ಬೆಂಗಳೂರು (ಕನ್ನಡನಾಡಿ ಸುದ್ದಿಜಾಲ): ನೂತನ ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಪಕ್ಷದಲ್ಲಿ ಭಿನ್ನಮತ ಆಸ್ಪೋಟವಾಗಿದ್ದು, ಯಡಿಯೂರಪ್ಪನವರ ಬೆಂಬಲಿಗರಿಗೆ ಮಂತ್ರಿಮಂಡಲದಲ್ಲಿ ಸ್ಥಾನ ಲಭಿಸದ ಕಾರಣ ಈಗಾಗಲೇ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಿಡಿ ಕಾರಿದ್ದಾರೆ. ಮಂತ್ರಿಯಾಗುವ ಕನಸು ಹೊತ್ತಿದ್ದ ಬಿಜೆಪಿ ಪಕ್ಷದ ಸದಸ್ಯರಲ್ಲಿ ಕೆಲವರು ನೇರವಾಗಿ ಮಾಧ್ಯಮದ ಎದುರು ತಮ್ಮ ಬೇಗುದಿ ಹೊರಹಾಕಿದ್ದಾರೆ.
ಬೆಳ್ಳಿ ಪ್ರಕಾಶ್ ಅವರು ಇದೇ ಸಂದರ್ಭದಲ್ಲಿ ಮಾಧ್ಯಮ ದ ಎದುರು ಮಾತನಾಡಿದ್ದು ತಮ್ಮ ಮನಸಿನ ಕಸಿವಿಸಿ ಹೊರಹಾಕಿದ್ದಾರೆ. ಸಿ.ಟಿ ರವಿ ಇಡೀ ರಾಷ್ಟ್ರದ ಮಹಾಮಂತ್ರಿಯಾಗಿದ್ದಾರೆ ಎಂದು ವ್ಯಂಗ್ಯ ನುಡಿದಿದ್ದಾರೆ. ಇಡೀ ಜಿಲ್ಲೆಗೆ ಯಾವುದೇ ಕ್ಷಣದಲ್ಲಿ ಏನಾದರೂ ಘಟಿಸಬಹುದು, ಸಿ.ಟಿ. ರವಿ ಜಿಲ್ಲೆ, ರಾಜ್ಯ, ರಾಷ್ಟ್ರದ ಕುರಿತು ಸಮಗ್ರ ಚಿಂತನೆ ನಡೆಸುತ್ತಾರೆ, ಹೀಗಾಗಿ ಸಿ.ಟಿ.ರವಿ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗಳಾಗಿದ್ದಾರೆ ಎಂದು ಕುಹಕ ಪರೋಕ್ಷವಾಗಿ ಹಾಡಿ ಹೊಗಳಿದ್ದಾರೆ.
ಕಡೂರು ತಾಲ್ಲೂಕಿನ ಅಯ್ಯನಕೆರೆಗೆ ಬಾಗಿನ ಅರ್ಪಿಸಿದ ನಂತರ ಬೆಳ್ಳಿ ಪ್ರಕಾಶ್ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದರು. ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನಾಡಿದ ಬೆಳ್ಳಿ ಪ್ರಕಾಶ್ ಸಿ.ಟಿ.ರವಿಯ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರೋಕ್ಷವಾಗಿ ಜಿಲ್ಲೆಗೆ ಯಾವುದೇ ಅನ್ಯಾಯವಾಗಿಲ್ಲ, ಸಂಪುಟ ರಚನೆಯಲ್ಲಿ ಚಿಕ್ಕಮಗಳೂರನ್ನು ಕಡೆಗಣಿಸಿಲ್ಲ ಎಂದಿದ್ದಾರೆ.
ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಬೆಂಬಲಿಗರು ಸಹ ಯಡಿಯೂರಪ್ಪನವರ ನಿವಾಸದ ಎದುರೇ ಪ್ರತಿರೋಧ ವ್ಯಕ್ತಪಡಿಸಿದ್ದರು.

























Discussion about this post