ಚಿಕ್ಕಮಗಳೂರು: ಕಸ್ತೂರಬಾ ಆಶ್ರಮದ ಶಾಖೆ ಇರುವ ಗ್ರಾಮವಾದ ಭಾರತಿ ಬೈಲಿಯಲ್ಲಿ ಹುಲಿಯೊಂದು ದಾಳಿ ನಡೆಸಿ ಹಸುವನ್ನು ಕೊಂದುಹಾಕಿದೆ. ಗ್ರಾಮದ ಅನಸೂಯ ಎಂಬುವರಿಗೆ ಸೇರಿದ ಹಸು ಇದಾಗಿದ್ದು, ಹತ್ತು ದಿನದ ಹಿಂದಷ್ಟೇ ಕರುವಿಗೆ ಜನ್ಮ ನೀಡಿತ್ತು ಎನ್ನಲಾಗಿದೆ.
ಮೂಡಿಗೆರೆ ತಾಲೂಕಿನ ಬಳಿ ಇರುವ ಭಾರತಿ ಬೈಲು ಮಲೆನಾಡಿನ ಭಾಗವಾಗಿದ್ದು, ಇದೇ ರೀತಿ ಜಾನುವಾರುಗಳು ಹಲವು ಭಾರಿ ಹುಲಿ ದಾಳಿಗೆ ಸತ್ತುಹೋಗಿದೆ. ಆದರೆ ಹಸುಗಳನ್ನೇ ನಂಬಿಕೊಂಡು ಹೈನುಗಾರಿಕೆ ಮಾಡುವವರಿಗೆ ಇದರಿಂದ ಬಹಳ ಸಮಸ್ಯೆ ಆಗಿದೆ. ಅರಣ್ಯ ಇಲಾಖೆ ಹುಲಿ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಹಿಂದಿದೆ ಎಂದು ಸ್ಥಳೀಯ ಗ್ರಾಮಸ್ಥರು ದೂರಿದ್ದಾರೆ.

























Discussion about this post