- ಕೊಲೆ ಮಾಡಿ ಶವ ಇದೆ ಅಂತ ಪೋನ್ ಮಾಡಿದ್ದ ಆರೋಪಿ
- ತಲೆ ಮಾಯ ಮಾಡಿ ತಲೆ ಮರೆಸಿಕೊಂಡಿದ್ದ
- ಮೂರು ಮಹಿಳೆಯರನ್ನ ಮುಗಿಸಿದ್ದ ಕೊಲೆಗಡುಕ
ಕೋಲಾರ: ಮಹಿಳೆಯ ಕೊಲೆ ಮಾಡಿ ತಲೆಯೊಂದಿಗೆ ನಾಪತ್ತೆಯಾಗಿದ್ದ ಆರೋಪಿ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಬೇತಮಂಗಲ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆನ್ನಟ್ಟಿ ಹಿಡಿದಿದ್ದಾರೆ.
ಕೋಲಾರದ ಕೆಜಿಎಫ್ ತಾಲೂಕಿನ ಪಾಪೇನಹಳ್ಳಿ ಗ್ರಾಮದಲ್ಲಿ ಮೇ 4ರಂದು ಭೀಕರವಾಗಿ ತಲೆ ಕಡಿದು ಕೊಲೆ ಮಾಡಲಾಗಿತ್ತು. ಇದೆ ಗ್ರಾಮದ ಮಹೇಶ್ ಎಂಬುವವರ ಜಮೀನಿನಲ್ಲಿ ಶವವೊಂದು ಕೈ ಮಾತ್ರ ಮಣ್ಣಿನಿಂದ ಹೊರಕ್ಕೆ ಕಾಣುವಂತೆ ಮುಚ್ಚಲಾಗಿತ್ತು. ತನಿಖೆ ನಡೆಸಲು ಮಹಿಳೆಯ ಶವ, ಹಾಗೂ ತಲೆ ಇಲ್ಲದ ಶವ ಎಂದು ಬಹಿರಂಗವಾಗಿತ್ತು.
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಪಾಪೇನಹಳ್ಳಿ ಗ್ರಾಮದ ಯಶೋದಮ್ಮ ಎಂಬಾಕೆಯೆ ಕೊಲೆಯಾದ ಮಹಿಳೆ ಹಾಗೂ ಗ್ರಾಮದ ರತ್ನಪ್ಪ ಕೊಲೆ ಮಾಡಿದವನು ಎಂದು ಪತ್ತೆ ಹಚ್ಚಿದ್ದರು. ಈ ಹಿಂದೆ ಇಬ್ಬರು ಮಹಿಳೆಯರ ಕೊಲೆ ಕೃತ್ಯದಲ್ಲಿಯೂ ಭಾಗಿಯಾಗಿದ್ದ ರತ್ನಪ್ಪ ಒಂದು ರೀತಿಯ ಸೈಕೋ ಆಗಿದ್ದ.
ಮಹಿಳೆಯರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುವುದು ಇವನ ಸೈಕೋತನವಾಗಿದ್ದು, ಕೊಲೆ ಮಾಡಿ ತನ್ನ ತಮ್ಮ ಮಹೇಶ್ ಮೇಲೆಯೇ ಆರೋಪ ಬಂದರೆ ನಾನು ಜಮೀನು ಅನುಭವಿಸಿಕೊಂಡು ಇರಬಹುದು ಎಂಬ ಲೆಕ್ಕಾಚಾರ ಹಾಕಿದ್ದ. ಆದರೆ ಈಗ ಮೂರನೆ ಕೊಲೆಯ ಆರೋಪದಲ್ಲಿ ಜೈಲುಪಾಲು ಆಗಿದ್ದಾನೆ.

























Discussion about this post