Bollywood News: ಬಾಲಿವುಡ್‌ನ ಕೆಲ ನಟಿಯರಿಂದ ಸಿನಿಮಾ ನಿರ್ಮಾಣದ ವೆಚ್ಚ ಹೆಚ್ಚಾಗುತ್ತಿದೆ ಎಂದು ನಿರ್ಮಾಪಕರು ಆಕ್ರೋಶ ಹೊರಹಾಕಿದ್ದಾರೆ. ಕೆಲ ನಟಿಯರು ತಮ್ಮೊಂದಿಗೆ ಕೆಲವರನ್ನು ಕರೆತಂದು ಅವರ ಖರ್ಚನ್ನು ಕೂಡ ನಿರ್ಮಾಪಕರ ತಲೆಗೆ ಕಟ್ಟುತ್ತಾರೆಂದು ಆರೋಪಿಸಲಾಗಿದೆ.
ಫ್ಯಾಷನ್ ಡಿಸೈನರ್, ಕೇಶ ವಿನ್ಯಾಸಕ, ಮ್ಯಾನೇಜರ್, ಸಹಾಯಕರು, ಡಯಟಿಶಿಯನ್ ಹೀಗೆ ಸಹಾಯಕರ ದಂಡನ್ನೇ ತಮ್ಮೊಂದಿಗೆ ಕರೆತಂದು, ಅವರ ಖರ್ಚು ವೆಚ್ಚಗಳ ಲೀಸ್ಟ್‌ನ್ನು ನಿರ್ಮಾಪಕರಿಗೆ ಕೊಡುತ್ತಿದ್ದಾರೆ. ಹೀಗಾಗಿ ಕೆಲವು ನಟ, ನಟಿಯರಿಂದ ನಿರ್ಮಾಪಕರಿಗೆ ಖರ್ಚು ಹೆಚ್ಚಾಗುತ್ತಿದೆ. ಸಿನಿಮಾಗಾಗಿ ಅಂದಾಜು ಮೊತ್ತವನ್ನು ಇಟ್ಟಿದ್ದರೂ ಕೂಡ, ಈ ರೀತಿ ದುಡ್ಡು ವ್ಯರ್ಥವಾಗುತ್ತಿದೆ ಎಂದು ನಿರ್ಮಾಪಕರ ಸಂಘದಲ್ಲಿ ಆರೋಪಿಸಲಾಗಿದೆ.
ಇನ್ನು ಬರೀ ನಟಿಯರಷ್ಟೇ ಅಲ್ಲದೇ, ಕೆಲ ನಟರು ತಮ್ಮೊಂದಿಗೆ 10-20 ಜನರನ್ನು ಕರೆತರುತ್ತಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಇನ್ನು ಮುಂದೆ ಯಾವುದೇ ನಟ-ನಟಿಯರು ಈ ರೀತಿ ಬೇರೆಯವರ ವೆಚ್ಚವನ್ನು ನಿರ್ಮಾಪಕರ ಮೇಲೆ ಹಾಕಿದರೆ, ಅದನ್ನು ಸ್ವೀಕರಿಸದೇ, ನಟ-ನಟಿಯರೊಂದಿಗೆ ಬಂದವರ ವೆಚ್ಚವನ್ನು ಸ್ವತಃ ನಟ-ನಟಿಯರೇ ಭರಿಸಬೇಕು ಎಂಬ ನಿಯಮ ತರುತ್ತೇವೆ ಎಂದು ನಿರ್ಮಾಪಕರ ಸಂಘ ತೀರ್ಮಾನಿಸಿದೆ.
ಮೊದಲೆಲ್ಲ ಬರೀ ಬಾಲಿವುಡ್‌ನಲ್ಲಿ ಅಷ್ಟೇ ಈ ರೀತಿ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಸೌತ್ ನಟಿಯರು ಕೂಡ ತಮ್ಮೊಂದಿಗೆ ಬಂದವರ ಟಿಎ-ಡಿಎಯನ್ನು ನಿರ್ಮಾಪಕರ ಮೇಲೆ ಭರಿಸುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದೆ.
ಅಸಭ್ಯ ವರ್ತನೆಯಲ್ಲಿ ಸ್ತ್ರೀಯರು ಪುರುಷರನ್ನು ಮೀರಿಸುತ್ತಾರೆ: ಕೆಟ್ಟ ಘಟನೆ ನೆನಪಿಸಿಕೊಂಡ ನಟಿ
Sports News: ತಮ್ಮ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಹಾರ್ದಿಕ್ ಪತ್ನಿ ನತಾಶಾ
ಆನ್‌ಲೈನ್‌ನಲ್ಲಿ ಭೇಟಿಯಾದ ಯುವತಿಯನ್ನು ವಿವಾಹವಾದ ಯುವಕ, ಬಳಿಕ ಹೊರಬಿತ್ತು ವಿಚಿತ್ರ ಸತ್ಯ
Discussion about this post