International News: ಟ್ರಿಪ್‌ಗೆ ಹೋದಾಗ, ಅಥವಾ ಎಲ್ಲಿಯಾದರೂ ಹೋದಾಗ, ಆ ಊರಿನಲ್ಲಿ ಸಂಬಂಧಿಕರ ಮನೆ ಇಲ್ಲದಿದ್ದಾಗ, ಉಳಿದುಕೊಳ್ಳುವುದು ಎಲ್ಲಿ ಅಂತಾ ಎಲ್ಲರಿಗೂ ಯೋಚನೆ ಬರುತ್ತದೆ.
ಹಾಗಾಗಿ ಕೆಲವರು ಹೊಟೇಲ್‌ನಲ್ಲಿ ಸ್ವಲ್ಪ ಹೆಚ್ಚು ದುಡ್ಡು ಖರ್ಚಾದರೂ ಪರವಾಗಿಲ್ಲ. ಒಳ್ಳೆ ನಿದ್ದೆ ಬಂದ್ರೆ ಸಾಕು ಅಂತಾ, ಹೆಚ್ಚು ದುಡ್ಡು ಕೊಟ್ಟು ಕಂಫರ್ಟೇಬಲ್ ಆಗಿರೋ ರೂಂ ಬುಕ್ ಮಾಡೋಕ್ಕೆ ರೆಡಿಯಾಗಿರ್ತಾರೆ.
ಆದರೆ ಇಲ್ಲೋರ್ವ ಮಹಿಳೆ ಬರೀ ಒಂದು ದಿನಕ್ಕೆ ಹೊಟೇಲ್ ವೊಂದರಲ್ಲಿ 17 ಸಾವಿರ ರೂಪಾಯಿ ಕೊಟ್ಟು, ರೂಂ ಬಾಡಿಗೆಗೆ ಪಡೆದಿದ್ದರು. ಆದರೆ ರಾತ್ರಿ ಅವರು ಮಲಗಿದ್ದಾಗ, ತಿಗಣೆ ಕೊಟ್ಟ ಕಾಟಕ್ಕೆ ಬೆಳಿಗ್ಗೆ ಸುಸ್ತೋ ಸುಸ್ತು.
ಅವರು ಒಂದು ಎರಡೋ ತಿಗಣೆ ಅಲ್ಲದೇ, 200ಕ್ಕೂ ಹೆಚ್ಚು ತಿಗಣೆ ಕಾಟ ಆ ಕಾಸ್ಟ್ಲಿ ಹೊಟೇಲ್ ರೂಂನಲ್ಲಿ ಇತ್ತಂತೆ. ಯುಕೆಯ ಕ್ಯಾಲಿಪ್ಸೋ ಹೊಟೇಲ್‌ನಲ್ಲಿ ಈ ಘಟನೆ ನಡೆದಿದ್ದು, ಶರೋನ್ ಹಸ್ಲಾಮ್ (65) ಎಂಬ ಮಹಿಳೆ ತನ್ನ ಸ್ನೇಹಿತೆಯ ಹುಟ್ಟುಹಬ್ಬದ ಪಾರ್ಟಿಗಾಗಿ ಬಂದು, ಆ ಹೊಟೇಲ್‌ನಲ್ಲಿ ತಂಗಿದ್ದರು.
ಮೊದಲು ಹೊಟೇಲ್ ರೂಂ ಪ್ರವೇಶಿಸಿದಾಗ, ರೂಂ ಸ್ವಚ್ಛವಾಗಿತ್ತು. ಬೆಡ್ ಎಲ್ಲ ನೀಟ್ ಆಗಿಯೇ ಇತ್ತಂತೆ. ಆದರೆ ರಾತ್ರಿ ಮಲಗಿ ಬೆಳಿಗ್ಗೆ ಏಳುವಾಗ, ಇಡೀ ಮೈ ತುಂಬ ಗುಳ್ಳೆಗಳಾಗಿತ್ತು. ಮತ್ತು ಬೆಡ್ ಮೇಲೆ ಅಲ್ಲಲ್ಲಿ ರಕ್ತದ ಕಲೆಗಳು ಇತ್ತು. ಬಳಿಕ ನಾನು ತಿಗಣೆ ನೋಡಿದಾಗ, ಸತ್ಯಾಂಶ ನನಗೆ ಅರಿವಾಯಿತು ಅಂತಾ ಶರೋನ್ ಹೇಳಿದ್ದಾರೆ.
ಇನ್ನು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಹೊಟೇಲ್ ತನ್ನ ತಪ್ಪಿಗಾಗಿ, ಮಹಿಳೆ ಕೊಟ್ಟಿದ್ದ ಬಾಡಿಗೆಯೊಂದಿಗೆ 8ವರೆ ಸಾವಿರ ರೂಪಾಯಿ ಪರಿಹಾರ ಹಣವಾಗಿ ನೀಡಿದೆ.
Sports News: ತಮ್ಮ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಹಾರ್ದಿಕ್ ಪತ್ನಿ ನತಾಶಾ
Discussion about this post