ಚಿಕ್ಕಮಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆಂಗಾವಲು ವಾಹನ ಕಾಫಿ ತೋಟದ ಒಳಗೆ ನುಗ್ಗಿ ಅಪಘಾತ ಸಂಭವಿಸಿರುವ ಘಟನೆ ತಾಲ್ಲೂಕಿನ ಮಲ್ಲೇನಹಳ್ಳಿ ಬಳಿ ನಡೆದಿದೆ.
ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಗ್ರಾಮ ಸ್ವರಾಜ್ ಸಮಾವೇಶ ಮುಗಿಸಿ ಶಿವಮೊಗ್ಗಕ್ಕೆ ತೆರಳುವಾಗ ಹೋಗುವಾಗ ಮಲ್ಲೇನಹಳ್ಳಿ ಸಮೀಪದ ಕಾಫಿ ತೋಟದ ಒಳಗೆ ಬೊಲೆರೋ ವಾಹನ ನುಗ್ಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಲ್ಲಿ ಇಬ್ಬರು ಎಸ್ಕಾರ್ಟ್ ಸಿಬ್ಬಂದಿಗಳಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಅಫಘಾತವಾದ ತಕ್ಷಣ ಕಾರಿನಿಂದ ಸಿದ್ದರಾಮಯ್ಯ ಹಾಗೂ ಡಿ.ಕೆಶಿವಕುಮಾರ್ ಇಳಿದು ಪರಿಶೀಲಿಸಿದ್ದು, ಗಾಯಾಳುಗಳನ್ನು ಮುಖಂಡರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
Convoy crash

























Discussion about this post