ಚಿಕ್ಕಮಗಳೂರು: ಕೊಲೆ ಪ್ರಕರಣವೊಂದರಲ್ಲಿ ಹರೀಶ್ ಕುಮಾರ್ ಗೆ ಜೀವಾವಧಿ ಶಿಕ್ಷೆ, ಎರಡು ಲಕ್ಷ ದಂಡವನ್ನು ಎರಡನೇ ಅಧಿಕ ಜಿಲ್ಲಾ-ಸೆಷನ್ಸ್ ಕೋರ್ಟು ವಿಧಿಸಿದೆ.
ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆಯ ಹೊಸಪುರದ ಸುನಿಲ್ (೨೮) ಅಲಿಯಾಸ್ ಎಷ್. ಆರ್. ಹರೀಶ್ ಕುಮಾರ್ ೨೦೧೫ರ ಆ.೧೯ರಂದು ನಾಗೇಶ್ ಕೊಲೆ ನಡೆಸಿದ್ದರು ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮನೆಯ ಜಾಗದ ವಿಚಾರಕ್ಕೆ ಸುನಿಲ್ ಮತ್ತು ನಾಗೇಶ್ ಜಟಾಪಟಿ ನಡೆಸಿದ್ದರು. ಮನೆ ಹತ್ತಿರ ಬಂದು ನಾಗೇಶ್ ಜಗಳ ಮಾಡಿದ್ದಕ್ಕೆ ಕೋಪ ಮಾಡಿಕೊಂಡು ಸುನಿಲ್ ಕುತ್ತಿಗೆಗೆ ಕತ್ತಿಯಿಂದ ಹೊಡೆದು ಕೊಲೆ ನಡೆಸಿದ್ದ ಎಂಬುದು ತನಿಖೆ ವೇಳೆ ಬಯಲಿಗೆ ಬಂದಿತ್ತು.
ಇನ್ಸ್ಪೆಕ್ಟರ್ ವಿನೋದ್ ಭಟ್ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯುಟರ್ ಬಿ.ಎಸ್. ಮಮತಾವಾದ ಮಂಡಿಸಿದ್ದರು. ನ್ಯಾಯಾದೀಶರಾದ ಮಂಜುನಾಥ್ ಅಗ್ರೇಶಿ ಈ ಆದೇಶ ನೀಡಿದ್ದಾರೆ. ಮೃತರ ಪತ್ನಿಗೆ ದಂಡದ ಮೊತ್ತವನ್ನು ನೀಡಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

























Discussion about this post