ಮೈಸೂರು: ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಮೂವರನ್ನು ಪೊಲೀಸರು ಈ ಸಂಬಂಧ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಮೈಸೂರು ಜಿಲ್ಲೆಯ ಬನ್ನೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ 59 ಗ್ರಾಂ ಚಿನ್ನಾಭರಣನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಕೇತುಪುರ ಗ್ರಾಮದ ತಾಯಮ್ಮ ಮನೆಯಲ್ಲಿ ಕಳವು ನಡೆದಿತ್ತು. ಆರೋಪಿಗಳಿಂದ 36 ಗ್ರಾಂ ಸರ. 10 ಗ್ರಾಂ ಬ್ರಾಸ್ಲೈಟ್. 3 ಗ್ರಾಂ ಉಂಗುರ, 4 ಗ್ರಾಂ ಓಲೆ, 6 ಗ್ರಾಂ ಹ್ಯಾಂಗಿಂಗ್ ಮೊದಲಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಒಟ್ಟು ೫೯ ಗ್ರಾಂ ಚಿನ್ನ ಕಳವು ಮಾಡಿದ್ದರು ಎನ್ನಲಾಗಿದೆ. ಅದಲ್ಲದೆ ಚಿನ್ನದ ಆಭರಣಗಳ ಜೊತೆಗೆ 15 ಸಾವಿರ ನಗದು ಕಳ್ಳತನ ಮಾಡಿದ್ದರು. ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

























Discussion about this post