ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಮಾಜಿ ಸಿಎಂ ಆದವರಿಗೆ ವಿಶೇಷವಾಗಿ ಇಂತಹ ಸ್ಥಳದಲ್ಲಿಯೇ ಕೂರಬೇಕು ಎನ್ನುವ ಸಂಪ್ರದಾಯವಿಲ್ಲ. ಆದರೆ ಹಿರಿತನವನ್ನ ಆಧರಿಸಿ ಮೂರನೇ ಸಾಲಿನಲ್ಲಿ ಕುರ್ಚಿ ನೀಡಲಾಗುತ್ತದೆ. ಆದರೆ ಇದನ್ನೂ ಬೇಡವೆಂದಿರುವ ಯಡಿಯೂರಪ್ಪ, ಕೊನೆಯ ಸೀಟಿನಲ್ಲಿ ಕೂತಿದ್ದರು.
ಹೈಕಮಟಂಡ್ ಮೇಲೆ ಮುನಿಸಿಕೊಂಡ್ರಾ ಅಂತ ಅಂದುಕೊಳ್ಳುವ ಹಾಗೇನೂ ಇಲ್ಲ. ಏಕೆಂದರೆ, ಸಿಎಂ ಸ್ಥಾನದಿಂದ ಕೆಳಕ್ಕೆ ಬಂದವರೇ ಮೈಕೊಡವಿ ಎದ್ದು ಪಕ್ಷವನ್ನ ಮತ್ತಷ್ಟು ಬಲಿಷ್ಟವಾಗಿ ಕಟ್ಟುವುದಾಗಿ ಘೋಷಿಸಿದ್ದಾರೆ.
ಪಕ್ಷ ಗಟ್ಟಿಯಾಗಿಸೋ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕೂಡ ಬಿಎಸ್ವೈ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಈ ನಡುವೆ ನಿನ್ನೆಯಿಂದ ಆರಂಭವಾಗಿರುವ ವಿಧಾನಸಭೆ ಅಧಿವೇಶನದಲ್ಲಿ ಯಡಿಯೂರಪ್ಪರವರ ನಡೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಸಿಎಂ ಆದವರು ಆಡಳಿತ ಪಕ್ಷದ ಮೊದಲ ಸೀಟ್ನಲ್ಲಿ ಕೂರುತ್ತಾರೆ. ಈ ಹಿಂದೆ ಯಡಿಯೂರಪ್ಪನವರು ಇದೇ ಸೀಟ್ನಲ್ಲಿ ಕುಳಿತಿದ್ದರು.
ಮಾಜಿಯಾದ ಕಾರಣ ಮೂರನೇ ಸೀಟು ಇಷ್ಟಪಡದೇ, ಲಾಸ್ಟ್ ಸೀಟ್ನಲ್ಲಿ ಕುಳಿತೆ ಸದನ ಹೇಗೆಲ್ಲಾ ನಡೆಯುತ್ತಿದೆ ಎನ್ನುವುದನ್ನ ಗಂಭಿರವಾಗಿ ಆಲಿಸುತ್ತಿದ್ದ ಬಿಎಸ್ವೈರ ಈ ನಡೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಇನ್ನೂ ಬಿಎಸ್ವೈ ಲಾಸ್ಟ್ ಸೀಟ್ನಲ್ಲಿ ಕೂರುವುದು ಇದೆ ಮೊದಲೇನಲ್ಲ. ಈ ಮೊದಲು 2011 ರಲ್ಲೂ ಬಿಎಸ್ವೈ ಅಧಿಕಾರ ಕಳೆದುಕೊಂಡು ಲಾಸ್ಟ್ ಸೀಟ್ಗೆ ಶಿಫ್ಟ್ ಆಗಿದ್ದರು ಅಂತ ಹೇಳಲಾಗ್ತಿದೆ.
ಲಾಸ್ಟ್ ಸೀಟಲ್ಲೇ ತಂತ್ರಗಾರಿಕೆಯನ್ನು ರೂಪಿಸ್ತಾ ಇದ್ದಾರೆ ಅನ್ನೋದು ಮಾತ್ರ ಸುಸ್ಪಷ್ಟ.

























Discussion about this post