ಬೆಂಗಳೂರು: ಡಾಕ್ಟರ್ ಬದಲು ನರ್ಸ್ ಗಳು ಗರ್ಭಿಣಿಯೊಬ್ಬರಿಗೆ ಹೆರಿಗೆ ಮಾಡಿಸಿದ್ದರ ಫಲವಾಗಿ ಗಂಡು ಮಗು ಸಾವನ್ನಪ್ಪಿದ ಘಟನೆ ನಡೆದಿದೆ. ಕೋಣನಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಏನು ಮಾಡ್ತಿದ್ದಾರೆ ಅಂತ ಜನ ರೊಚ್ಚಿಗೆದ್ದಿದಾರೆ.
ಡಾಕ್ಟರ್ ಇಲ್ಲದೆ ನರ್ಸ್ ಗಳೇ ಡೆಲಿವರಿ ಮಾಡಿಸಿದ್ದರಿಂದಲೇ ಮಗು ಸತ್ತಿದೆ ಅಂತ ಮಗು ಕಳೆದುಕೊಂಡ ತಾಯಿ ಪವಿತ್ರ ಮತ್ತು ಆಕೆಯ ಸಂಬಂಧಿಕರು ದೂರಿದ್ದಾರೆ. ದೊಡ್ಡಕಲ್ಲಸಂದ್ರದಲ್ಲಿನ ತಾಯಿ ಮನೆಯಲ್ಲಿ ವಾಸವಿದ್ದ ಪವಿತ್ರ ಕೋಣನಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಿಸುತ್ತಿದ್ದ ಕಾರಣ ಅಲ್ಲೇ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಇಲ್ಲದ ಕಾರಣ ನರ್ಸ್ ಗಳೇ ಪವಿತ್ರ ಅವರನ್ನು ದಾಖಲು ಮಾಡಿಕೊಂಡು ಹೆರಿಗೆ ಮಾಡಿಸಿದ್ದರು ಎನ್ನಲಾಗಿದೆ.
ಹೆರಿಗೆ ನೋವು ಬೆಳಿಗ್ಗೆ ೪-ರಿಂದ ೪-೩೦ರ ವೇಳೆಗೆ ಬಂದಿದ್ದು, ವೈದ್ಯರು ಇಲ್ಲದ ಕಾರಣ ನರ್ಸ್ ಗಳೇ ಹೆರಿಗೆ ಮಾಡಿಸಿದ್ದಾರೆ. ಮಗುವಿನ ತಲೆ ಮೊದಲು ಹೊರಬಂದು ಕಟ್ ಆಗಿ ಮಗು ಸತ್ತುಹೋಗಿದೆ ಎನ್ನಲಾಗಿದೆ. ನುರಿತ ವೈದ್ಯರು ಇಲ್ಲಿ ಹೆರಿಗೆ ಮಾಡಿಸಿದ್ದರೆ ಮಗು ಉಳಿಯುತ್ತಿತ್ತು ಎಂದು ಸಂಬಂಧಿಕರು ಆರೋಪಿಸಿದ್ದಾರೆ. ತಾಯಿ ಪವಿತ್ರ ಅವರು ಮಗು ಕಳೆದುಕೊಂಡು ನೋವು ತಿನ್ನುತ್ತಿದ್ದಾರೆ.

























Discussion about this post