ಬೆಂಗಳೂರು: ನಗರದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಇಂದು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯುತ್ತದೆ. ಮರಣೋತ್ತರ ಪರೀಕ್ಷೆ ಬಳಿಕ ಅಸಲಿ ಸತ್ಯ ಬಯಲಾಗಲಿದೆ.
ಕುಟುಂಬದ ಸದಸ್ಯರು ಕಳೆದ ಐದಾರು ದಿನಗಳ ಹಿಂದೆ ಅಂದರೆ ಸೋಮವಾರ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಮೃತ ದೇಹಗಳ ಮರಣೋತ್ತರ ಪರೀಕ್ಷೆ ಬಳಿಕ ಹಲವು ವಿಚಾರ ಬಯಲಾಗಲಿದೆ.
ಸ್ಥಳೀಯ ಪತ್ರಿಕೆ ಸಂಪಾದಕರಾದ ಶಂಕರ್ರವರ ಪತ್ನಿ, ಮಗ, ಇಬ್ಬರು ಹೆಣ್ಣುಮಕ್ಕಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಓರ್ವ ಮೊಮ್ಮಗ ಸಾವು ಹಸಿವಿನಿಂದ ಸಾವನ್ನಪ್ಪಿರುವ ಸಾಧ್ಯತೆಯಿದೆ. ಆದರೆ ಮನೆಯಲ್ಲಿದ್ದ ಎರಡೂವರೆ ವರ್ಷದ ಮಗು ಪ್ರೇಕ್ಷಾ ಬದುಕುಳಿದಿದೆ. ಮಗು ಬದುಕುಳಿಯಲು ಶಂಕರ್ ಮಗ ಅಂದರೆ ಮಗುವಿನ ಮಾವ ಮಧುಸಾಗರ್ ಕಾರಣವಿರಬಹುದು. ತಾಯಿ ಮತ್ತು ಸೋದರಿಯರು ನೇಣಿಗೆ ಶರಣಾದ 1-2 ದಿನ ಬಳಿಕ ಮಧುಸಾಗರ್ ಆತ್ನಹತ್ಯೆಗೆ ಶರಣಾಗಿರುವ ಅನುಮಾನವಿದ್ದು, ನಾಲ್ವರ ಶವಕ್ಕಿಂತ ಮಧುಸಾಗರ್ ದೇಹ ಕಡಿಮೆ ಕೊಳೆತಿದೆ. ಶವ ಸಾಗಿಸುವಾಗ ಪೊಲೀಸರು ಈ ಅಂಶವನ್ನು ಗಮನಕ್ಕೆ ಬಂದಿದೆ.
ಅನೈತಿಕ ಸಂಬಂಧದ ಶಂಕೆ
ಮನೆಗೆ ಹುಡುಗಿಯೊಬ್ಬಳು ಕೆಲಸ ಮಾಡಲು ಬರುತ್ತಿದ್ದಳು. ಗುಲ್ಬರ್ಗ ಮೂಲದ ಹುಡುಗಿ ಮನೆಗೆಲಸ ಮಾಡಿಕೊಂಡಿದ್ದಳು. ಆ ಹುಡುಗಿಯನ್ನು ಶಂಕರ್ ಚೆನ್ನಾಗಿ ನೋಡಿಕೊಳ್ಳುತ್ತಿದ್ದರಂತೆ. ಆದರೆ ಇದು ಶಂಕರ್ ಪತ್ನಿಯ ನಡುವೆ ವಿರಸ ಮೂಡಿತ್ತು. ಆಕೆ ಜಗಳ ಮಾಡಿ ಹುಡುಗಿಯನ್ನ 4 ತಿಂಗಳ ಹಿಂದೆನೇ ಓಡಿಸಿಬಿಟ್ಟಿದ್ದರು. ಆ ನಂತರ ಮನೆಗೆಲಸಕ್ಕೆ ಮತ್ತೊಬ್ಬಳು ಹುಡುಗಿ ಬರುತ್ತಿದ್ದಳಂತೆ, ಆದ್ರೆ ಆಕೆ ಸಹ ಭಾನುವಾರದಿಂದ ಭಾನುವಾರದಿಂದ ಮನೆ ಕಡೆ ಬಂದಿಲ್ಲ ಅನ್ನೋದು ಗಮನಿಸಬೇಕಾದ ಅಂಶ.
