ಬೆಂಗಳೂರು: ನಕಲಿ ಯುಪಿಐ ಐಡಿ ರೆಡಿ ಮಾಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಬಹಳಷ್ಟು ಅಂಗಡಿಗಳಲ್ಲಿ ಟೋಪಿ ಹಾಕಿದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಕ್ಕಪೇಟೆ ಸಮೀಪ ರಾಜಾ ಮಾರುಕಟ್ಟೆಯ ಆಭರಣ ವ್ಯಾಪಾರಿ ಟಿ.ಎ. ಸುರೇಶ್ ಅವರು ನೀದಿದ ದೂರಿನ ಮೇರೆಗೆ ಕನಕಪುರ ನಿವಾಸಿ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರಶಾಂತ್ ಅನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:: ಆಗಸ್ಟ್ ೧೪ರಂದು ೧.೦೬ ಲಕ್ಷದ ಬೆಳ್ಳಿ ದೀಪ, ಪ್ಲೀಟ್ ಮತ್ತು ಚೊಂಬು ಖರೀದಿಸಿದ್ದಾನೆ. ಗ್ರಾಹಕರು UPI ಮೂಲಕ ಪಾವತಿಸಲು ಮುಂದಾದ ಗ್ರಾಹಕ ಅಂಗಡಿಯ ಮಾಲೀಕನಿಗೆ ಯುಪಿಐ ಕೆಲಸ ಮಾಡುತ್ತಿಲ್ಲ ಎಂದಿದ್ದಾನೆ. ಇದೇ ವೇಳೆ ಮಾಲೀಕನ ಪೊನ್ ನಂಬರ್ ಪಡೆದು, ಅದರಲ್ಲಿ ತನ್ನ ಫೊನ್ ಪೇ ಖಾತ್ರೆಯ ಎರಡು ಡೆಬಿಟ್ ಸಂದೇಶ ತೋರಿಸಿದ್ದಾನೆ.
ಮಾರನೇ ದಿವಸ ಬ್ಯಾಂಕ್ ನಲ್ಲಿ ವಿಚಾರಿಸಿದಾಗ ಬ್ಯಾಲೆನ್ಸ್ ಜಮೆಯಾಗಿರುವುದಿಲ್ಲ. ಮಾಲೀಕ ಗ್ರಾಹಕನನ್ನು ವಿಚಾರಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ. ಹೀಗಾಗಿ ಆ. ೧೭ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಂಗಡಿ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ನಂತರ ಪಶ್ಚಿಮ ವಿಭಾಗದ ಅಪರಾಧ ಪೊಲೀಸರು ಆರೋಪಿ ಪ್ರಶಾಂತ್ ಮೇಲೆ ಕ್ರಮ ಜರುಗಿಸಿದ್ದಾರೆ.
ಇದೇ ಮಾದರಿಯಲ್ಲಿ ಪ್ರಶಾಂತ್ ರಾಮಮೂರ್ತಿ ನಗರದ ಚಿನ್ನದ ವ್ಯಾಪಾರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ವಿಜಯನಗರದ ಅಂಗಡಿಯೊಂದರಲ್ಲಿ ಕ್ಯಾಮೆರಾ ಖರೀದಿಸಿರುವುದು ಸಹ ಗೊತ್ತಾಗಿದೆ. ಅದಕ್ಕೆ ನಕಲಿ ಪಾವತಿ ಮಾಡಿದ್ದಾರೆಯೇ ಎಂದು ಇನ್ನೂ ತಿಳಿದು ಬಂದಿಲ್ಲ.
ಆತನಿಂದ ೧೦ ಗ್ರಾಂ ಚಿನ್ನಾಭರಣ, ೧.೫ ಕೆ.ಜಿ ಬೆಳ್ಳಿ, ಕ್ಯಾಮೆರಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಾರಂಭದಲ್ಲಿ ಊರಿನಲ್ಲಿ ವಂಚನೆ ನಡೆಸಿದ್ದು ಮತ್ತೆ ಬೇರೆ ಕಡೆ ಸಹ ವಂಚನೆ ಶುರು ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
























Discussion about this post