ಚಿಕ್ಕಮಗಳೂರು: ಕೆರೆಗೆ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಘಟನೆ ನಗರದ ಹೊರ ವಲಯದ ಕೆಂಪನಹಳ್ಳಿ ಸಮೀಪದ ಚಂದ್ರಕಟ್ಟೆಯಲ್ಲಿ ನಡೆದಿದೆ.
ಮೃತ ಬಾಲಕನನ್ನು ಲಕ್ಯಾ ಗ್ರಾಮದ ಹುಲಿಯಪ್ಪನವರ ಮಗ ಸುಹಾಸ್ ಎಂದು ಗುರುತಿಸಲಾಗಿದೆ. ಕೆಂಪನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೬ ನೇತರಗತಿಯಲ್ಲಿ ಸುಹಾನ್ ವಿದ್ಯಾಭ್ಯಾಸ ಮಾಡುತ್ತಿದ್ದ. ಶಾಲೆಗೆಂದು ತೆರಳಿ ಸುಹಾನ್ ಸೇರಿದಂತೆ ಮೂವರು ಬಾಲಕರು ಈಜಲು ಕೆರೆಗೆ ಹೋಗಿದ್ದರು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದವರು, ಹಾಗೂ ಸ್ಥಳೀಯ ಈಜುಗಾರರು ಶೋಧ ನಡೆಸಿ ಬಾಲಕನ ಶವನ್ನು ಹೊರತೆಗೆಯಲಾಗಿದೆ. ಕೆರೆದಂಡೆಯಲ್ಲಿ ಭಾರೀ ಜನಸ್ತೋಮ ಸೇರಿತ್ತು. ಘೋರ ಘಟನೆ ಸಂಬAಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

























Discussion about this post