ಮನೆಯಲ್ಲಿ ಯಾರು ಇಲ್ಲದಿದ್ದರೂ, ಊಟ, ತಿಂಡಿಯಿಲ್ಲದಿದ್ದರೂ ಮಗು ಹೇಗೆ ಬದುಕುಳಿದಿದೆ? ಎಂಬುದು ಸಹ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ವಿನಾಯಕನಗರದಲ್ಲಿ ಇದೇ ಐಷಾರಾಮಿ ಮನೆಯಲ್ಲಿ ಕೆಳ ಮಹಡಿಯನ್ನು ಬಾಡಿಗೆಗೆ ನೀಡಲಾಗಿತ್ತು. ಮೊದಲ ಮಹಡಿಯಲ್ಲಿ ಹಾಲ್, ಕಿಚನ್ ಹಾಗೂ ಒಂದು ಕೊಠಡಿ ಇತ್ತು. ಆ ಕೊಠಡಿಯಲ್ಲಿ ಶಂಕರ್ ಮತ್ತು ಅವರ ಪತ್ನಿ ಭಾರತಿ ಇರುತ್ತಿದ್ದರು. ಅದೇ ಕೊಠಡಿಯಲ್ಲಿ ಕಿರಿಯ ಪುತ್ರಿ ಸಿಂಧುರಾಣಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಸಿಂಧುರಾಣಿ ಸತ್ತ ಕೊಠಡಿಯ ಬೆಡ್ ಮೇಲೆ 9 ತಿಂಗಳ ಗಂಡು ಮಗು ಮೃತದೇಹ ಇತ್ತು. ಹಾಲ್ನಲ್ಲಿದ್ದ ಫ್ಯಾನಿಗೆ ಭಾರತಿ ನೇಣು ಬಿಗಿದುಕೊಂಡಿದ್ದಾರೆ. ಎರಡನೇ ಮಹಡಿಯಲ್ಲಿ ಮೂರು ಕೊಠಡಿಗಳಿದ್ದವು. ಮೂವರು ಮಕ್ಕಳಿಗೆ ಮೂರು ಕೊಠಡಿ ಇತ್ತು. ಎರಡು ಪ್ರತ್ಯೇಕ ಕೊಠಡಿಯಲ್ಲಿ ಹಿರಿಯ ಪುತ್ರಿ ಸಿಂಚನ ಮತ್ತು ಮಗ ಮಧುಸಾಗರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧುಸಾಗರ್ ಕೊಠಡಿಯಲ್ಲೇ ಬದುಕುಳಿದ ಮಗು ಪ್ರೇಕ್ಷಾ ಇತ್ತು.
