ಚಿಕ್ಕಬಳ್ಳಾಪುರ: ಗೋವಿಂದಪ್ಪನ ಪತ್ನಿ ಸುಮಿತ್ರಾ ಅಕ್ರಮ ಸಂಬಂಧ ಹೊಂದಿದ್ದು, ಇದಕ್ಕೆ ಅಡ್ಡಿಯಾಗುವ ಪತಿ ಮೇಲೆ ಸುಪಾರಿ ಕೊಟ್ಟಿದ್ದಳು. ಸುಮಿತ್ರಾ ತನ್ನ ಪ್ರಿಯಕರನಿಗೆ ಲೋಡೆಡ್ ಗನ್ ಸಹ ನೀಡಿ ಕಿಲ್ಲಿಂಗ್ ಸಕ್ಸಸ್ ಮಾಡಲು ಹೇಳಿದ್ದಳು.
ಪ್ರಿಯತಮ ಮುನಿಕೃಷ್ಣ ತನ್ನ ಪ್ರಿಯತಮೆಯ ಮಾತಿನಂತೆ ನಾಲ್ಕು ಮಂದಿಯ ಜೊತೆಗೆ ಡೀಲ್ ಕುದುರಿಸಿಕೊಂಡು ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಗೋವಿಂದಪ್ಪನ ಪತ್ನಿ ಸುಮಿತ್ರಾ ೨ ಲಕ್ಷ ರೂಪಾಯಿಗೆ ಪ್ರಿಯಕರನ ಸೋದರನಿಗೆ ಸುಪಾರಿ ನೀಡಿದ್ದಳು.
ಹತ್ಯೆಗಾಗಿ ಮಸಲ್ ಲೊಡೆಡ್ ಗನ್ ಬಳಸಿದ್ದರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಚಾವ್ ಆಗಿದ್ದ ಗೋವಿಂದಪ್ಪ ಪೊಲೀಸರಿಗೆ ದೂರು ನೀಡಿದ್ದ. ಶಿಡ್ಲಘಟ್ಟ ಪೊಲೀಸರು ತನಿಖೆ ನಡೆಸಿದ್ದು ಪತ್ನಿ ಸೇರಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಮುನಿಕೃಷ್ಣನಿಗೆ ಆತನ ಸಹೋದರ ಕಿಟ್ಟಿ ಅಲಿಯಾಸ್ ರಾಮಕೃಷ್ಣ, ಹರೀಶ, ಪ್ರವೀಣ್ ಮತ್ತು ಮುರುಳಿ ಸಹಕಾರ ನೀಡಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

























Discussion about this post