ಕನ್ನಡನಾಡಿ ಸುದ್ದಿಜಾಲ: ಕರ್ನಾಟಕದ ೧೫ನೇ ವಿಧಾನಸಭೆಯ ೧೦ನೇ ವಿಧಾನಸಭಾ ಅಧಿವೇಶನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸದನದಲ್ಲಿ ಕುಮಾರವ್ಯಾಸನ ಪದ್ಯ ಓದಿ, ಭಾಮಿನಿ ಷಟ್ಪದಿ ಪಾಠ ಮಾಡಿದ್ದಾರೆ
ಇದಕ್ಕೆ ಮೊದಲು ಕೇಂದ್ರದ ಬೆಲೆ ಏರಿಕೆಗೆ ಕಾರಣ ಆಯಿಲ್ ಬಾಂಡ್ ಎಂಬ ಮಾತನ್ನು ವಿರೋಧ ವ್ಯಕ್ತಪಡಿಸಿದರು
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಹಿಂದಿನ ಯುಪಿಎ ಸರ್ಕಾರ ಮಾಡಿದ ಆಯಿಲ್ ಬಾಂಡ್ಗಳೇ ಕಾರಣ ಎಂಬ ಬಿಜೆಪಿಯ ಆರೋಪಕ್ಕೆ ತಳ್ಳಿಹಾಕಿದ್ದಾರೆ. ಮೋದಿ ಸರ್ಕಾರ ಅಬಕಾರಿ ಶುಂಕ ಹೆಚ್ಚಾಗಿರುವುದೇ ಬೆಲೆ ಏರಿಕೆಗೆ ಕಾರಣ ಹೊರತು ಆಯಿಲ್ ಬಾಂಡ್ಗಳಲ್ಲ, ಅವುಗಳ ಬೆಲೆ ಕೇವಲ 1.7 ಲಕ್ಷ ಕೋಟಿ ಅಷ್ಟೇ ಎಂದು ಮನವರಿಕೆ ಮಾಡಿಕೊಟ್ಟರು. ಅಲ್ಲದೇ ತಮಿಳುನಾಡು ಬೆಲೆ ಇಳಿಸಿರುವ ಹೊತ್ತಲ್ಲಿ ಕರ್ನಾಟಕವೂ ಬೆಲೆ ಇಳಿಸಬೇಕೆಂದು ಒತ್ತಾಯಿಸಿದರು.
ಕುಮಾರ ವ್ಯಾಸನ ಪದ್ಯ ಓದಿದ ವಿಪಕ್ಷ ನಾಯಕ
ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ
ಪರಿವಾರ ಹದ್ದಿನ ನೆರವಿ, ಬಡವರ ಭಿನ್ನಪವನಿನ್ಯಾರು ಕೇಳುವರು
ಉರಿ ಉರಿವುತ್ತಿದೆ, ದೇಶ ನಾವಿನ್ನನಿರಲು
ಬಾರದೆನ್ನುತ ಜನ ಬೇಸರದ ಬೇಗೆಯಲ್ಲಿರದಲೆ ಭೂಪಾಲ ಕೇಳೆಂದ.
ಭಾಮಿನಿ ಷಟ್ಪದಿ ಗೊತ್ತಲ್ಲ ನಿಮಗೆ.. ಲಘು ಗುರುಗಳು ಇರುತ್ತವೆ. ಒಂದು ವಾಕ್ಯದಲ್ಲಿ 1,2,4,5 ನೇಯದರಲ್ಲಿ 13 ಲಘು ಗುರುಗಳಿರುತ್ತವೆ. 3ನೇಯದು ಮತ್ತು 6ನೇಯದರಲ್ಲಿ 23 ಲಘು ಗುರುಗಳಿರುತ್ತವೆ ಭಾಮಿನಿ ಷಟ್ಪದಿಯಲ್ಲಿ. ಕೊನೆಯ ಅಕ್ಷರ ಲಘುವಾದರೂ ಅದನ್ನು ಧೀರ್ಘವಾಗಿ ಉಚ್ಛರಿಸಬೇಕು, ಅದನ್ನು ಗುರು ಎಂದು ಪರಿಗಣಿಸಬೇಕು ಎಂಬುದಾಗಿ ಕನ್ನಡ ವ್ಯಾಕರಣದ ಭಾಗವಾದ ಷಡ್ಪದಿ ವಿವರಿಸಿದ್ದಾರೆ.
ಕುಮಾರವ್ಯಾಸ ಸಭಾಪರ್ವದ ಈ ಪ್ರಸಂಗದಲ್ಲಿ ಈ ಮಾತುಗಳನ್ನು ನಾರದ ಮಹರ್ಷಿ ಧರ್ಮರಾಯರಿಗೆ ಹೇಳುತ್ತಾನೆ ಎಂದು ಉಲ್ಲೇಖಿಸಿದರು.
ಕುಮಾರ ವ್ಯಾಸ ಇಂದಿಗೂ ಪ್ರಬುದ್ಧ, ಪ್ರಚಲಿತ
ವರ್ತಮಾನಕ್ಕೆ ಕುಮಾರವ್ಯಾಸನನ್ನು ತಂದ ಸಿದ್ದರಾಮಯ್ಯನವರು, ಅವತ್ತು ನಾರದ ಮುನಿಗಳು ಧರ್ಮರಾಯನಿಗೆ ಹೇಳಿದ ಮಾತುಗಳು ಇಂದಿಗೂ ಅನ್ವಯಿಸುತ್ತವೆ ಎಂದು ಪಾಠ ಮಾಡಿದರು.
ಇಡೀ ಸದನ ನಿಶ್ಯಬ್ದವಾಗಿ ಆಲಿಸಿದ್ದಲ್ಲದೆ ಕೊನೆಗೆ ಚಪ್ಪಾಳೆ ತಟ್ಟುವ ಮೂಲಕ ಸಿದ್ದರಾಮಯ್ಯನವರ ಚಿಂತನೆಗಳಿಗೆ ಮೆಚ್ಚುಗೆ ಸಲ್ಲಿಸಿದ್ದಾರೆ.

























Discussion about this post