೀಸ್ ಆಗುತ್ತಿರುವುದು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ಯೂಟ್ಯೂಬ್ ನಲ್ಲಿ ಸಂಚಾರಿ ವಿಜಿ, ಪುಕ್ಸಾಟೆ ಲೈಫು, ಅಫೀಶಿಯಲ್ ಟ್ರೈಲರ್ ಎಂದು ಟ್ಯಾಗ್ ಸಹ ಮಾಡಲಾಗಿದೆ.
Discussion about this post