ದೂರು ದಾಖಲಿಸಿರುವ ಶಂಕರ್ ಹೀಗೆ ಹೇಳಿದ್ದಾರೆ: ’ನನ್ನ ಎಲ್ಲ ಆಸ್ತಿ, ಹಣವನ್ನು ಪತ್ನಿ, ಮಗನಿಗೆ ನೀಡಿಬಿಟ್ಟಿದ್ದೆ. ನನಗೆ ಹಣ ಬೇಕಾದಾಗ ಅವರನ್ನೇ ಕೇಳಿ ಪಡೆಯಬೇಕಿತ್ತು’ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 12ರ ಘಟನೆ ಬಗ್ಗೆಯೂ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಪತ್ನಿ, ಮಗನ ಜೊತೆ ಶಂಕರ್ ಭಿನ್ನಾಭಿಪ್ರಾಯ ಹೊಂದಿದ್ದರು. ಪತ್ನಿಯ ಜೊತೆ ಹೆಣ್ಣುಮಕ್ಕಳ ವಿಚಾರವಾಗಿ ಭಿನ್ನಾಭಿಪ್ರಾಯ ಹೊಂದಿದ್ದರು. ಹೆಣ್ಣುಮಕ್ಕಳನ್ನ ಗಂಡನ ಮನೆಗೆ ಕಳಿಸುವಂತೆ ಶಂಕರ್ ಹೇಳುತ್ತಿದ್ದರಂತೆ. ಆದರೆ ಕಳಿಸಲ್ಲ ಕುಟುಂಬದಲ್ಲಿ ಹೊಂದಾಣಿಕೆಯ ಕೊರತೆ ಇತ್ತು. ಎಲ್ಲರ ನಡುವೆ ಹಣಕ್ಕಾಗಿ ಕಿತ್ತಾಟ ಇರುವುದು ಎಫ್ ಐ ಆರ್ ನಿಂದ ತಿಳಿದುಬಂದಿದೆ.
ಸಂಜೆ 4.30ಕ್ಕೆ ಶಂಕರ್‌ಗೆ ಮಗ ವಾಟ್ಸಾಪ್ ಮೆಸೇಜ್ ಮಾಡಿದ್ದ. 10 ಲಕ್ಷ ರೂ. ನೀಡುತ್ತೇನೆ ಮನೆಗೆ ಬಾ ಅಪ್ಪಾ ಎಂದು ಮೆಸೇಜ್ ಮಾಡಿದ್ದಾನೆ. ಇದಕ್ಕೆ ಶಂಕರ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸೆಪ್ಟೆಂಬರ್ 16ರಂದು ಶಂಕರ್ ಮನೆಯ ಬಳಿ ಬಂದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ವಾಪಸ್ ಹೋಗಿದ್ದಾರೆ. ಆದ್ರೆ ಮನೆ ಬಳಿ ಯಾರೂ ಕಂಡಿಲ್ಲ. ನಿನ್ನೆ ಸಂಜೆ ಮತ್ತೆ ಮನೆ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮೃತ ಮಕ್ಕಳು ಚೆನ್ನಾಗಿ ಓದಿದ್ದರು. ಬಿಇ ಮುಗಿಸಿ ಖಾಸಗಿ ಕಂಪನಿಯಲ್ಲಿ ಸಿಂಚನಾ ಕೆಲಸ ಮಾಡಿಕೊಂಡಿದ್ದಳು. ಮಗು ಜನಿಸಿದ ಬಳಿಕ ಸಿಂಚನಾ ಕೆಲಸಕ್ಕೆ ಹೋಗುವುದು ನಿಲ್ಲಿಸಿದ್ದಳು. 2ನೇ ಮಗಳು ಸಿಂಧುರಾಣಿ ಎಂಬಿಎ ಪದವೀಧರೆಯಾಗಿದ್ದಳು. ಮಗ ಮಧುಸಾಗರ್ ಬಿಇ ಪದವೀಧರನಾಗಿದ್ದು, ಮಧು ಬ್ಯಾಂಕ್ ಆಫ್ ಬರೋಡಾದಲ್ಲಿ ಕೆಲಸ ಮಾಡುತ್ತಿದ್ದ.
ಇನ್ನು ಶಂಕರ್ ಮಂಡ್ಯದ ಗ್ರಾಮವೊಂದರಲ್ಲಿ ಯಲ್ಲಮ್ಮದೇವಿ ದೇವಾಲಯವನ್ನು ನಿರ್ಮಿಸಿದ್ದರು. ಮೂರನೇ ಶ್ರಾವಣ ಶನಿವಾರ ಪತ್ನಿ, ಮಕ್ಕಳ ಸಮೇತ ಬಂದು ಪೂಜೆ ಸಲ್ಲಿಸಿ ಹೋಗಿದ್ದರು.

























Discussion about this post