ಶಾಂತವಾಗಿರುವ ರಾಜದಾನಿ ಬೆಂಗಳೂರಿನಲ್ಲಿ ಐಸಿಸ್ ಉಗ್ರರ ಹಾವಳಿ ಶುರುವಾಗಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಎನ ಐಎ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಇಬ್ಬರು ಐಸಿಸ್ ಉಗ್ರು ಸೇರಿದಂತೆ ನಾಲ್ಕು ಜನರನ್ನು ಬಂಧ ನಮ್ಮ ಒಳಪಡಿಸಿದ್ದಾರೆ.
ಬೆಂಗಳೂರಿನ ವಾಸಿ ಶಂಕರ್ ವೆಂಕಟೇಶ್ ಅಲಿಯಾಸ್ ಪೆರುಮಾಳ್, ಮಂಗಳೂರಿನ ಅಮರ್ ಅಬ್ದುಲ್ ರೆಹೆಮಾನ ಸೇರಿದಂತೆ ನಲ್ಕು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಇವರು ಐಸಿಸ್ ಜೊತೆಗೆ ಸಕ್ರಿಯರಾಗಿದ್ದರು ಜೊತೆಗೆ ಈಗಾಗಲೇ ಸಕ್ರಿಯವಾಗಿದ್ದ ಕೇರಳದ ಮಹಮ್ಮದ್ ಅಮೀನ್ ಎಂಬಾತನ ಜೊತೆಗೆ ಗೆಳೆತನ ನಡೆಸಿದ್ದರು. ಅಲ್ಲದೆ ಜಿಹಾದಿ ಕೃತ್ಯಗಳಿಗೆ ಸಾಮಾಜಿಕ ತಾಣಗಳನ್ನು ನಕಲಿ ಹೆಸರುಗಳಲ್ಲಿ ಬಳಸಿಕೊಂಡಿದ್ದರು ಎನ್ನಲಾಗಿದೆ.
ಧಾಳಿ ನಡೆಸಿದ ವೇಳೆ ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್, ಪರೆನ್ ಡ್ರೈವ್, ಹಲವಾರು ನರಟ್ ವರ್ಕ್ ನ ಸಿಮ್ ಗಳು ಲಭ್ಯವಾಗಿದೆ. ಇದರ ಜೊತೆಗೆ ಎಲೆಕ್ಟ್ರಾನಿಕ್ ಗೂಡ್ಸ್ ಸಹ ವಶಕ್ಕೆ ತೆಗೆದುಕೊಂಡಿದ್ದಾರೆ ಅಧಿಕಾರಿಗಳು.
ಮಾರ್ಚ್ ಐದರಂದು ಇದೇ ಸಂಬಂಧ ಸುಮೋಟೋ ಕೇಸ್ ದಾಖಲಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಕರ್ನಾಟಕ ರಾಜ್ಯದ ಇನ್ನೂ ಮೂರು ಸ್ಥಳಗಳಲ್ಲಿ ಎನ್ ಐ ಎ ತನ್ನ ಶೋಧ ನಡೆಸಿದೆ ಎನ್ನಲಾಗಿದೆ.

























Discussion about this post