ಚಿಕ್ಕಮಗಳೂರು: ಬಣಕಲ್ ಬಳಿಯ ಜಾವಳಿ ಗ್ರಾಮದ ಕೃಷ್ಣೇಗೌಡ ಎಂಬುವವರ ಮೊಬೈಲ್ ಸಂಖ್ಯೆಗೆ ಈ +೯೧೮೩೪೬೮೫೩೬೪ ನಂಬರ್ ನಿಂದ ಸುಮ್ನೆ ಒಂದು ಕಾಲ್ ಬರತ್ತೆ, ಯಾವುದೇ ಕಾಲ್ ಬಂದರೂ ರಿಸೀವ್ ಮಾಡೋ ನಮ್ಮಂಥವರ ಹಾಗೆನೇ ರಿಸೀವ್ ಮಾಡಿರ್ತಾರೆ. ಆತ ಜಾವಳಿ ಬ್ಯಾಂಕ್ ನ ಮ್ಯಾನೇಜರ್ ಅಂತ ಹೇಳಿಕೊಂಡಾಗ, ಅದರಲ್ಲಿ ತಮ್ಮ ಖಾತೆ ಇದ್ದುದರಿಂದ ನಿಜ ಅಂತ ನಂಬಿರ್ತಾರೆ.
ಕೃಷ್ಣೇಗೌಡರ ಮೊಬೈಲ್ ಗೆ ಬಂದಂತಹ OTP ಕೇಳಿದಾಗ, ಏನೋ ಅಗತ್ಯದ ಮಾಹಿತಿ ಬೇಕಾಗಿರಬಹುದು ಅನ್ನೋ ಉದ್ದೇಶದಿಂದ ಕೊಟ್ಟೇಬಿಟ್ಟಿದ್ದಾರೆ. ಹೀಗೆ OTP ಪಡೆದುಕೊಂಡ ಕಳ್ಳರು ತಕ್ಷಣವೇ ಅಲರ್ಟ್ ಆಗಿ ಒಂದು ಲಕ್ಷ ರೂ ಡ್ರಾ ಮಾಡಿಕೊಂಡಿದ್ದಾರೆ.
ಅನುಮಾನ ಬಂದ ತಕ್ಷಣ ಜಾವಳಿ ಬ್ಯಾಂಕ್ ಗೆ ಹೋಗಿ ವಿಚಾರಿಸಿದ ಕೃಷ್ಣೇಗೌಡರಿಗೆ ತಾವು ಮೋಸ ಹೋಗಿರೋದು ಖಚಿತವಾಗಿದೆ. ಚಿಕ್ಕಮಗಳೂರು ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿರುವ ಕೃಷ್ಣೇಗೌಡರು, ತನಿಖೆಗಾಗಿ ಕಾಯ್ತಾ ಇದ್ದಾರೆ.
ಹೀಗೆ ಸುಮ್ ಸುಮ್ನೆ ನಿಮ್ಮನ್ನ ಯಾಮಾರಿಸೋಕೆ ಯಾರಾದರೂ ಕಾಲ್ ಮಾಡಬಹುದು, ನಿಮ್ಮ ಖಾತೆಯಿಂದ ಹಣ ಹೊಡಿಯೋಕೆ ಅಂತಾನೆ ಸ್ಕೆಚ್ ಹಾಕ್ಕೊಂಡು OTP ಕೇಳಬಹುದು. ಆದ್ರೆ ಗ್ರಾಹಕರೇ ಎಚ್ಚರ! OTP ಯಂತಹ ಮಹತ್ವದ ವಿಚಾರವನ್ನು ಯಾರ ಬಳಿಯೂ ಹಂಚಿಕೊಬಾರದು.
ATM PINCODE/ PASSWORD ಕೂಡಾ ಯಾರಿಗೂ ಕೊಡಬಾರದು. ಇಂಥಾ ಪ್ರಕರಣ ದಿನೇ ದಿನೇ ಹೆಚ್ಚುತ್ತಿದ್ದು, ಇಮೇಲ್, SMS ಮೂಲಕ ಹಣ ಲಪಟಾಯಿಸುವವರ ದಂಡು ದಿನೇ ದಿನೇ ಬೆಳೆಯುತ್ತಾನೆ ಇದೆ. ಎಚ್ಚರ ಗ್ರಾಹಕ ಎಚ್ಚರ!

























Discussion about this post